ಮೂರು ದಿನಗಳ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟ ಚಿನ್ನಾಭರಣ ಪ್ರಿಯರು; ಇಲ್ಲಿದೆ ಇಂದಿನ ಬೆಲೆ
Gold And Silver Price Today: ಕಳೆದ ಮೂರು ದಿನಗಳ ಏರಿಕೆಯ ನಂತರ ಇಂದು ಚಿನ್ನಭಾರಣ ಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷವು ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇಂದಿನ 24 ಮತ್ತು 22 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ದರಗಳನ್ನು ಲೇಖನದಲ್ಲಿ ವಿವರಿಸಲಾಗಿದೆ.

ಕಳೆದ ಮೂರು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಓಟಕ್ಕೆ ಬ್ರೇಕ್ ಬಿದ್ದಿದೆ. ಮೂರು ದಿನಗಳಲ್ಲಿ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿಮ 382 ರೂಪಾಯಿ ಏರಿಕೆಯಾಗಿತ್ತು. ಈ ಬೆಲೆ ಏರಿಕೆಗೆ ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಎಂದು ವಿಶ್ಲೇಷಿಸಲಾಗುತ್ತಿದೆ.
ಚಿನ್ನದ ಬೆಲೆ ಏರಿಕೆಯಾಗುತ್ತಿರೋದರಿಂದ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದರು. ಮತ್ತೊಂದೆಡೆ ಮತ್ತೆ ಚಿನ್ನದ ಬೆಲೆ ಹೆಚ್ಚಾದರೆ ಹೇಗೆ ಎಂಬ ಆತಂಕವೂ ಚಿನ್ನಾಭರಣ ಪ್ರಿಯರಲ್ಲಿ ಮನೆ ಮಾಡಿತ್ತು. ದೇಶದಲ್ಲಿಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,168 ರೂಪಾಯಿ
8 ಗ್ರಾಂ: 81,344 ರೂಪಾಯಿ
10 ಗ್ರಾಂ: 1,01,680 ರೂಪಾಯಿ
100 ಗ್ರಾಂ: 10,16,800 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,320 ರೂಪಾಯಿ
8 ಗ್ರಾಂ: 74,560 ರೂಪಾಯಿ
10 ಗ್ರಾಂ: 93,200 ರೂಪಾಯಿ
100 ಗ್ರಾಂ: 9,32,000 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,626 ರೂಪಾಯಿ
8 ಗ್ರಾಂ: 61,008 ರೂಪಾಯಿ
10 ಗ್ರಾಂ: 76,260 ರೂಪಾಯಿ
100 ಗ್ರಾಂ: 7,62,600 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ. ಚೆನ್ನೈ: 1,01,680 ರೂಪಾಯಿ, ಬೆಂಗಳೂರು: 1,01,680 ರೂಪಾಯಿ, ದೆಹಲಿ: 1,01,830 ರೂಪಾಯಿ, ಮುಂಬೈ: 1,01,680 ರೂಪಾಯಿ., ಕೋಲ್ಕತ್ತಾ: 1,01,680 ರೂಪಾಯಿ, ವಡೋದರ: 1,01,730 ರೂಪಾಯಿ, ಹೈದರಾಬಾದ್: 1,01,680 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,100 ರೂಪಾಯಿ
100 ಗ್ರಾಂ: 11,000 ರೂಪಾಯಿ
1000 ಗ್ರಾಂ: 1,10,000 ರೂಪಾಯಿ