ಭಾರತದಲ್ಲಿ ಡ್ರೈವಿಂಗ್ ವೇಳೆ ಕಾಣಸಿಗುವ 8 ತಪ್ಪು; ನೀವು ಈ ಮಿಸ್ಟೇಕ್ ಮಾಡುತ್ತಿದ್ದೀರಾ?
First Published Jan 11, 2021, 2:58 PM IST
ಭಾರತದ ರಸ್ತೆಗಳಲ್ಲಿ ಡ್ರೈವಿಂಗ್ ಸುಲಭದ ಮಾತಲ್ಲ. ಕಾರಣ ರಸ್ತೆ ಒನ್ ವೇ ಆಗಿದ್ದರೂ, ಎರಡೂ ಬದಿ ನೋಡಲೇಬೇಕು. ಎಲ್ಲಿಂದ ವಾಹನ ನುಗ್ಗುತ್ತೆ ಅನ್ನೋದು ಊಹಿಸಲು ಸಾಧ್ಯವಿಲ್ಲ. ಹೀಗೆ ಭಾರತದ ರಸ್ತೆಗಳಲ್ಲಿ ಡ್ರೈವಿಂಗ್ ವೇಳೆ ಸಾಮಾನ್ಯವಾಗಿ ಬಹುತೇಕರು ಮಾಡುವ 8 ತಪ್ಪುಗಳ ಕುರಿತ ಮಾಹಿತಿ ಇಲ್ಲಿದೆ. ನೀವು ಈ ತಪ್ಪು ಮಾಡುತ್ತಿದ್ದೀರಾ?

ಇತ್ತೀಚೆಗೆ ಬಿಡುಗಡೆಯಾಗುವ ಎಲ್ಲಾ ಕಾರುಗಳಲ್ಲಿ ಸನ್‌ರೂಫ್ ಸಾಮಾನ್ಯ. ಭಾರತದಲ್ಲಿ ಚಲಿಸುತ್ತಿರುವ ಕಾರಿನ ಸನ್‌ರೂಫ್ ಒಪನ್ ಮಾಡಿ ಅರ್ಧ ದೇಹ ಹೊರಕ್ಕೆ ಹಾಕಿ ನಿಲ್ಲುವ ದೃಶ್ಯ ಹೈವೇ, ಹಿಲ್ ಸ್ಟೇಶನ್‌ಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇದು ನಿಯಮ ಉಲ್ಲಂಘನೆಯಾಗಿದೆ. ಇಷ್ಟೇ ಅತ್ಯಂತ ಅಪಾಯಕಾರಿ ಕೂಡ ಹೌದು.

ಭಾರತದಲ್ಲಿ ಹೆಚ್ಚಿನವರಿಗೆ ಲೋ ಬೀಮ್ ಹಾಗೂ ಹೈ ಬೀಮ್ ಹೆಡ್‍ಲೈಟ್ ಬಳಕೆ ಬರುವುದಿಲ್ಲ. ರಾತ್ರಿ ಡ್ರೈವಿಂಗ್ ವೇಳೆ ಬಹುತೇಕರು ಹೈ ಬೀಮ್ ಲೈಟ್ ಹಾಕಿರುತ್ತಾರೆ. ಎದುರುಗಡೆಯಿಂದ ವಾಹನ ಬಂದರೂ ಡಿಮ್ ಮಾಡುವುದಿಲ್ಲ. ಇದರಿಂದ ಅಪಘಾತದ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?