ನಟಿ ಹನ್ಸಿಕಾ ಮೋಟ್ವಾನಿಗೆ ಬಂತು 75 ಲಕ್ಷ ರೂ ಮೌಲ್ಯದ BMW 6 GT ಕಾರು ಗಿಪ್ಟ್!
ನಟಿ ಹನ್ಸಿಕಾ ಮೋಟ್ವಾನಿಗೆ ದುಬಾರಿ ಉಡುಗೊರೆ ಬಂದಿದೆ. ತಮ್ಮ ಕುಟುಂಬವೇ ಈ ಉಡುಗೊರೆ ನೀಡಿದೆ. 75 ಲಕ್ಷ ರೂಪಾಯಿ ಮೌಲ್ಯದ BMW 6 GT ಸೆಡಾನ್ ಕಾರನ್ನು ಹನ್ಸಿಕಾಗೆ ಉಡುಗೊರೆಯಾಗಿ ನೀಡಲಾಗಿದೆ.
ಕನ್ನಡ, ತೆಲೆಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಭಾರಿ ಜನಪ್ರಿಯವಾಗಿರುವ ನಟಿ ಹನ್ಸಿಕಾ ಮೋಟ್ವಾನಿ ತಮ್ಮ ದುಬಾರಿ ಲೈಫ್‌ಸ್ಟೈಲ್ ಮೂಲಕವೂ ಗಮನಸೆಳೆದಿದ್ದಾರೆ.
ನಟಿ ಹನ್ಸಿಕಾಗೆ ಅವರ ಕುಟುಂಬ ದುಬಾರಿ ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದೆ. 75 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ಬೆಲೆಯ BMW 6 GT ಕಾರನ್ನು ಹನ್ಸಿಕಾಗೆ ಉಡುಗೊರೆಯಾಗಿ ನೀಡಲಾಗಿದೆ.
ಯಾವ ಕಾರಣಕ್ಕೆ ಹನ್ಸಿಕಾಗೆ ಈ ಉಡುಗೊರೆ ನೀಡಲಾಗಿದೆ ಅನ್ನೋ ಮಾಹಿತಿ ಲಭ್ಯವಿಲ್ಲ. ಆದರೆ ಹನ್ಸಿಕಾ ಹಾಗೂ ಅವರ ಕುಟುಂಬ ಹೊಚ್ಚ ಹೊಸ BMW 6 GT ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಹನ್ಸಿಕಾ ಮೋಟ್ವಾನಿ ತಮ್ಮ ಹೊಚ್ಚ BMW 6 GT ಕಾರನ್ನು ಡ್ರೈವ್ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿ ಬಣ್ಣದ ಕಾರಿನಲ್ಲಿ ಹನ್ಸಿಕಾ ಕುಟುಂಬಸ್ಥರ ಜೊತೆ ತೆರಳಿದ್ದಾರೆ.
ಕಾರು ಡೆಲಿವರಿಗೆ ಪಡೆದ ಕುಟುಂಬ, ಹನ್ಸಿಕಾಗಿ ಗಿಫ್ಟ್ ಮಾಡಿದ್ದಾರೆ. ಖುದ್ದು ಹನ್ಸಿಕಾ ಡ್ರೈವ್ ಮಾಡಿ ಎಂಜಾಯ್ ಮಾಡಿದ್ದಾರೆ. BMW 6 GT ಟಾಪ್ ಮಾಡೆಲ್ ಕಾರಿನ ಬೆಲೆ 75.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
BMW 6 GT ಕಾರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ವೇರಿಯೆಂಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹನ್ಸಿಕಾ ಮೋಟ್ವಾನಿ 630i M ಸ್ಪೋರ್ಟ್ ವೇರಿಯೆಂಟ್ ಕಾರು ಪಡೆದಿದ್ದಾರೆ.
2.0 ಲೀಟರ್ ಟರ್ಬೋಚಾರ್ಜ್ ಇನ್‌ಲೈನ್ 4 ಸಿಲಿಂಡರ್ ಎಂಜಿನ ಹೊಂದಿದ್ದು, 254 Bhp ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಹನ್ಸಿಕಾ ಈಗಾಗಲೇ ಹಲವು ದುಬಾರಿ ಕಾರುಗಳ ಮಾಲೀಕರಾಗಿದ್ದಾರೆ. ಲ್ಯಾಂಡ್ ರೋವರ್, ಜಾಗ್ವಾರ್, ರೋಲ್ಸ್ ರಾಯ್ಸ್ ಸೇರಿದಂತೆ ಹಲವು ದುಬಾರಿ ಕಾರು ಹೊಂದಿದ್ದಾರೆ.