ಹೈನುಗಾರಿಕೆ ಆರಂಭಿಸಲು ಈ ಬ್ಯಾಂಕ್ ನೀಡುತ್ತಿದೆ ₹10 ಲಕ್ಷ ಸಾಲ
SBI ಪಶುಪಾಲನೆ ಯೋಜನೆಯಡಿ ₹10 ಲಕ್ಷದವರೆಗೆ ಸಾಲ ಪಡೆಯಬಹುದು. ಹಸು, ಎಮ್ಮೆ ಸಾಕಣೆ ಮಾಡುವವರಿಗೆ ಈ ಯೋಜನೆ ತುಂಬಾ ಉಪಯುಕ್ತ.
SBI ಪಶುಪಾಲನ ಯೋಜನೆ 2024
SBI ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಪಶುಪಾಲನೆ ಯೋಜನೆಯಿಂದ ₹10 ಲಕ್ಷದವರೆಗೆ ಸಾಲ ಸಿಗುತ್ತದೆ. ಈ ಯೋಜನೆಯಡಿ ಸಾಲ ಪಡೆದು, ಹೈನುಗಾರಿಕೆಯನ್ನು ಆರಂಭಿಸಬಬಹುದು.
ಈ ಯೋಜನೆಯಲ್ಲಿ ಯಾರೇ ಆದ್ರೂ ಅರ್ಜಿ ಹಾಕಬಹುದು. ಕೆಲವು ನಿಯಮಗಳನ್ನು ಪಾಲಿಸಬೇಕು. ಲಕ್ಷಾಂತರ ಜನ ಈ ಯೋಜನೆಯಿಂದ ಲಾಭ ಪಡೆದಿದ್ದಾರೆ. ಸ್ವಂತ ಉದ್ಯಮ ಆರಂಭಿಸಬೇಕು, ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಬೇಕ ಎಂದು ಕನಸು ಕಂಡಿರುವ ಜನರಿಗೆ ಈ ಯೋಜನೆ ಆಸರೆಯಾಗಲಿದೆ.
SBI ಪಶುಪಾಲನಾ ಸಾಲಕ್ಕೆ ಅರ್ಜಿ ಹಾಕುವ ಮುನ್ನ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಸುಗಳಿಗೆ ₹60,000, ಎಮ್ಮೆಗಳಿಗೆ ₹70,000 ಸಾಲ ಸಿಗುತ್ತದೆ.
ಅರ್ಜಿದಾರರು ತಮ್ಮಲ್ಲಿರುವ ಎಲ್ಲಾ ಪಶುಗಳ ಸಂಖ್ಯೆಯನ್ನು ಬ್ಯಾಂಕಿಗೆ ತಿಳಿಸಬೇಕು. ಪಶುಪಾಲನೆಗೆ ಸಂಬಂಧಿಸಿದ ದಾಖಲೆಗಳಿರಬೇಕು. ಬೇರೆ ಬ್ಯಾಂಕಿನಲ್ಲಿ ಸಾಲ ಇದ್ದರೆ ಅದನ್ನು ತೀರಿಸಿರಬೇಕು. ಅಂದರೆ ಬೇರೆ ಯಾವ ಬ್ಯಾಂಕಿನಲ್ಲಿ ಯಾವುದೇ ಸಾಲವನ್ನು ಹೊಂದಿರಬಾರದು.
ಪಶುಪಾಲನ ಯೋಜನೆಯ ಸಾಲವನ್ನು ಪಶುಪಾಲನೆಗೆ ಮಾತ್ರ ಬಳಸಬೇಕು. ಇಲ್ಲದಿದ್ದರೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಯಿಂದ ಪರಿಶೀಲನೆ ಕಾರ್ಯವೂ ಸಹ ನಡೆಯುತ್ತದೆ.
SBI ಸಾಲಗಳು
ಹತ್ತಿರದ SBI ಶಾಖೆಗೆ ಹೋಗಿ ಪಶುಪಾಲನೆ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ತುಂಬಿ, ದಾಖಲೆಗಳನ್ನು ಲಗತ್ತಿಸಬೇಕು. ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿ ಸಾಲ ಮಂಜೂರು ಮಾಡುತ್ತಾರೆ.