ಅರರೇ, ಮತ್ತೆ ಇಳಿಕೆಯಾಯ್ತು ಚಿನ್ನದ ಬೆಲೆ; 22 & 24 ಕ್ಯಾರಟ್ 1 ಗ್ರಾಂ ಬಂಗಾರದ ಬೆಲೆ ಎಷ್ಟು?
Gold And Silver Price Today: ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ. ಮದುವೆ ಸೀಸನ್ ಆರಂಭವಾಗಿರುವುದರಿಂದ ಚಿನ್ನ ಖರೀದಿಗೆ ಇದು ಸೂಕ್ತ ಸಮಯ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.

ಕಳೆದ ಎರಡ್ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಇಂದು ಮತ್ತೊಮ್ಮೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತವುಂಟಾಗಿದೆ. ಭಾರತದಲ್ಲಿ 22 ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಚಿನ್ನದ ಖರೀದಿ ಭರಾಟೆ ಜೋರಾಗುತ್ತಿದೆ. ಹಾಗಾಗಿ ಬೆಲೆ ಇಳಿಕೆಯಾಗುವ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಲು ಸೂಕ್ತ ಸಮಯವಾಗುತ್ತದೆ. ಚಿನ್ನದ ಬೆಲೆ ನಗರದಿಂದ ನಗರಕ್ಕೆ ಬೇರೆ ಬೇರೆಯಾಗಿರುತ್ತದೆ.
ಚಿನ್ನ ಖರೀದಿಸುವ ಕನಸು ನನಸಾಗುವ ಸಮಯ ಬಂದಿದೆ. ಬೆಲೆ ಇಳಿಕೆಯಾಗಿರುವ ದಿನದಂದು ಚಿನ್ನವನ್ನು ಮನೆಗೆ ಬರಮಾಡಿಕೊಳ್ಳಿ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,039 ರೂಪಾಯಿ
8 ಗ್ರಾಂ: 64,312 ರೂಪಾಯಿ
10 ಗ್ರಾಂ: 80,390 ರೂಪಾಯಿ
100 ಗ್ರಾಂ: 8,03,900 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,770 ರೂಪಾಯಿ
8 ಗ್ರಾಂ: 70,160 ರೂಪಾಯಿ
10 ಗ್ರಾಂ: 87,700 ರೂಪಾಯಿ
100 ಗ್ರಾಂ: 8,77,000 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 80,390 ರೂಪಾಯಿ, ಮುಂಬೈ: 80,390 ರೂಪಾಯಿ, ದೆಹಲಿ: 80,540 ರೂಪಾಯಿ, ಕೊಲ್ಕತ್ತಾ: 80,390 ರೂಪಾಯಿ, ಬೆಂಗಳೂರು: 80,390 ರೂಪಾಯಿ, ಹೈದರಾಬಾದ್: 80,390 ರೂಪಾಯಿ, ಪುಣೆ: 80,390 ರೂಪಾಯಿ, ಅಹಮದಾಬಾದ್: 80,390 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
10 ಗ್ರಾಂ: 990 ರೂಪಾಯಿ
100 ಗ್ರಾಂ:9,900 ರೂಪಾಯಿ
1000 ಗ್ರಾಂ: 99,000 ರೂಪಾಯಿ
ಎಷ್ಟು ಇಳಿಕೆ?
22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಮೇಲೆ 100 ರೂಪಾಯಿ ಇಳಿಕೆಯಾಗಿದೆ. ಚಿನ್ನದ ಜೊತೆಯಲ್ಲಿ ಬೆಳ್ಳಿ ದರವೂ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂ.ಗಳವರೆಗೆ ಇಳಿಕೆಯಾಗಿದೆ.