ಬರೋಬ್ಬರಿ 4 ಕೋಟಿ ರೂ ಹೊಸ ಕಾರು ಖರೀದಿಸಿದ ನಟ ಥಲಾ ಅಜಿತ್, ಅಂತಾದ್ದೇನಿದೆ ಈ ಕಾರಲ್ಲಿ?
ಖ್ಯಾತ ನಟ ಥಲಾ ಅಜಿತ್ ಕುಮಾರ್ ಇತ್ತೀಚೆಗಷ್ಟೇ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಇದೀಗ ಬರೋಬ್ಬರಿ 4 ಕೋಟಿ ರೂಪಾಯಿ ನೀಡಿ ಹೊಸ ಕಾರು ಖರೀದಿಸಿದ್ದಾರೆ. ಈ ಕಾರು ಯಾವುದು?
ಅಜಿತ್ ಹೊಸ ಕಾರು
ತಮಿಳು ಚಿತ್ರರಂಗದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ ನಟನಾಗಿ ಪ್ರವೇಶಿಸಿ ಇಂದು ತಮಿಳು ಚಿತ್ರರಂಗದಲ್ಲಿ ಉತ್ತುಂಗ ನಟರಾಗಿ ನೆಲೆನಿಂತವರು ಅಜಿತ್ ಕುಮಾರ್. ಅವರು ಪ್ರಸ್ತುತ 'ವಿಡಾಮುಯರ್ಚಿ' ಮತ್ತು 'ಗುಡ್ ಬ್ಯಾಡ್ ಅಗ್ಲಿ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ವಿಡಾಮುಯರ್ಚಿ' ಚಿತ್ರವನ್ನು ಮಗಿಳ್ ತಿರುಮೇನಿ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದಲ್ಲಿ ನಟಿ ತ್ರಿಷಾ ಅವರು ಅಜಿತ್ ಗೆ ಜೋಡಿಯಾಗಿದ್ದಾರೆ. ಲೈಕಾ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. 'ವಿಡಾಮುಯರ್ಚಿ' ಚಿತ್ರ ಈ ವರ್ಷ ದೀಪಾವಳಿ ಅಥವಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಅಜಿತ್ ಲ್ಯಾಂಬೋರ್ಗಿನಿ ಕಾರು
'ವಿಡಾಮುಯರ್ಚಿ' ಚಿತ್ರದ ನಂತರ ನಟ ಅಜಿತ್ ಅವರ ಬಳಿ ಇರುವ ಇನ್ನೊಂದು ಚಿತ್ರ 'ಗುಡ್ ಬ್ಯಾಡ್ ಅಗ್ಲಿ'. ಈ ಚಿತ್ರವನ್ನು 'ಮಾರ್ಕ್ ಆಂಟೋನಿ' ಚಿತ್ರದ ನಿರ್ದೇಶಕ ಆದಿಕ್ ರವಿಚಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ.
'ಗುಡ್ ಬ್ಯಾಡ್ ಅಗ್ಲಿ' ಚಿತ್ರದ ಚಿತ್ರೀಕರಣ ಪ್ರಸ್ತುತ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಈ ಚಿತ್ರವನ್ನು ಮುಂದಿನ ವರ್ಷ ಮೇ ತಿಂಗಳಿನಲ್ಲಿ ನಟ ಅಜಿತ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
Porsche GT3 RS ಕಾರನ್ನು ಖರೀದಿಸಿದ ಅಜಿತ್
ಹೀಗೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಜಿತ್, ಸಮಯ ಸಿಕ್ಕಾಗ್ಗೆಲ್ಲಾ ಬೈಕ್ ರೈಡಿಂಗ್, ಕಾರ್ ರೇಸ್ ನಂತಹವುಗಳಲ್ಲಿ ಭಾಗವಹಿಸುತ್ತಾರೆ.
ಕಾರು ಪ್ರಿಯರಾದ ಇವರು ತಮ್ಮ ಮನೆಯಲ್ಲಿ ಹಲವಾರು ಐಷಾರಾಮಿ ಕಾರುಗಳನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದರು ಅಜಿತ್. ಕೆಂಪು ಬಣ್ಣದ ಆ ಕಾರಿನ ಬೆಲೆ ರೂ. 9 ಕೋಟಿ. ಅದನ್ನು ದುಬೈನಲ್ಲಿ ಇಟ್ಟಿದ್ದಾರೆ ಅಜಿತ್.
Porsche GT3 RS ಕಾರಿನ ಬೆಲೆ
ಈಗ ಮತ್ತೊಂದು ಹೊಸ ಕಾರನ್ನು ಖರೀದಿಸಿದ್ದಾರೆ 'ಥಲಾ'. ಈ ಬಾರಿ ಪೋರ್ಷೆ ಕಂಪನಿಯ GT3 RS ಮಾಡೆಲ್ ಕಾರನ್ನು ಖರೀದಿಸಿದ್ದಾರೆ ಅಜಿತ್. ಆ ಕಾರಿನ ಬೆಲೆ ರೂ 4 ಕೋಟಿ ಎನ್ನಲಾಗಿದೆ. ಈ ಕಾರು ಕೇವಲ 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುಪುತ್ತದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 296 ಕಿ.ಮೀ. ಈ ಕಾರಿನ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಶಾಲಿನಿ, ಅವರ ಕಾರು, ಸ್ಟೈಲ್ ಎಲ್ಲವೂ ನನ್ನಿಂದಲೇ ಬಂದದ್ದು ಎಂದು ಕ್ಯಾಪ್ಷನ್ ನೀಡಿದ್ದಾರೆ.