MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಅದಾನಿ ಅಂಬಾನಿ ಯಾರೂ ಅಲ್ಲ, ಸ್ವಂತ ಗಿರಿಧಾಮ ಇರುವ ಭಾರತದ ಏಕೈಕ ಉದ್ಯಮಿ!

ಅದಾನಿ ಅಂಬಾನಿ ಯಾರೂ ಅಲ್ಲ, ಸ್ವಂತ ಗಿರಿಧಾಮ ಇರುವ ಭಾರತದ ಏಕೈಕ ಉದ್ಯಮಿ!

ಅಜಯ್ ಹರಿನಾಥ್ ಸಿಂಗ್ ಅವರ ಡಾರ್ವಿನ್ ಪ್ಲಾಟ್‌ಫಾರ್ಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಮುಂಬೈ ಬಳಿಯ ಲವಾಸಾ ಗಿರಿಧಾಮ ಯೋಜನೆಯನ್ನು ಸ್ವಾಧೀನಪಡಿಸಿಕೊಂಡಿದೆ. ಸ್ಥಗಿತಗೊಂಡಿದ್ದ ಈ ಯೋಜನೆಯನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಸಿಂಗ್ ಹೊಂದಿದ್ದಾರೆ.

2 Min read
Gowthami K
Published : Apr 29 2025, 06:45 PM IST| Updated : Apr 29 2025, 07:21 PM IST
Share this Photo Gallery
  • FB
  • TW
  • Linkdin
  • Whatsapp
15

ಅಜಯ್ ಹರಿನಾಥ್ ಸಿಂಗ್ ಅವರು ಇತ್ತೀಚೆಗೆ ಭಾರತದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಈಗ ಪೂರ್ಣ ಪ್ರಮಾಣದ ಗಿರಿಧಾಮ (hill city) ವನ್ನು ಹೊಂದಿರುವ  ಮತ್ತು ಅಭಿವೃದ್ಧಿಪಡಿಸುವ ಏಕೈಕ ಭಾರತೀಯ ಕಂಪನಿ ಏಕೈಕ ವ್ಯಕ್ತಿಯಾಗಿ ಎನಿಸಿಕೊಂಡಿದ್ದಾರೆ .   ಅವರ ಸಂಸ್ಥೆಯಾದ ಡಾರ್ವಿನ್ ಪ್ಲಾಟ್‌ಫಾರ್ಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (DPIL), ಮುಂಬೈ ಬಳಿಯ ಸುಂದರವಾದ ಆದರೆ ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಯೋಜನೆಯಾದ ಲವಾಸವನ್ನು ಸ್ವಾಧೀನಪಡಿಸಿಕೊಳ್ಳಲು ಹಸಿರು ನಿಶಾನೆ ತೋರಿಸಲಾಗಿದೆ.

25

ಲವಾಸಾ ಏನು?
ಲವಾಸಾ ಒಂದು ಕೃತಕ ಗಿರಿಧಾಮ ನಗರ ಯೋಜನೆಯಾಗಿದ್ದು, ಇದು ಮುಂಬೈನಿಂದ ಸುಮಾರು 180 ಕಿಲೋಮೀಟರ್ ದೂರದಲ್ಲಿದೆ ಮತ್ತು ಪುಣೆಯ ಬಳಿಯಲ್ಲಿದೆ. ಪಶ್ಚಿಮ ಘಟ್ಟದ ಮೂಲ್ಶಿ ಕಣಿವೆಯ ನಡುವೆ 20,000 ಎಕರೆಗಳಷ್ಟು ಭೂಮಿಯ ಮೇಲೆ ಲವಾಸಾ ನಿರ್ಮಾಣವಾಗಬೇಕಾಗಿತ್ತು. ಇದು ಯುರೋಪಿಯನ್ ಶೈಲಿಯ ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿತ್ತು. ಆದರೆ ಈ ಯೋಜನೆ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು.

1 ಲಕ್ಷವಾದ ಬಳಿಕ ಭಾರತದದಲ್ಲಿ ಚಿನ್ನದ ಬೆಲೆ ಕುಸಿತ ಕಾಣುತ್ತಿರೋದ್ಯಾಕೆ? ಇಂದಿನ ದರ ಎಷ್ಟು?

35

ಕಂಪನಿಯ ಬಗ್ಗೆ
ಸಿಂಗ್ ಅವರು ಡಾರ್ವಿನ್ ಪ್ಲಾಟ್‌ಫಾರ್ಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (DPIL) ಎಂಬ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯು ಲವಾಸಾ ಯೋಜನೆಯನ್ನು ವಶಪಡಿಸಿಕೊಳ್ಳಲು NCLT (National Company Law Tribunal) ಅನುಮತಿ ನೀಡಿದೆ. ಸಿಂಗ್ ಅವರ ಈ ಸಾಧನೆಯಿಂದ ಅವರು ಲವಾಸಾ ನಗರವನ್ನು ಪುನಃ ಜೀವಂತಗೊಳಿಸಲು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸಿಂಗ್ ಮುಂಬೈ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. ಇಂದು ಅವರು ಸುಮಾರು ₹68,796 ಕೋಟಿ ಮೌಲ್ಯದ (ಸುಮಾರು 8.4 ಬಿಲಿಯನ್ ಡಾಲರ್) ಸಂಸ್ಥೆಯನ್ನೇ ಮುನ್ನಡೆಸುತ್ತಿದ್ದಾರೆ. ಗಮನಿಸಬೇಕಾದ ವಿಷಯವೆಂದರೆ, ಅವರ ಎಲ್ಲಾ ಕಂಪನಿಗಳು ಸಾಲ ಮುಕ್ತವಾಗಿವೆ ಎಂಬುದು ವಿಶೇಷ.

45

ವಿಶ್ವಮಟ್ಟದ ಉದ್ಯಮಿ
ಅಜಯ್ ಸಿಂಗ್ ಅವರು ಕೇವಲ ಲವಾಸಾ ಯೋಜನೆಗೆ ಮಾತ್ರ ಸೀಮಿತವಿಲ್ಲ. ಅವರ ಡಾರ್ವಿನ್ ಪ್ಲಾಟ್‌ಫಾರ್ಮ್  ಗ್ರೂಪ್ ಸುಮಾರು 11 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು 21ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಈ ಕಂಪನಿಗಳು ಮೂಲಸೌಕರ್ಯ, ಚಿಲ್ಲರೆ ವ್ಯಾಪಾರ, ಆತಿಥ್ಯ (ಹೋಟೆಲ್), ಹಣಕಾಸು ಸೇವೆ ಮೊದಲಾದ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅವರು ಜೆಟ್ ಏರ್‌ವೇಸ್, ಏರ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮುಂತಾದ ಪ್ರಮುಖ ಸಂಸ್ಥೆಗಳನ್ನು ಖರೀದಿಸಲು ಪ್ರಯತ್ನಿಸಿದ್ದಾರೆ. ರಿಲಯನ್ಸ್ ಕ್ಯಾಪಿಟಲ್ ಸಂಸ್ಥೆಯ ಮೇಲೂ ಆಸಕ್ತಿ ತೋರಿಸಿದ್ದಾರೆ.

11 ಕಿ.ಮೀಗೆ ಕೇವಲ 166 ರೂ: ಪ್ರಾಮಾಣಿಕ ಆಟೋ ಚಾಲಕನಿಗೆ ಪ್ರಯಾಣಿಕನ ಸಲಾಂ!

55

ಭವಿಷ್ಯದ ಲವಾಸಾ
ಸಿಂಗ್ ಅವರು ಲವಾಸಾ ಬಗ್ಗೆ ಮಾತನಾಡುತ್ತಾ, “ಇದು ವಿಶ್ವದರ್ಜೆಯ ಸ್ಮಾರ್ಟ್ ಸಿಟಿ ಆಗಬೇಕೆಂಬ ಮಹತ್ವದ ಯೋಜನೆ. ನಾವು ಇದನ್ನು ಪುನರ್ ಅಭಿವೃದ್ಧಿ ಮಾಡುವುದು ನಮ್ಮ ಗುರಿ,” ಎಂದು ಹೇಳಿದ್ದಾರೆ. ಅವರ ನಾಯಕತ್ವದಲ್ಲಿ ಲವಾಸಾ ಮತ್ತೆ ಜನಜೀವನದ ಭಾಗವಾಗಲಿದ್ದು, ಭವಿಷ್ಯದ ದೊಡ್ಡ ನಗರವಲ್ಲದೇ ಪರಿಸರ ಸ್ನೇಹಿ ಗಿರಿಧಾಮವನ್ನಾಗಿ ರೂಪುಗೊಳ್ಳಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವ್ಯವಹಾರ
ವ್ಯಾಪಾರ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved