470 ಕಿ.ಮೀ ಮೈಲೇಜ್; ಭಾರತದಲ್ಲಿ ಜಾಗ್ವಾರ್ I-PACE ಎಲೆಕ್ಟ್ರಿಕ್ ಕಾರು ಬಿಡುಗಡೆ!
470 ಕಿ.ಮೀ ಮೈಲೇಜ್ ರೇಂಜ್, ಐಷಾರಾಮಿ, ಆರಾಮದಾಯಕ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಆಲ್-ವೀಲ್ ಡ್ರೈವ್ , 4 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗದ ಸಾಮರ್ಥ್ಯ, ಸುಲಭ ಚಾರ್ಜಿಂಗ್, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳ ಐ ಪೇಸ್ ಬಿಡುಗಡೆಯಾಗಿದೆ. ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಇಂದು 1.05 ಕೋಟಿ ರೂಪಾಯಿ (ಎಕ್ಸ್ ಶೋರೂಮ್ ಇಂಡಿಯಾ) ಆರಂಭಿಕ ಬೆಲೆಯೊಂದಿಗೆ ಭಾರತದಲ್ಲಿ ಸಂಪೂರ್ಣ-ವಿದ್ಯುಚ್ಚಾಲಿತ ಜಾಗ್ವಾರ್ ಐ-ಪೇಸ್ ಬಿಡುಗಡೆ ಮಾಡಿದೆ. ಜಾಗ್ವಾರ್ ಐ-ಪೇಸ್ 294KW ಶಕ್ತಿ ಮತ್ತು 696 NM ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕೇವಲ 4.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗ ತಲುಪಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 470 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.
ಬಿಡುಗಡೆಯಾದಾಗಿನಿಂದ, ಜಾಗ್ವಾರ್ ಐ-ಪೇಸ್ ವರ್ಲ್ಡ್ ಕಾರ್ ಆಫ್ ದಿ ಇಯರ್, ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್ ಮತ್ತು 2019 ರಲ್ಲಿ ವರ್ಲ್ಡ್ ಗ್ರೀನ್ ಕಾರ್ ಸೇರಿದಂತೆ 80 ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಅಲ್ಪಾವಧಿಯಲ್ಲಿಯೇ ಇದು ಉತ್ತಮ ಎಲೆಕ್ಟ್ರಿಕ್ ವಾಹನ ಎಂದು ಗುರುತಿಸಿಕೊಂಡಿದೆ.
ಜಾಗ್ವಾರ್ ಐ-ಪೇಸ್ ನಾವು ಭಾರತದಲ್ಲಿ ಬಿಡುಗಡೆ ಮಾಡಿದ ಮೊದಲ ಸಂಪೂರ್ಣ-ವಿದ್ಯುಚ್ಚಾಲಿತ ಎಸ್‍ಯುವಿ ಆಗಿದ್ದು, ಇದು ನಮ್ಮ ವಿದ್ಯುದ್ದೀಕರಣದ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ನಮ್ಮ ವಿದ್ಯುದ್ದೀಕೃತ ಉತ್ಪನ್ನಗಳೊಂದಿಗೆ ನಾವು ಭವಿಷ್ಯದಲ್ಲಿ ಭಾರತದ ವಿದ್ಯುದೀಕರಣ ಚಾಲನೆಯಲ್ಲಿ ಮಹತ್ವದ ಪಾತ್ರ ವಹಿಸಲು ಎದುರು ನೋಡುತ್ತೇವೆ. ಅವರ ವ್ಯಕ್ತಿತ್ವಗಳನ್ನು ತೋರ್ಪಡಿಸಲು ಮತ್ತು ಎಲ್ಲರಿಗಿಂತ ಮುಂಚೂಣಿಯಲ್ಲಿ ಇರಲು ತಂತ್ರಜ್ಞಾನ ಮತ್ತು ವಿನ್ಯಾಸದಲ್ಲಿ ನಾವೀನ್ಯವನ್ನು ಬಯಸುವ ಮತ್ತು ಖರೀದಿಸುವ ಜನರನ್ನು ಜಾಗ್ವಾರ್ ಐ-ಪೇಸ್ ಖಂಡಿತವಾಗಿಯೂ ಆಕರ್ಷಿಸುತ್ತದೆ. ಅಂತಹ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಾವು ಮತ್ತು ನಮ್ಮ ಚಿಲ್ಲರೆ ವ್ಯಾಪಾರಿ ಮಳಿಗೆಗಳ ನೆಟ್‍ವರ್ಕ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಹೇಳಿದರು.
ಗ್ರಾಹಕರ ಪ್ರಯಾಣದ ಪ್ರತಿಯೊಂದು ಹೆಜ್ಜೆಯೂ ಮನಶ್ಶಾಂತಿಯನ್ನು ನೀಡುವಂತೆ ಮತ್ತು ಎಲೆಕ್ಟ್ರಿಕ್ ಕಾರನ್ನು ಹೊಂದಲು ಸಾಧ್ಯವಾದಷ್ಟು ಸುಲಭವಾಗುವಂತೆ ಜಾಗ್ವಾರ್ ಖಚಿತಪಡಿಸಿದೆ. 19 ನಗರಗಳಲ್ಲಿ 22 ಚಿಲ್ಲರೆ ಮಾರಾಟ ಮಳಿಗೆಗಳು ಈಗ 35 ಕ್ಕೂ ಹೆಚ್ಚು ಇವಿ ಚಾರ್ಜರ್ ಸ್ಥಾಪನೆಯೊಂದಿಗೆ EV ಸಿದ್ಧವಾಗಿವೆ. ಈ ಚಾರ್ಜರ್‌ಗಳು 7.4KW ಎಸಿ ಚಾರ್ಜರ್ ಮತ್ತು 25 KW ಡಿಸಿ (ವೇಗದ) ಚಾರ್ಜರ್ ಸಂಯೋಜನೆಯಾಗಿದೆ. ಚಿಲ್ಲರೆ ಮಾರಾಟ ಮಳಿಗೆಗಳ ಸಿಬ್ಬಂದಿಗೆ ಇವಿಗಳ ಬಗ್ಗೆ ಆಳವಾದ ಮತ್ತು ಮೀಸಲು ಕೋರ್ಸ್‍ಗಳೊಂದಿಗೆ ವ್ಯಾಪಕ ತರಬೇತಿಯನ್ನು ನೀಡಲಾಗಿದೆ, ಇದರಿಂದಾಗಿ ಗ್ರಾಹಕರ ಎಲ್ಲಾ ಅವಶ್ಯಕತೆಗಳು ಮತ್ತು ಸಂದೇಹಗಳನ್ನು ಪೂರೈಸಲು ಸಾಧ್ಯವಾಗುತ್ತದೆ.
ಇದಲ್ಲದೆ, ಜಾಗ್ವಾರ್ ಐ-ಪೇಸ್ ಅನ್ನು ಚಾರ್ಜ್ ಮಾಡಲು, ಗ್ರಾಹಕರು ವಾಹನದೊಂದಿಗೆ ಪ್ರಮಾಣಿತವಾಗಿ ಒದಗಿಸಲಾದ ಹೋಮ್ ಚಾರ್ಜಿಂಗ್ ಕೇಬಲ್ ಅನ್ನು ಬಳಸಬಹುದು ಅಥವಾ ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗುವ 7.4 KW ಎಸಿ ವಾಲ್ ಮೌಂಟೆಡ್ ಚಾರ್ಜರ್ ಅನ್ನು ಸಹ ಬಳಸಬಹುದು. ಗ್ರಾಹಕರ ಮನೆಯಲ್ಲಿ ಈ ಚಾರ್ಜರ್ ಸ್ಥಾಪನೆಯನ್ನು ಟಾಟಾ ಪವರ್ ಲಿಮಿಟೆಡ್ ಮಾಡುತ್ತದೆ ಮತ್ತು ಜಾಗ್ವಾರ್ ಚಿಲ್ಲರೆ ಮಾರಾಟದ ವ್ಯಾಪಾರಿಗಳ ಮೂಲಕ ಸಮನ್ವಯಗೊಳಿಸಲಾಗುತ್ತದೆ. ಗ್ರಾಹಕರು ಟಾಟಾ ಪವರ್‍ನ ವೇಗವಾಗಿ ವಿಸ್ತರಿಸುತ್ತಿರುವ ಸುಮಾರು 200 ಐ-ಪೇಸ್ ಹೊಂದಾಣಿಕೆಯ ಚಾರ್ಜಿಂಗ್ ಪಾಯಿಂಟ್‍ಗಳನ್ನು ಹೊಂದಿದ ಚಾರ್ಜ್ ನೆಟ್‍ವರ್ಕ್ ಅನ್ನು ಸಹ ಬಳಸಿ ಪಾವತಿಸುವ ಆಧಾರದ ಮೇಲೆ ಉಪಯೋಗಿಸಬಹುದು.
ಜಾಗ್ವಾರ್ ಐ-ಪೇಸ್ ನ ಅಪ್ರತಿಮ ವಿನ್ಯಾಸವು ಜಾಗ್ವಾರ್ ಮತ್ತು ಐ-ಪೇಸ್ ಪರಿಕಲ್ಪನೆಯ ಮನೋಭಾವಕ್ಕೆ ಅನುಗುಣವಾಗಿದೆ. ಗಮನಾರ್ಹವಾದ ಮುಂಭಾಗದ ಚಕ್ರ ಕಮಾನುಗಳಿಂದ ಹಿಂಭಾಗದ ಡಿಫ್ಯೂಸರ್ ವರೆಗೆ, ಪ್ರೇರಿತ ಸ್ಟೈಲಿಂಗ್ ಅಂಶವೂ ಗರಿಷ್ಠ ಶ್ರೇಣಿ ಮತ್ತು ಸ್ಥಿರತೆಗಾಗಿ ಐ-ಪೇಸ್ ಗಾಳಿಯಲ್ಲಿ ಸುಲಭವಾಗಿ ನುಗ್ಗಲು ಅನುವು ಮಾಡಿಕೊಡುತ್ತದೆ.
ಐ-ಪೇಸ್ ಆಧುನಿಕ ಮತ್ತು ಹೆಚ್ಚು ಚಾಲಕ-ಕೇಂದ್ರಿತ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಸಿಸ್ಟಮ್ ಅನ್ನು ನೀಡುವ ಭಾರತದ ಮೊದಲ ಜಾಗ್ವಾರ್ ಆಗಿದೆ. 31.24 ಸೆಂ.ಮೀ. (12.3) ಎಚ್‍ಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಂಪೂರ್ಣವಾಗಿ ಪರಿಷ್ಕೃತ ಗ್ರಾಫಿಕ್ಸ್ ಅನ್ನು ಹೊಂದಿದ್ದು, ಬ್ಯಾಟರಿಯಲ್ಲಿನ ಚಾರ್ಜ್‍ನ ಸ್ಥಿತಿಯ ಸ್ಪಷ್ಟ ಸೂಚನೆಯನ್ನು ನೀಡುತ್ತದೆ.
ಐ-ಪೇಸ್ , ‘ಫ್ಲೋಟಿಂಗ್' ಸೆಂಟರ್ ಕನ್ಸೋಲ್‍ನ ಕೆಳಗೆ ವೈರ್‍ಲೆಸ್ ಡಿವೈಸ್ ಚಾರ್ಜಿಂಗ್ ಪ್ಯಾಡ್‍ನೊಂದಿಗೆ ಲಭ್ಯವಿದೆ. ವೈರ್‍ಲೆಸ್ ಚಾರ್ಜಿಂಗ್ ಸಿಗ್ನಲ್ ಬೂಸ್ಟರ್ ಅನ್ನು ಸಹ ಒಳಗೊಂಡಿದ್ದು, ಫೋನ್‍ನ ಸಿಗ್ನಲ್ ಹೆಚ್ಚು ಕಾಲ ಪ್ರಬಲವಾಗಿರುವುದನ್ನು ಖಚಿತಪಡಿಸುತ್ತದೆ. ಎರಡು ಫೋನ್‍ಗಳನ್ನು ಏಕಕಾಲದಲ್ಲಿ ಸಂಪರ್ಕದಲ್ಲಿಡಬಲ್ಲ ಬ್ಲೂಟೂತ್ ತಂತ್ರಜ್ಞಾನದಂತೆ ಆಪಲ್ ಕಾರ್‍ಪ್ಲೇಲ ಮತ್ತು ಆಂಡ್ರಾಯ್ಡ್ ಆಟೋ™ ನೊಂದಿಗೆ ಸ್ಮಾರ್ಟ್‍ಫೋನ್ ಪ್ಯಾಕ್ ಲಭ್ಯವಿದ್ದು, ನೀವು ಯಾವಾಗಲೂ ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತದೆ.
ಕ್ಯಾಬಿನ್ ಒಳಗೆ, ಹಿಂದಿನ ಸೀಟಿನಲ್ಲಿ ಮೂರು ಜನರಿದ್ದರೂ ಸಹ ಚಾಲಕನು ಯಾವಾಗಲೂ ರಸ್ತೆಯ ತಡೆರಹಿತ ನೋಟವನ್ನು ಹೊಂದಿರುವುದನ್ನು ಖಚಿತಪಡಿಸುವ ಕ್ಲಿಯರ್ ಸೈಟ್ ಹಿಂಬದಿಯ ನೋಟದ ಕನ್ನಡಿಯು ದೃಷ್ಟಿ ಮತ್ತು ಅನುಕೂಲತೆಯನ್ನು ಸುಧಾರಿಸುತ್ತದೆ. ಇದು ಫ್ರೇಮ್‍ಲೆಸ್ ಗ್ಲಾಸ್ ಕನ್ನಡಿಯೊಳಗೆ ಹೆಚ್ಚಿನ ರೆಸಲ್ಯೂಶನ್ ಪರದೆಯೊಂದಿಗೆ ಲಿಂಕ್ ಮಾಡಲಾದ ವಿಶಾಲ-ಕೋನ, ಹಿಮ್ಮುಖದ ಕ್ಯಾಮೆರಾವನ್ನು ಬಳಸುತ್ತದೆ. ಕನ್ನಡಿಯಲ್ಲಿನ ಸಣ್ಣ ಟಾಗಲ್ ಸ್ವಿಚ್ ಚಾಲಕನಿಗೆ ಪ್ರಮಾಣಿತ ಕನ್ನಡಿ ಮತ್ತು ಕ್ಯಾಮೆರಾ ಫೀಡ್‍ನ ವೀಕ್ಷಣೆಯ ನಡುವೆ ಬೇಕಾದಂತೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಐ-ಪೇಸ್ ಈ ಕಾರ್‍ಗಾಗಿ ವಿಶೇಷವಾಗಿ ರಚಿಸಲಾದ ಸುಧಾರಿತ ಎಲೆಕ್ಟ್ರಿಕ್ ವೆಹಿಕಲ್ ಆರ್ಕಿಟೆಕ್ಚರ್‍ನ ಮೇಲೆ ಆಧರಿಸಿದ್ದು, ಇದು ತೂಕವನ್ನು ಕಡಿಮೆ ಮಾಡಿ ಅತ್ಯುತ್ತಮ ಚಾಲನಾ ಡೈನಾಮಿಕ್ಸ್ ಅನ್ನು ನೀಡುತ್ತದೆ. ಮುಂಭಾಗದ ಡಬಲ್ ವಿಷ್‍ಬೋನ್ ಸಸ್ಪೆನ್ಷನ್ ಮತ್ತು ಹಿಂಭಾಗದ ಇಂಟೆಗ್ರಲ್ ಲಿಂಕ್ ಸಸ್ಪೆನ್ಷನ್ ಐ-ಪೇಸ್ ಅನ್ನು ಕ್ರಿಯಾತ್ಮಕ ನಿರ್ವಹಣೆ ಮತ್ತು ಪರಿಷ್ಕರಣೆಯ ಪರಿಪೂರ್ಣ ಸಮತೋಲನವನ್ನು ನೀಡಲು ತಯಾರು ಮಾಡಲಾಗಿದೆ.