ಪೈಪೋಟಿ ಹೆಚ್ಚಿಸಿದ ಸ್ಕೋಡಾ; ಭಾರತದಲ್ಲಿ ಕುಶಾಕ್ SUV ಕಾರು ಅನಾವರಣ!
ಕಣ್ಸೆಳೆಯುವ ವಿನ್ಯಾಸ, ವಿಶಾಲ ಸ್ಥಳಾವಕಾಶ, ಅಸಾಧಾರಣ ಬಗೆಯ ಆರಾಮ, ಗಮನಾರ್ಹ ಸ್ವರೂಪದ ಸುರಕ್ಷತೆ ಸೌಲಭ್ಯಗಳು, ಅತ್ಯಾಧುನಿಕ ಮಾಹಿತಿ ರಂಜನೆ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿ ತಯಾರಿಸಿರುವ ದಕ್ಷ ಟಿಎಸ್‍ಐ ಎಂಜಿನ್ ಸಾಮಥ್ರ್ಯ ಹೊಂದಿರುವ ಸ್ಕೋಡಾ ಕುಶಾಕ್ ಕಾರು ಅನಾವರಣಗೊಂಡಿದೆ.
ಜಾಗತಿಕ ಮಾರುಕಟ್ಟೆಗೆ SUV ಹೊಸ ಬ್ರ್ಯಾಂಡ್ ಸ್ಕೋಡಾ ಕುಶಾಕ್ ಅನಾವರಣಗೊಂಡಿದೆ. ಭಾರತದಲ್ಲಿ ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ಮಧ್ಯಮ ಗಾತ್ರದ SUV ವಲಯದ ಗ್ರಾಹಕರ ಮನಗೆಲ್ಲಲು ಹೊರಟಿದೆ ಸ್ಕೋಡಾ ಮಹತ್ವದ ಹೆಜ್ಜೆ ಇಟ್ಟಿದೆ. ಸ್ಕೋಡಾ ಕುಶಾಕ್ ಭಾರತ್ 2.0 ಯೋಜನೆಯ ಅಂಗವಾಗಿ ತಯಾರಿಸಿದ ಮೊದಲ ಕಾರ್ ಆಗಿದೆ.
ಸ್ಕೋಡಾ ಆಟೊದ ಮುಂಚೂಣಿ ಹೊಣೆಗಾರಿಕೆಯಡಿ, ಭಾರತ ಉಪಖಂಡದಲ್ಲಿ ದೀರ್ಘಾವಧಿಯಲ್ಲಿ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ವಹಿವಾಟು ಬಲಪಡಿಸುವ ಭಾರಿ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲು ಫೋಕ್ಸ್‍ವ್ಯಾಗನ್ ಗ್ರೂಪ್ ರೂ 8,658 ಕೋಟಿ ಹೂಡಿಕೆ ಮಾಡಲಿದೆ.
ಭಾರತದ ಮಾರುಕಟ್ಟೆಗೆಂದೇ ವಿಶೇಷವಾಗಿ ಅಳವಡಿಸಿಕೊಂಡಿರುವ ಮಾಡ್ಯುಲರ್ MQB ಪ್ಲಾಟ್‍ಫಾರ್ಮ್ ರೂಪಾಂತರದ MQB-AO-N ಆಧರಿಸಿರುವ ಸ್ಕೋಡಾ ಕುಶಾಕ್, ಭಾರತದ ಗ್ರಾಹಕರ ಅಗತ್ಯಗಳನ್ನು ಈಡೇರಿಸುವುದರ ಜತೆಗೆ ಸ್ಕೋಡಾದ ಸಾಂಪ್ರದಾಯಿಕ ಗುಣಲಕ್ಷಣಗಳನ್ನು ಒಂದುಗೂಡಿಸಿದೆ.
ಶಕ್ತಿಯುತ ಮತ್ತು ದಕ್ಷತೆಯ ಟಿಎಸ್‍ಐ ಎಂಜಿನ್, ಗಮನ ಸೆಳೆಯುವ ವಿನ್ಯಾಸದ ಹೆಗ್ಗಳಿಕೆಯ, ಆಧುನಿಕ ಮಾಹಿತಿರಂಜನೆಯ (ಇನ್ಫೊಟೇನ್‍ಮೆಂಟ್ ಸಿಸ್ಟಮ್ಸ್) ಸೌಲಭ್ಯ, ಗರಿಷ್ಠ ಮಟ್ಟದ ಆರಾಮ, ಅತ್ಯಧಿಕ ಸಂಖ್ಯೆಯಲ್ಲಿನ ಸುರಕ್ಷತಾ ಕ್ರಮಗಳು ಈ ಹೊಸ ಬ್ರ್ಯಾಂಡ್‍ನ ಎಸ್‍ಯುವಿ, ಫೋಕ್ಸ್‍ವ್ಯಾಗನ್ ಗ್ರೂಪ್‍ನ ಮಾದರಿ ಪ್ರಚಾರ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ಹೆಚ್ಚು ಸೂಕ್ತವಾಗಿದೆ. ಮುಂಗಡ ಕಾದಿರಿಸುವಿಕೆಯು ಜೂನ್‍ನಲ್ಲಿ ಆರಂಭಗೊಳ್ಳಲಿದೆ. ಜುಲೈನಲ್ಲಿ ಮೊದಲ ಕುಶಾಕ್ ವಿತರಿಸಲಾಗುವುದು.
ಸ್ಕೋಡಾ ಮತ್ತು ಫೋಕ್ಸ್‍ವ್ಯಾಗನ್ ಪಾಲಿಗೆ ಇಂದಿನದು ಅತ್ಯಂತ ಮಹತ್ವದ ದಿನವಾಗಿದೆ. ಸ್ಕೋಡಾ ಕುಶಾಕ್‍ನ ಜಾಗತಿಕ ಅನಾವರಣದೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ನಾವು ನಮ್ಮ ಮಾದರಿ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದೇವೆ. ಸರಿಸುಮಾರು ಎರಡೂವರೆ ವರ್ಷಗಳ ಹಿಂದೆ ಭಾರತದ ಮಾರುಕಟ್ಟೆಯ ಜವಾಬ್ದಾರಿ ವಹಿಸಿಕೊಳ್ಳಲು ಫೋಕ್ಸ್‍ವ್ಯಾಗನ್ ಗ್ರೂಪ್ ನಮ್ಮನ್ನು ಕೇಳಿಕೊಂಡಿದ್ದ ಆದೇಶವನ್ನು ಈಗ ನೆರವೇರಿಸುತ್ತಿದ್ದೇವೆ ಎಂದು ಸ್ಕೋಡಾ ಆಟೊ ಸಿಇಒ ಥಾಮಸ್ ಷೇಫರ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿನ ಇದುವರೆಗಿನ ಸಾಧನೆಗೆ ನಾನು ಗುರ್‍ಪ್ರತಾಪ್ ಬೋಪರೈ ಮತ್ತವರ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಭಾರತ ಉಪಖಂಡದಲ್ಲಿ ನಾವೀಗ ಮಾರುಕಟ್ಟೆಗೆ ಸುಗಮವಾಗಿ ಬಿಡುಗಡೆ ಮಾಡುವ ಮತ್ತು ನಮ್ಮ ಹೊಸ ಮಾದರಿಯನ್ನು ಯಶಸ್ವಿಯಾಗಿ ಆರಂಭಿಸಲು ಸನ್ನದ್ಧರಾಗಿದ್ದೇವೆ. ಭಾರತದಲ್ಲಿನ ಬೆಳವಣಿಗೆ ಸಾಧ್ಯತೆಗಳು ನನಗೆ ಮನವರಿಕೆಯಾಗಿವೆ. ಈ ಅವಕಾಶಗಳಲ್ಲಿನ ಬಹುಪಾಲನ್ನು ಸ್ಕೋಡಾ ಮತ್ತು ಫೋಕ್ಸ್‍ವ್ಯಾಗನ್ ಪಡೆಯುವಂತಾಗಲು ನಾವು ಪ್ರಯತ್ನಿಸಲಿದ್ದೇವೆ ಎಂದಿದ್ದಾರೆ.
ಮಾರುಕಟ್ಟೆಗೆ ಕುಶಾಕ್ ಅನಾವರಣವು ಭಾರತದಲ್ಲಿ ಸ್ಕೋಡಾ ಆಟೊ ಮತ್ತು ಫೋಕ್ಸ್‍ವ್ಯಾಗನ್ ಗ್ರೂಪ್‍ನ ಪಾಲಿಗೆ ಹೊಸ ಆರಂಭವಾಗಿದೆ. ಸ್ಕೋಡಾ ಎಸ್‍ಯುವಿ ಕುಟುಂಬಕ್ಕೆ ಹೊಸ ವಾಹನದ ಸೇರ್ಪಡೆಯು ಭಾವನಾತ್ಮಕ ವಿನ್ಯಾಸ, ಅಪ್ರತಿಮ ಕಾರ್ಯಸಾಧನೆ, ಶ್ರೇಷ್ಠ ತಯಾರಿಕೆ ಗುಣಮಟ್ಟ, ಅನುಕರಣೀಯ ಮೌಲ್ಯ ಪ್ರತಿಪಾದನೆ, ಗಮನಾರ್ಹ ಸುರಕ್ಷತೆ ಮತ್ತು ಹಲವಾರು ಚತುರ ಬಗೆಯ ಸೌಲಭ್ಯಗಳ ಸಮರ್ಥ ಸಂಯೋಜನೆಯ ಎಸ್‍ಯುವಿ ಇದಾಗಿದೆ ಎಂದು ಸ್ಕೋಡಾ ಆಟೊ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಗುರುಪ್ರತಾಪ್ ಬೋಪರೈ ಹೇಳಿದ್ದಾರೆ.
ಭಾರತ್ 2.0 ಯೋಜನೆಯಡಿ ಎಂಕ್ಯುಬಿ ಎ0 ಐಎನ್ ವೇದಿಕೆಯಡಿ ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿದ ಮೊದಲ ಉತ್ಪನ್ನ ಇದಾಗಿದೆ. ನಮ್ಮ ವೈವಿಧ್ಯಮಯ ದೇಶದ ಚೈತನ್ಯದಿಂದ ಪ್ರೇರಣೆ ಪಡೆದಿರುವ ಸ್ಕೋಡಾ ಕುಶಾಕ್, ಜಾಗತಿಕ ಗ್ರಾಹಕರ ಸಂವೇದನೆಗಳನ್ನೂ ಅನುರಣಿಸುತ್ತದೆ. ಸ್ಕೋಡಾ ಕುಶಾಕ್ ಮೂಲಕ ನಾವು ಭಾರತದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಬಹುಬಗೆಯಲ್ಲಿ ಬೆಳವಣಿಗೆ ಕಾಣಲಿರುವ ಮಧ್ಯಮ ಗಾತ್ರದ ಎಸ್‍ಯುವಿಯ ಬೇಡಿಕೆ ಪೂರೈಸಲಿದ್ದೇವೆ ಎಂದಿದ್ದಾರೆ