ಫಾರ್ಚೂನ್ ಗ್ಲೋಬಲ್ ಪಟ್ಟಿಯಲ್ಲಿ ರಿಲಯನ್ಸ್ ಭಾರತದ ಅತ್ಯುನ್ನತ ಕಂಪನಿ, ಇಲ್ಲಿದೆ ಲಿಸ್ಟ್
ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯನ್ನು ಫಾರ್ಚೂನ್ ಗ್ಲೋಬಲ್ ಬಿಡುಗಡೆ ಮಾಡಿದೆ. ವಿಶ್ವದ 500 ಬೆಸ್ಟ್ ರ್ಯಾಕಿಂಗ್ ಕಂಪನಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಿಲಯನ್ಸ್ ಭಾರತದ ಅತ್ಯುತ್ತಮ ರ್ಯಾಂಕ್ ಕಂಪನಿಯಾಗಿ ಗುರುತಿಸಿಕೊಂಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಕಂಪನಿಗಳು ಯಾವುದು?

ವಿಶ್ವದ ಅತ್ಯುತ್ತಮ ಕಂಪನಿಗಳು ಯಾವುದು? ಇದೀಗ ಫಾರ್ಚೂನ್ ಗ್ಲೋಬಲ್ ವಿಶ್ವದ ಬೆಸ್ಟ್ ರ್ಯಾಂಕಿಂಗ್ ಹೊಂದಿರುವ 500 ಕಂಪನಿಗಳ ಲಿಸ್ಟ್ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ರಿಲಯನ್ಸ್ ಭಾರತದ ಅತ್ಯುತ್ತಮ ಶ್ರೇಣಿಯ ಕಂಪನಿಯಾಗಿ ಗುರುತಿಸಿಕೊಂಡಿದೆ. ರಿಲಯನ್ಸ್ ಫಾರ್ಚೂನ್ ಗ್ಲೋಬಲ್ ಪಟ್ಟಿಯಲ್ಲಿ 88ನೇ ಸ್ಥಾನ ಪಡೆದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಈ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಭಾರತೀಯ ಕಂಪನಿಯಾಗಿದೆ. ಟಾಪ್ 100 ಪಟ್ಟಿಯಲ್ಲಿ ಭಾರತದ 2 ಕಂಪನಿ ಮಾತ್ರ ಸ್ಥಾನ ಪಡೆದಿದೆ. ರಿಲಯನ್ಸ್ 88ನೇ ಸ್ಥಾನದಲ್ಲಿದ್ದರೆ. ಎಲ್ಐಸಿ 95ನೇ ಸ್ಥಾನ ಪಡೆದುಕೊಂಡಿದೆ.
ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಒಟ್ಟು 9 ಭಾರತೀಯ ಕಂಪನಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ, ಆ ಪೈಕಿ ರಿಲಯನ್ಸ್ ಸತತ 22 ವರ್ಷಗಳಿಂದ ಪ್ರತಿಷ್ಠಿತ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಯಾವುದೇ ಖಾಸಗಿ ವಲಯದ ಭಾರತೀಯ ಕಂಪನಿಯು ಈ ಪಟ್ಟಿಯಲ್ಲಿ ಇಷ್ಟು ದೀರ್ಘಕಾಲ ಉಳಿಯಲು ಸಾಧ್ಯವಾಗಿಲ್ಲ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ರಿಲಯನ್ಸ 2 ಸ್ಥಾನ ಕುಸಿತ ಕಂಡಿದೆ. ಕಳೆದ ವರ್ಷ ರಿಲಯನ್ಸ್ 86ನೇ ಸ್ಥಾನ ಪಡೆದುಕೊಂಡಿತ್ತು.ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದೆರ ರಿಲಯನ್ಸ್ ಅದ್ವಿತೀಯ ಸಾಧನೆ ಮಾಡಿದೆ. ಕಾರಣ 2021ರಲ್ಲಿ 155ನೇ ಸ್ಥಾನದಲ್ಲಿ ಇದ್ದ ರಿಲಯನ್ಸ್ ಇದೀಗ 67 ಸ್ಥಾನಗಳ ಏರಿಕೆಯನ್ನು ದಾಖಲಿಸಿದೆ.
'ಫಾರ್ಚೂನ್ ಗ್ಲೋಬಲ್ 500' ಪಟ್ಟಿಯು ಒಟ್ಟು ಆದಾಯದ ಆಧಾರದ ಮೇಲೆ ಕಂಪನಿಗಳನ್ನು ಶ್ರೇಣೀಕರಿಸುತ್ತದೆ. ಈ ಪಟ್ಟಿಯಲ್ಲಿ ಐದು ಸಾರ್ವಜನಿಕ ವಲಯ ಮತ್ತು ನಾಲ್ಕು ಖಾಸಗಿ ವಲಯದ ಭಾರತೀಯ ಕಂಪನಿಗಳು ಸೇರಿವೆ. ರಿಲಯನ್ಸ್ ಹೊರತುಪಡಿಸಿದರೆ ಎಲ್‌ಐಸಿ 95 ನೇ ಸ್ಥಾನದಲ್ಲಿದೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ 127ನೇ ಸ್ಥಾನ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 163ನೇ ಸ್ಥಾನ, ಒಎನ್‌ಜಿಸಿ 181ನೇ ಸ್ಥಾನ, ಎಚ್‌ಡಿಎಫ್‌ಸಿ ಬ್ಯಾಂಕ್ 258ನೇ ಸ್ಥಾನ, ಟಾಟಾ ಮೋಟಾರ್ಸ್ 283ನೇ ಸ್ಥಾನ, ಬಿಪಿಸಿಎಲ್ 285ನೇ ಸ್ಥಾನ ಮತ್ತು ಐಸಿಐಸಿಐ ಬ್ಯಾಂಕ್ 464ನೇ ಸ್ಥಾನದಲ್ಲಿದೆ.
ರಿಲಯನ್ಸ್ 25ರ ಹಣಕಾಸು ವರ್ಷದಲ್ಲಿ ರೂ. 10,71,174 ಕೋಟಿಗಳ ದಾಖಲೆಯ ಏಕೀಕೃತ ಒಟ್ಟು ಆದಾಯವನ್ನು ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇ 7.1ರಷ್ಟು ಹೆಚ್ಚಾಗಿದೆ. ಇಬಿಐಟಿಡಿಎ ಕೂಡ ಶೇ 2.9ರಷ್ಟು ಬೆಳವಣಿಗೆ ಕಂಡು, ರೂ. 1,83,422 ಕೋಟಿಗೆ ತಲುಪಿದೆ. ತೈಲದಿಂದ ರಾಸಾಯನಿಕ, ತೈಲ ಮತ್ತು ಅನಿಲ, ರೀಟೇಲ್ ವ್ಯಾಪಾರ ಮತ್ತು ಡಿಜಿಟಲ್ ಸೇವೆಗಳಂತಹ ರಿಲಯನ್ಸ್‌ನ ಎಲ್ಲ ವ್ಯವಹಾರಗಳು ಅಗಾಧ ಬೆಳವಣಿಗೆಯನ್ನು ದಾಖಲಿಸಿವೆ.
ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ವಾಲ್‌ಮಾರ್ಟ್, ಅಮೆಜಾನ್ ಮತ್ತು ಸ್ಟೇಟ್ ಗ್ರಿಡ್ ಅಗ್ರ ಮೂರು ಕಂಪನಿಗಳಾಗಿವೆ. ಇದರ ಹೊರತಾಗಿ ಚೀನಾ ನ್ಯಾಷನಲ್ ಪೆಟ್ರೋಲಿಯಂ, ಸೌದಿ ಅರಾಮ್ಕೊ ಮತ್ತು ಆಪಲ್‌ನಂತಹ ಕಂಪನಿಗಳು ಟಾಪ್ 10ರಲ್ಲಿ ಸ್ಥಾನ ಪಡೆದಿವೆ.