ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಬೆಲೆ ಕಡಿತ, ಇದೀಗ ಮಾರುತಿ ವ್ಯಾಗನರ್‌ಗಿಂತ ಕಡಿಮೆ!
ಎಂಜಿ ಮೋಟಾರ್ಸ್ ಭಾರತದಲ್ಲಿ ಕಾಮೆಟ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಎಂಜಿ ಕಾಮೆಟ್ ಇವಿ ಕಾರಿನ ಬೆಲೆಯಲ್ಲಿ ಭಾರಿ ಕಡಿತ ಮಾಡಲಾಗಿದೆ. ಮಾರುತಿ ವ್ಯಾಗನಆರ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಕಾಮೆಟ್ ಇವಿ ಕಾರು ಲಭ್ಯವಿದೆ.
ಎಂಜಿ ಮೋಟಾರ್ಸ್ ಭಾರತದಲ್ಲಿ ಕೆಲವೇ ಕೆಲವು ಕಾರುಗಳ ಮೂಲಕ ವಾಹನ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿದೆ. ಇನ್ನು ಎಲೆಕ್ಟ್ರಿಕ್ ಕಾರುಗಳ ಬೈಕಿ ZS ಬಳಿಕ ಸಣ್ಣ ಕಾರಾದ ಎಂಜಿ ಕಾಮೆಟ್ ಇವಿ ಬಿಡುಗಡೆ ಮಾಡಿದೆ.
ಎಂಜಿ ಕಾಮೆಟ್ ಎಲೆಕ್ಟ್ರಿಕ್ ಸಣ್ಣ ಕಾರಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಹೇಳಿ ಮಾಡಿಸಿದ ಕಾರು. ಇದೀಗ ಈ ಕಾರಿನ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಬರೋಬ್ಬರಿ 99,000 ರೂಪಾಯಿ ಇಳಿಕೆಯಾಗಿದೆ.
ಎಂಜಿ ಮೋಟಾರ್ಸ್ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಇದೀಗ 6.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ಈ ಮೂಲಕ ಮಾರಾಟದಲ್ಲಿ ಹೊಸ ದಾಖಲೆ ಬರೆಯಲು ಎಂಜಿ ಸಜ್ಜಾಗಿದೆ.
ಎಂಜಿ ಮೋಟಾರ್ಸ್ ಕಾಮೆಟ್ ಇವಿ ಕಾರು ಬಿಡುಗಡೆಯಾದಾಗ ಆರಂಭಿಕ ಬೆಲೆ 7.98 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು. ಇದೀಗ ಬೆಲೆ ಕಡಿತ ಮಾಡಿರುವ ಎಂಜಿ 6.99 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
ಎಂಜಿ ಮೋಟಾರ್ಸ್ ಕಾಮೆಟ್ ಇವಿ ಕಾರು ಇದೀಗ ಮಾರುತಿ ಸುಜುಕಿ ವ್ಯಾಗನಆರ್ ಟಾಪ್ ಮಾಡೆಲ್ ಕಾರಿಗಿಂತ ಅಗ್ಗವಾಗಿದೆ. ವ್ಯಾಗನರ್ ಟಾಪ್ ಮಾಡೆಲ್ ಕಾರಿನ ಬೆಲೆ 7.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
17.3 kwh ಪ್ಯಾಟರಿ ಪ್ಯಾಕ್ ಹೊಂದಿರುವ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 230 ಕಿಲೋಮೀಟರ್ ಮೈಲೇಜ್ ನೀಡಲಿದೆ.
41.5 BHP ಪವರ್ ಹಾಗೂ 110 NM ಟಾರ್ಕ್ ಸಾಮರ್ಥ್ಯ ಹೊಂದಿರುವ ಎಂಜಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಫೀಚರ್ಸ್ ಹೊಂದಿದೆ. 3.3kwh ಚಾರ್ಚಿಂಗ್ ಮೂಲಕ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 7 ಗಂಟೆ ಸಮಯ ತೆಗೆದುಕೊಳ್ಳಲಿದೆ.
ಕಾಮೆಟ್ ಇವಿ ಸ್ಮಾರ್ಟ್ ಎಲೆಕ್ಟ್ರಿಕ್ ವಾಹನದಲ್ಲಿ ಜಿಯೋ ಡಿಜಿಟಲ್‌ನ ವಾಯ್ಸ್ ಅಸಿಸ್ಟೆಂಟ್ ಸೌಲಭ್ಯವಿದೆ. ಹಿಂದಿ ಮತ್ತು ಇಂಗ್ಲೀಷ್ ಧ್ವನಿ ಸಹಾಯಕ ವ್ಯವಸ್ಥೆ ಇದರಲ್ಲಿದೆ.