ಷೇರು ಮಾರುಕಟ್ಟೆಯಲ್ಲಿ ನಿದ್ರೆಯಿಂದ ಎದ್ದ ರೈಲ್ವೆ ಷೇರುಗಳು, ನಾಗಾಲೋಟದ ಹಿಂದಿನ ಕಾರಣವೇನು?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಉತ್ತಮವಾಗಿದ್ದು . ಸೆನ್ಸೆಕ್ಸ್ ಸುಮಾರು 200 ಅಂಕಗಳ ಏರಿಕೆಯನ್ನು ತೋರಿಸುತ್ತಿದ್ದರೆ ನಿಫ್ಟಿ ಕೂಡ 19500 ದಾಟಿದೆ.
50 ನಿಫ್ಟಿ ಷೇರುಗಳ ಪೈಕಿ 37 ಷೇರುಗಳು ಏರಿಕೆಯೊಂದಿಗೆ ಮತ್ತು 13 ಷೇರುಗಳು ಕುಸಿತ ಕಂಡಿದೆ.. ಮಾರುಕಟ್ಟೆಯಲ್ಲಿ ರೈಲ್ವೇ ಷೇರುಗಳ ಏರಿಕೆಯಿಂದಾಗಿ ಬಲ ಕಂಡುಬಂದಿದೆ.
ಇಂದು ರೈಲ್ವೇ ವಲಯದ ಷೇರುಗಳ ಸಖತ್ ಏರಿಕೆ ಕಂಡಿದ್ದು. ಸುಮಾರು 18 ಪರ್ಸೆಂಟ್‌ನಷ್ಟು ಜಿಗಿತ ಸಾಧಿಸಿದ್ದು 9 ರೂಪಾಯಿಗೂ ಅಧಿಕ ಏರಿಕೆ ದಾಖಲಿಸಿ 66 ರೂಪಾಯಿ ಗಡಿದಾಟಿದೆ.
ಗಣಿಗಾರಿಕೆ ಪ್ರದೇಶಗಳು, ಸಿಮೆಂಟ್ ಸ್ಥಾವರಗಳಿಗೆ ರೈಲು ಸಂಪರ್ಕವನ್ನು ಸುಧಾರಿಸಲು 2024-31 ರ ಆರ್ಥಿಕ ವರ್ಷಗಳಲ್ಲಿ ₹ 5.25 ಲಕ್ಷ ಕೋಟಿ ಹೂಡಿಕೆ ಪಡೆಯಲು ಕೇಂದ್ರ ರೈಲ್ವೆ ಸಚಿವಾಲಯದ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಯೋಜನೆಯ ನಂತರ ರೈಲ್ವೇ ಷೇರುಗಳು ಏರುತ್ತಿವೆ.
Indian Railway Finance Corporation Ltd ಅಧಿಕ ಏರಿಕೆ ದಾಖಲೆಯನ್ನು ಕಂಡಿದ್ದು 18 ಪರ್ಸೆಂಟ್‌ನಷ್ಟು ಜಿಗಿತ ಸಾಧಿಸಿದೆ. ಮುಂದಿನ ದಿನಗಳಲ್ಲಿ ಇದು ₹ 72 ಮಟ್ಟಕ್ಕೆ ಏರಬಹುದು.
RVNL 2023 ರಲ್ಲಿ ಅತಿ ಹೆಚ್ಚು ಲಾಭದಾಯಕವಾಗಿದೆ.ಕಳೆದ ಆರು ತಿಂಗಳಲ್ಲಿ ಗರಿಷ್ಠ ಲಾಭವನ್ನು ನೀಡುತ್ತಿದೆ. . ಮುಂದಿನ ದಿನಗಳಲ್ಲಿ ಇದು ₹160 ಮಟ್ಟಕ್ಕೆ ಏರಬಹುದು..
IRCTC ಷೇರಿನ ಬೆಲೆಯು ಪ್ರತಿ ಹಂತಗಳಲ್ಲಿ ₹675 ಬ್ರೇಕೌಟ್ ಮಾಡಿದೆ ಮತ್ತು ಸ್ಟಾಕ್ ಚಾರ್ಟ್ ನಲ್ಲಿ ಧನಾತ್ಮಕವಾಗಿ ಕಾಣುತ್ತಿದೆ. ಇದು ಕೆಲವೆ ದಿನಗಲ್ಲಿ ಕ್ರಮವಾಗಿ ₹725 ಮತ್ತು ₹750 ಮಟ್ಟಕ್ಕೆ ಏರಬಹುದು.