ಸೆಪ್ಟೆಂಬರ್‌ನಲ್ಲಿ ಮಾರುತಿ ಕಾರು ಖರೀದಿಸಲು ಮುಗಿಬಿದ್ದ ಜನ, 1 ಮಿಲಿಯನ್ ದಾಖಲೆ!
ಮಾರುತಿ ಸುಜುಕಿ ಭಾರತದ ಅತೀ ದೊಡ್ಡ ಕಾರು ಉತ್ಪಾದಕ ಕಂಪನಿ. ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಹೊಸ ದಾಖಲೆ ಬರೆದಿದೆ. ಬರೋಬ್ಬರಿ 1 ಮಿಲಿಯನ್ ಮಾರುತಿ ಕಾರು ಮಾರಾಟವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲರೂ ಮಾರುತಿ ಕಾರಿಗೆ ಮುಗಿಬಿದ್ದಿದ್ದೇಕೆ?
ಭಾರತದಲ್ಲಿ ಅತೀ ದೊಡ್ಡ ಮಾರುಕಟ್ಟೆ ಪಾಲು ಹೊಂದಿರುವ ಮಾರುತಿ ಸುಜುಕಿ ಕಂಪನಿ, ಕಡಿಮೆ ಬೆಲೆ, ಉತ್ತಮ ಮೈಲೇಜ್, ಕಡಿಮೆ ನಿರ್ವಹಣೆ ವೆಚ್ಚದ ಕಾರುಗಳನ್ನು ನೀಡುತ್ತಾ ಬಂದಿದೆ.
ಆಕರ್ಷಕ ಡಿಸೈನ್, ತಂತ್ರಜ್ಞಾನಗಳಿಂದಲೂ ಮಾರುತಿ ಸುಜುಕಿ ಕಾರು ಅತೀ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದೀಗ ಮಾರುತಿ ಸುಜುಕಿ ಮತ್ತೊಂದು ದಾಖಲೆ ಬರೆದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅತೀ ಹೆಚ್ಚಿನ ಕಾರು ಮಾರಾಟವಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆಯ ಮಾರುತಿ ಸುಜುಕಿ ಕಾರು ಮಾರಾಟವಾಗಿದೆ. ಆಗಸ್ಟ್ ತಿಂಗಳಿಗಿಂತ ಶೇಕಡಾ 2.8 ರಷ್ಟು ಮಾರಾಟದಲ್ಲಿ ಹೆಚ್ಚಳವಾಗಿದೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ 176,306 ಕಾರು ಮಾರಾಟವಾಗಿತ್ತು. 2023ರ ಸೆಪ್ಟೆಂಬರ್ ತಿಂಗಳಲ್ಲಿ 181,343 ಕಾರು ಮಾರಾಟವಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿನ ಮಾರಾಟ ಹಾಗೂ ವಿದೇಶಕ್ಕೆ ರಫ್ತಾದ ಒಟ್ಟು ಸಂಖ್ಯೆ 153,106. ಇದರಲ್ಲಿ 22,511 ಕಾರುಗಳು ಭಾರತದಿಂದ ವಿದೇಶಕ್ಕೆ ರಫ್ತಾಗಿದೆ.
ಎಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಮಾರುತಿ ಸುಜುಕಿ ಒಟ್ಟು 1 ಮಿಲಿಯನ್ ಅಂದರೆ 10 ಲಕ್ಷ ಕಾರುಗಳನ್ನು(10,50,085) ಮಾರಾಟ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಗಣೇಶ ಹಬ್ಬಕ್ಕೆ ಹಲವರು ಕಾರು ಡೆಲವರಿ ಪಡೆದಿದ್ದಾರೆ. ಹಬ್ಬದ ಕಾರಣ ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
ಇದೀಗ ದಸರಾ, ದೀಪಾವಳಿ ಹಬ್ಬಗಳು ಆಗಮಿಸುತ್ತಿದೆ. ಈ ಶುಭಸಂದರ್ಭದಲ್ಲೂ ಮಾರುತಿ ಸುಜುಕಿ ಸಾಮಾನ್ಯವಾಗಿ ಬಂಪರ್ ಆಫರ್ ಘೋಷಿಸಿ ಮಾರಾಟದಲ್ಲಿ ದಾಖಲೆ ಸಾಧಿಸುತ್ತದೆ.