2 ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿ ಬದಲಾವಣೆ; ಇತ್ತ ಇಳಿಕೆಯಾದ ಬೆಳ್ಳಿ ದರ
Gold and Siler Price Today: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಭಾರತದ ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಜಾಗತೀಕ ಮಾರುಕಟ್ಟೆಯಲ್ಲಿನ ಕ್ಷಿಪ್ರ ವಿದ್ಯಮಾನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿರೋದನ್ನು ಗಮನಿಸಬಹುದು. ಸಾರ್ವಕಾಲಿಕ ದಾಖಲೆಯನ್ನು ಬರೆದ ಬಳಿಕ ದೇಶದಲ್ಲಿ ಮತ್ತೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ.
ಬೆಲೆ ಏರಿಕೆಯಿಂದ ಇನ್ನು ಚಿನ್ನ ಖರೀದಿ ಗಗನ ಕುಸುಮ ಆಗಲಿದೆ ಎಂದು ಮಧ್ಯಮ ವರ್ಗದ ಜನರು ಅಂದ್ಕೊಂಡಿದ್ದರು. ಕಳೆದ ಒಂದು ವಾರದಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 30 ರಿಂದ 35 ಸಾವಿರ ರೂ.ಗಳವರೆಗೆ ಇಳಿಕೆಯಾಗಿದೆ. ಭಾರತ ಮತ್ತು ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,755 ರೂಪಾಯಿ
8 ಗ್ರಾಂ: 70,040 ರೂಪಾಯಿ
10 ಗ್ರಾಂ: 87,550 ರೂಪಾಯಿ
100 ಗ್ರಾಂ: 8,75,500 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,551 ರೂಪಾಯಿ
8 ಗ್ರಾಂ: 76,408 ರೂಪಾಯಿ
10 ಗ್ರಾಂ: 95,510 ರೂಪಾಯಿ
100 ಗ್ರಾಂ: 9,55,100 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 87,550 ರೂಪಾಯಿ, ಮುಂಬೈ: 87,550 ರೂಪಾಯಿ, ದೆಹಲಿ: 87,700 ರೂಪಾಯಿ, ಕೋಲ್ಕತ್ತಾ: 87,550 ರೂಪಾಯಿ, ಬೆಂಗಳೂರು: 87,550 ರೂಪಾಯಿ, ಹೈದರಾಬಾದ್: 87,550 ರೂಪಾಯಿ, ವಡೋದರಾ: 87,760 ರೂಪಾಯಿ.
ಇಂದಿನ ಬೆಲೆಯ ವ್ಯತ್ಯಾಸ ಎಷ್ಟು?
ಕಳೆದ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿಂದು ಏರಿಕೆ ಕಂಡು ಬಂದಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂಪಾಯಿ, 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ.ಗಳಷ್ಟು ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂ.ಗಳಷ್ಟು ಇಳಿಕೆಯಾಗಿದೆ.
ದೇಶದಲ್ಲಿಂದು ಬೆಳ್ಳಿ ದರ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 969 ರೂಪಾಯಿ
100 ಗ್ರಾಂ: 9,690 ರೂಪಾಯಿ
1000 ಗ್ರಾಂ: 96,900 ರೂಪಾಯಿ