₹500 ಹೂಡಿಕೆಯಿಂದ ₹2 ಕೋಟಿ ಗಳಿಸಿದ ಟೆಕ್ಕಿ: ಷೇರು ಮಾರುಕಟ್ಟೆ ರಾಣಿಯಾದ ಯುವತಿ
ಮಕ್ಕಳಿಗೆ ಟ್ಯೂಷನ್ ಹೇಳಿಕೊಟ್ಟು ಬಂದ ಹಣದಲ್ಲಿ ಓದಿಕೊಂದು ಬೆಳೆದ ಮದ್ಯಮ ವರ್ಗದ ಕುಟುಂಬದ ಯುವತಿ ಐಟಿ ಉದ್ಯೋಗಿಯಾಗಿದ್ದಾಳೆ. ಆದರೆ, ಕೇವಲ 30 ಸಾವಿರ ರೂ. ಸಂಬಳಕ್ಕೆ ತಿಂಗಳ ಪೂರ್ತಿ ದುಡಿಯುವುದಕ್ಕೆ ಮನಸ್ಸೊಪ್ಪದ ಯುವತಿ ಕೇವಲ ₹500 ರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಿ ₹2 ಕೋಟಿಗೂ ಹೆಚ್ಚು ಮೌಲ್ಯದ ಪೋರ್ಟ್‌ಫೋಲಿಯೊವನ್ನು ನಿರ್ಮಿಸಿದ್ದಾರೆ. ಈ ಯುವತಿ ಚಾಣಾಕ್ಷತವನ್ನು ನೋಡಿ ಷೇರು ಮಾರುಕಟ್ಟೆ, ವೃತ್ತಿಪರರೂ ಮೂಕವಿಸ್ಮಿತರನ್ನಾಗಿಸಿದ್ದಾರೆ. ಈ ಯಶಸ್ವಿ ಮಹಿಳೆಯ ಕಥೆಯನ್ನು ಇಲ್ಲಿ ಓದಿ.

ಷೇರು ಮಾರುಕಟ್ಟೆಯಲ್ಲಿ ಏನು ಬೇಕಾದರೂ ಸಾಧ್ಯವಾಗಬಹುದು. ಯಾರು ಯಾವಾಗ ಕೋಟ್ಯಾಧಿಪತಿಯಾಗುತ್ತಾರೋ? ಯಾರು ಯಾವಾಗ ಬಡವರಾಗುತ್ತಾರೋ? ತಿಳಿಯದು. ಆದರೆ ಬುದ್ಧಿವಂತಿಕೆಯಿಂದ ವ್ಯಾಪಾರ ಮಾಡಿದರೆ ನಷ್ಟಕ್ಕಿಂತ ಲಾಭವೇ ಹೆಚ್ಚು ಎಂದು ಅನೇಕರು ಈಗಾಗಲೇ ಸಾಬೀತುಪಡಿಸಿದ್ದಾರೆ.
ಈಗ ಓರ್ವ ಐಟಿ ಉದ್ಯೋಗಿ ಈ ಯಶಸ್ಸಿನ ಮಂತ್ರವನ್ನು ಯಶಸ್ವಿಯಾಗಿ ಅನುಸರಿಸಿ ತೋರಿಸಿದ್ದಾರೆ. ಹೆಚ್ಚುವರಿ ಆದಾಯಕ್ಕಾಗಿ ಕೇವಲ ₹500 ರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಿದ ಈಕೆ ಈಗ ₹2 ಕೋಟಿಗೂ ಹೆಚ್ಚು ಮೌಲ್ಯದ ಪೋರ್ಟ್‌ಫೋಲಿಯೊವನ್ನು ಹೊಂದಿದ್ದಾರೆ. ಅಂದರೆ ಷೇರು ಮಾರುಕಟ್ಟೆಯಲ್ಲಿ ಅವರು ಎಷ್ಟು ಹಣ ಸಂಪಾದನೆ ಮಾಡಿದ್ದಾರೆ ಎಂದು ಅರ್ಥಮಾಡಿಕೊಳ್ಳಬಹುದು.
ಟ್ಯೂಷನ್ ಹೇಳಿಕೊಂಡು ಓದಿದ ಯುವತಿ..
ಈ ಮಹಿಳಾ ಟೆಕ್ಕಿಯ ಹೆಸರು ಕವಿತಾ. 14ನೇ ವಯಸ್ಸಿನಲ್ಲಿಯೇ ತನ್ನ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಲು ಟ್ಯೂಷನ್ ಹೇಳಿಕೊಡಲು ಪ್ರಾರಂಭಿಸಿದರು. ಇದರಿಂದ ಟ್ಯೂಷನ್ ಮಕ್ಕಳ ಪೋಸಕರು ಕೊಡುತ್ತಿದ್ದ ಹಣವನ್ನು ತಾಯಿಗೆ ನೀಡಿ ಅವರಿಂದಲೂ ಬಡ್ಡಿ ಪಡೆಯುತ್ತಿದ್ದರಂತೆ. ಚಿಕ್ಕ ವಯಸ್ಸಿನಲ್ಲಿಯೇ ಹಣ ಸಂಪಾದನೆಯ ತಂತ್ರಗಳನ್ನು ಕಲಿತಿದ್ದರಿಂದಲೇ ಯಶಸ್ವಿ ವ್ಯಾಪಾರಿಯಾಗಲು ಸಾಧ್ಯವಾಯಿತು ಎಂದು ಯುವತಿ ಹೇಳಿಕೊಂಡಿದ್ದಾರೆ.
ಕಷ್ಟಗಳು ಬಂದರೂ.. ಧೈರ್ಯ ಕಳೆದುಕೊಳ್ಳಲಿಲ್ಲ: ಕಾಲೇಜಿನಲ್ಲಿ ಓದುತ್ತಿದ್ದಾಗ ತಂದೆಗೆ ಹಾಸ್ಟೆಲ್ ಶುಲ್ಕ ಕಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ ಕವಿತಾ ಪ್ರತಿದಿನ 3 ಗಂಟೆಗಳ ಕಾಲ ಬಸ್‌ನಲ್ಲಿ ಪ್ರಯಾಣಿಸಿ ಓದಬೇಕಾಯಿತು. ಆದರೆ ಎಂದಿಗೂ ಪರಿಸ್ಥಿತಿಗೆ ಮಣಿಯಲಿಲ್ಲ. ಆ ಧೈರ್ಯವೇ ಅವರನ್ನು ಉತ್ತಮ ವ್ಯಾಪಾರಿಯನ್ನಾಗಿ ಮಾಡಿತು.
ಕಚೇರಿಯಲ್ಲಿ ಷೇರು ಮಾರುಕಟ್ಟೆ ಪರಿಚಯ: ಪುಣೆಯ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಕೆಲವು ಸಹೋದ್ಯೋಗಿಗಳು ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ಕವಿತಾ ಗಮನಿಸಿದರು. ಮೊದಲಿಗೆ ಹೆಚ್ಚುವರಿ ಆದಾಯವಾಗಿ ಭಾವಿಸಿ ಆರಂಭಿಸಿದರು. ಆದರೆ ಶೀಘ್ರದಲ್ಲೇ ಮಾರುಕಟ್ಟೆಯ ಶಕ್ತಿಯನ್ನು ಅರಿತುಕೊಂಡರು. ನಂತರ ಷೇರು ಮಾರುಕಟ್ಟೆಯ ಖರೀದಿ ಮತ್ತು ಮಾರಾಟ ವ್ಯಾಪಾರವನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು.
ಸಾಲ ಪಡೆದು ಹಣ ಹೂಡಿಕೆ:
ಒಂದು ಸಮಯದಲ್ಲಿ ಕವಿತಾ ತಮ್ಮ ಕೈಲಿದ್ದ ಎಲ್ಲ ಹಣವನ್ನು ಕಳೆದುಕೊಂಡು ₹3 ಲಕ್ಷ ಸಾಲ ಪಡೆದುಕೊಂಡಿದ್ದರು. ಕವಿತಾಳ ನಡೆಯಿಂದ ಕುಟುಂಬದವರು ಮೊದಲಿಗೆ ಆತಂಕಗೊಂಡರು. ಆದರೆ ಅವರ ಪೋರ್ಟ್‌ಫೋಲಿಯೊ ₹20 ಲಕ್ಷ ದಾಟಿದಾಗ ಎಲ್ಲರೂ ಆಶ್ಚರ್ಯಚಕಿತರಾದರು. ಈಗ ಅವರ ಪೋರ್ಟ್‌ಫೋಲಿಯೊ ₹2 ಕೋಟಿಗೂ ಹೆಚ್ಚಿದೆ. ಇದರಿಂದ ಅವರು ಯಾವ ಮಟ್ಟದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬಹುದು.
ಇಂಟ್ರಾಡೇ ರಾಣಿ ಕವಿತಾ ಅವರ ವ್ಯಾಪಾರ ಶೈಲಿ:
ಕವಿತಾ ಈಗ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಆಯ್ಕೆ ವ್ಯಾಪಾರ ಮಾಡುತ್ತಾರೆ. ಅವರು ತಮ್ಮನ್ನು ಸ್ಥಾನಿಕ ಟ್ರೇಡರ್ ಆಗಿ ಪರಿವರ್ತಿಸಿಕೊಂಡಿದ್ದಾರೆ. ಆದರೆ ಆಯ್ಕೆ ವ್ಯಾಪಾರದ ಬಗ್ಗೆ ಅವರಿಗಿರುವ ತಿಳುವಳಿಕೆ ನೋಡಿ ವೃತ್ತಿಪರರು ಕೂಡ ಆಶ್ಚರ್ಯಚಕಿತರಾಗುತ್ತಾರೆ. ಕವಿತಾ 'ಧನಾತ್ಮಕ ದೃಷ್ಟಿಕೋನ ಹೊಂದಿರುವುದು, ಮಾರುಕಟ್ಟೆಯನ್ನು ಸ್ಪಷ್ಟವಾಗಿ ಗಮನಿಸುವುದೇ ನನ್ನ ಯಶಸ್ಸಿನ ಮಂತ್ರ' ಎಂದು ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಗಮನಿಸಿ: ಷೇರು ಮಾರುಕಟ್ಟೆ ಮಾಯಾಜಾಲದಂತೆ. ಇಲ್ಲಿ ಯಶಸ್ಸಿಗೆ ನಿರ್ದಿಷ್ಟ ಮಾರ್ಗವಿಲ್ಲ. ಯಾವುದೇ ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.