ಹಬ್ಬದ ಆಫರ್, ನೆಕ್ಸಾನ್ ಸೇರಿ 13 ಎಸ್‌ಯುವಿ ಕಾರಿನ ಮೇಲೆ ಗರಿಷ್ಠ 1.5 ಲಕ್ಷ ರೂ ಡಿಸ್ಕೌಂಟ್!
ನವರಾತ್ರಿ, ದೀಪಾವಳಿ ಸೇರಿದಂತೆ ಹಬ್ಬದ ಸೀಸನ್‌ಗೆ ಕಾರು ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಲಭ್ಯವಿದೆ. ಟಾಟಾ ನೆಕ್ಸಾನ್, ನಿಸಾನ್ ಮ್ಯಾಗ್ನೈಟ್ ಸೇರಿದಂತೆ ಹಲವು ಎಸ್‌ಯುವಿ ಕಾರುಗಳ ಮೇಲೆ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ನೀಡಲಾಗಿದೆ.
ಹಬ್ಬಗಳ ಸೀಸನ್ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಕಾರು ಕಂಪನಿಗಳು ಮಾರಾಟ ಹೆಚ್ಚಿಸಲು ಹಾಗೂ ಗ್ರಾಹಕರನ್ನು ಸೆಳೆಯಲು ಭಾರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಇದೀಗ ಟಾಟಾ ನೆಕ್ಸಾನ್ ಕಾರಿನ ಮೇಲೆ 16,000 ರೂಪಾಯಿಯಿಂದ ಗರಿಷ್ಠ 1 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಇನ್ನು MY23 ಮಾಡೆಲ್ ಕಾರಿನ ಬೆಲೆ ಹೆಚ್ಚುವರಿಯಾಗಿ 15,000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ.
ಎಸ್‌ಯುವಿ ಕಾರುಗಳ ಪೈಕಿ ನಿಸಾನ್ ಮ್ಯಾಗ್ನೈಟ್ ಅತೀ ಹೆಚ್ಚು ಮಾರಾಟ ಕಾಣುತ್ತಿದೆ. ಕಾರಣ ಇದು ಅತೀ ಕಡಿಮೆ ಬೆಲೆಯ ಎಸ್‌ಯುವಿ ಕಾರಾಗಿದೆ. 6 ಲಕ್ಷ ರೂಪಾಯಿಯಿಂದ ನಿಸಾನ್ ಮ್ಯಾಗ್ನೈಟ್ ಬೆಲೆ ಆರಂಭಗೊಳ್ಳುತ್ತಿದೆ. ಇದೀಗ ಈ ಕಾರಿನ ಮೇಲೆ ಗರಿಷ್ಠ 1.25 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ನೀಡಲಾಗಿದೆ. ಇದರಿಂದ ನಿಸಾನ್ ಮ್ಯಾಗ್ನೈಟ್ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಾಗಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಕಾರಿಗೆ ಭಾರತದಲ್ಲ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಿಮಿಯಂ ಎಸ್‌ಯುವಿ ಕಾರು ಬಯಸುವ ಗ್ರಾಹಕರು ಗ್ರ್ಯಾಂಡ್ ವಿಟಾರ ಕಾರು ಖರೀದಿಸುತ್ತಿದ್ದಾರೆ. ಇದೀಗ ಗ್ರ್ಯಾಂಡ್ ವಿಟಾರಾ ಕಾರಿಗೆ ಗರಿಷ್ಠ 1.28 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಹೀಗಾಗಿ ಗ್ರ್ಯಾಂಡ್ ವಿಟಾರ ಮಾರಾಟದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಕಿಯಾ ಸೆಲ್ಟೋಸ್ ಕಾರಿಗೆ ಗರಿಷ್ಠ 1.3 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. 1.5 ಲೀಟರ್ ಎಂಜಿನ್ ಹೊಂದಿರುವ ಸೆಲ್ಟೋಸ್ ಆಟೋಮ್ಯಾಟಿಕ್ ಹಾಗೂ ಮ್ಯಾನ್ಯುಯೆಲ್ ಆಯ್ಕೆಯಲ್ಲಿ ಲಭ್ಯವಿದೆ. ಕಿಯಾ ಸೆಲ್ಟೋಸ್ ಕಾರಿನ ಬೆಲೆ 10.90 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ (ಎಕ್ಸ್ ಶೋ ರೂಂ).
ಟಾಟಾ ಸಫಾರಿ ಕಾರಿಗೆ 50,000 ರೂಪಾಯಿಯಿಂದ ಗರಿಷ್ಠ 1.4 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ. ಇನ್ನು MY23 ಮಾಡೆಲ್ ಕಾರಿಗೆ ಹೆಚ್ಚುವರಿಯಾಗಿ 25,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಟಾಟಾ ಸಫಾರಿ ಕಾರಿನ ಬೆಲೆ 15.49 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಕಾರಿನ ಬೆಲೆ 27.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಭಾರತದಲ್ಲಿ ನಿಧಾನವಾಗಿ ಹೆಜ್ಜೆ ಗುರುತು ಮೂಡಿಸುತ್ತಿರುವ ಸಿಟ್ರೊಯೆನ್ ಬ್ರ್ಯಾಂಡ್ ಇದೀಗ ತನ್ನ ಸಿ2 ಏರ್‌ಕ್ರಾಸ್ ಕಾರಿಗೆ ಗರಿಷ್ಠ 1.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ. 1.2 ಲೀಟರ್ ಎಂಜಿನ್ ಹೊಂದಿರುವ ಈ ಕಾರು 5+2 ಸೀಟರ್ ಹೊಂದಿದೆ. ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.
ಮಹೀಂದ್ರ ಎಸ್‌ಯುವಿ 400 ಎಲೆಕ್ಟ್ರಿಕ್ ಕಾರಿನ ಮಾರಾಟ ಹೆಚ್ಚಿಸಲು ಇದೀಗ ಹಬ್ಬದ ಸೇಲ್ ಆಫರ್ ಘೋಷಿಸಿದೆ. ಡಿಸ್ಕೌಂಟ್, ಬೋನಸ್, ಎಕ್ಸ್‌ಚೇಂಜರ್, ಕಾರ್ಪೋರೇಟ ಆಫರ್ ಸೇರಿದಂತೆ ಗರಿಷ್ಠ 3 ಲಕ್ಷ ರೂಪಾಯಿ ವರಗೆ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಿ ಬಂದಿರುವ ಮಾರುತಿ ಜಿಮ್ಮಿ ಕಾರಿಗೂ ಡಿಸ್ಕೌಂಟ್ ಘೋಷಿಸಲಾಗಿದೆ. ಇದರೊಂದಿಗೆ ಇತರ ಕೆಲ ಕಾರುಗಳಿಗೂ ಡಿಸ್ಕೌಂಟ್ ನೀಡಲಾಗಿದೆ. ವಿಶೇಷ ಸೂಚನೆ: ಆಫರ್ ಕುರಿತು ಹತ್ತಿರದ ಡೀಲರ್ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ.