ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಜುಕರ್‌ಬರ್ಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಲ್ಯಾರಿ ಎಲ್ಲಿಸನ್ ಯಾರು?
ಜಾಗತಿಕ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ 2ನೇ ಸ್ಥಾನವನ್ನು ಲ್ಯಾರಿ ಎಲ್ಲಿಸನ್ ಆಕ್ರಮಿಸಿಕೊಂಡಿದ್ದಾರೆ. ಯಾರು ಈ ಎಲ್ಲಿಸನ್? ನಂ.1 ಯಾರು? ಇಲ್ಲಿದೆ ಪಟ್ಟಿ

ವಿಶ್ವದ ಶ್ರೀಮಂತರು ಯಾರು? ಬ್ಲೂಮ್‌ಬರ್ಗ್ ಬಿಲೇನಿಯರ್ ಪಟ್ಟಿ ಬಿಡುಗಡೆ ಮಾಡಿದೆ. ಜಾಗತಿಕವಾಗಿ ಹಲವು ಬದಲಾವಣೆಯಾಗಿದೆ. ಮಾರುಕಟ್ಟೆಯಲ್ಲೂ ಹಲವು ಏರಿಳಿತವಾಗಿದೆ. ಇದರ ನಡುವೆ ಬಿಡುಗಡೆಯಾದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. 2ನೇ ಸ್ಥಾನದಲ್ಲಿದ್ದ ಮಾರ್ಕ್ ಜುಕರ್‌ಬರ್ಗ್ ಕುಸಿತ ಕಂಡಿದ್ದಾರೆ. ನಂ.1 ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಕಾರಣ ಈ ಸ್ಥಾನದಲ್ಲಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಕುಳಿತಿದ್ದಾರೆ.
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಈ ಬಾರಿ 2ನೇ ಸ್ಥಾನದ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ಬಾರಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಸ್ಥಾನವನ್ನು ಲ್ಯಾರಿ ಎಲ್ಲಿಸನ್ ಆಕ್ರಮಿಸಿದ್ದಾರೆ. ಲ್ಯಾರಿ ಎಲ್ಲಿಸನ್ ಒರಾಕಲ್ ಸಂಸ್ಥೆಯ ಚೇರ್ಮೆನ್ ಹಾಗೂ ಸಿಇಒ. 80 ವರ್ಷದ ಲ್ಯಾರಿ ಎಲ್ಲಿಸನ್ ಒರಾಕಲ್ ಸಂಸ್ಥೆಯ ಶೇಕಡಾ 80 ರಷ್ಟು ಪಾಲು ಹೊಂದಿದ್ದಾರೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್, ತಂತ್ರಜ್ಞಾನ, ಸಾಫ್ಟ್‌ವೇರ್ ಸೇರಿದಂತೆ ಹಲವು ಮಹತ್ವದ ಬೆಳವಣಿಗೆ ಹಾಗೂ ಬೇಡಿಕೆಯಿಂದ ಲ್ಯಾರಿ ಎಲ್ಲಿಸನ್ ಒಟ್ಟು ನೆಟ್‌ವರ್ತ್ ಇದೀಗ 251.2 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ.
ಬ್ಲೂಮ್‌ಬರ್ಗ್ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿ-ಟಾಪ್ 10
ಎಲಾನ್ ಮಸ್ಕ್ :358 ಬಿಲಿಯನ್ ಅಮೆರಿಕನ್ ಡಾಲರ್
ಲ್ಯಾರಿ ಎಲ್ಲಿಸನ್ : 251.2 ಬಿಲಿಯನ್ ಅಮೆರಿಕನ್ ಡಾಲರ್
ಮಾರ್ಕ್ ಜುಕರ್‌ಬರ್ಗ್: 251 ಬಿಲಿಯನ್ ಅಮೆರಿಕನ್ ಡಾಲರ್
ಜೆಫ್ ಬೆಜೋಸ್ : 247 ಬಿಲಿಯನ್ ಅಮೆರಿಕನ್ ಡಾಲರ್
ಸ್ಟೀವ್ ಬಾಲ್ಮರ್ :174 ಬಿಲಿಯನ್ ಅಮೆರಿಕನ್ ಡಾಲರ್
ಲ್ಯಾರಿ ಪೇಜ್ : 165 ಬಿಲಿಯನ್ ಅಮೆರಿಕನ್ ಡಾಲರ್
ಬರ್ನಾರ್ಡ್ ಅರ್ನಾಲ್ಟ್ : 156ಬಿಲಿಯನ್ ಅಮೆರಿಕನ್ ಡಾಲರ್
ಸರ್ಗೆ ಬ್ರಿನ್ : 154 ಬಿಲಿಯನ್ ಅಮೆರಿಕನ್ ಡಾಲರ್
ಜೆನ್ಸೆನ್ ಹಾಂಗ್ : 149 ಬಿಲಿಯನ್ ಅಮೆರಿಕನ್ ಡಾಲರ್
ವಾರೆನ್ ಬಫೆಟ್ : 141 ಬಿಲಿಯನ್ ಅಮೆರಿಕನ್ ಡಾಲರ್
ಮಾರ್ಕ್ ಜುಕರ್‌ಬರ್ಗ್ ಆಸ್ತಿ 251 ಬಿಲಿಯನ್ ಅಮೆರಿಕನ್ ಡಾಲರ್. ಹೀಗಾಗಿ 3ನೇ ಸ್ಥಾನಕ್ಕೆ ಜುಕರ್‌ಬರ್ಗ್ ಕುಸಿದಿದ್ದಾರೆ. ಒರಾಕಲ್ ಷೇರುಗಳು ಜುಲೈ ತಿಂಗಳಲ್ಲಿ ಶೇಕಡಾ 5.7 ರಷ್ಟು ಜಿಗಿತ ಕಂಡಿತ್ತು. ಇನ್ನು ಚಿಪ್ ಹಾಗೂ ಸೆಮಿಕಂಡಕ್ಟರ್ ರಫ್ತು ಮೇಲಿನಿ ನಿರ್ಬಂಧ ಇತ್ತಿಚೀಗೆ ಟ್ರಂಪ್ ತೆರಿಗೆ ನೀತಿಯಿಂದ ಕೊಂಚ ಸಲೀಸಾಲಿಗಿದೆ. ಇದರ ಪರಿಣಾಮ ಲ್ಯಾರಿ ಎಲ್ಲಿಸನ್ ಆಸ್ತಿ ಹೆಚ್ಚಾಗಿದೆ. ಒಂದೇ ದಿನದಲ್ಲಿ ಲ್ಯಾರಿ ಎಲ್ಲಿಸನ್ ಆಸ್ತಿ 4.71 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚಾಗಿತ್ತು.
ಇತ್ತ ಮಾರ್ಕ್ ಜುಕರ್‌ಬರ್ಗ್ ನೆಟ್‌ವರ್ತ್ ಇತ್ತೀಚೆಗೆ 3.59 ಬಿಲಿಯನ್ ನಷ್ಟಕಂಡಿದ್ದರು. ಹೀಗಾಗಿ ಜುಕರ್‌ಬರ್ಗ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಜೆಫ್ ಬೆಜೋಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇತ್ತ ನಂಬರ್ 1 ಸ್ಥಾನದಲ್ಲಿರುವ ಎಲಾನ್ ಮಸ್ಕ್ ಆಸ್ತಿ ಬರೋಬ್ಬರಿ 357.8 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. ಹೀಗಾಗಿ ಸದ್ಯ ಎಲಾನ್ ಮಸ್ಕ್ ಹಿಂದಿಕ್ಕುವುದು ಅತ್ಯಂತ ಸವಾಲು ಎಂಬಂತಾಗಿದೆ.
ಒರಾಕಲ್ ಟೆಕ್ ಸಂಸ್ಥೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಕ್ರಾಂತಿ ಮಾಡುತ್ತಿದೆ. ಎಐ ಮೂಲಕ ಒರಾಕಲ್ ಅತೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದರೊಂದಿಗೆ ಒರಾಕಲ್ ಚೆರ್ಮೆನ್ ಲ್ಯಾರಿ ಎಲ್ಲಿಸನ್ ಆಸ್ತಿ ಕೂಡ ದಿನದಿಂದ ದಿನಕ್ಕೆ ಡಬಲ್ ಆಗುತ್ತಿದೆ. ಎಪ್ರಿಲ್ ತಿಂಗಳಿನಿಂದ ಇಲ್ಲೀವರೆಗೆ ಲ್ಯಾರಿ ಎಲ್ಲಿಸನ್ ಒರಾಕಲ್ ಷೇರುಗಳು ಶೇಕಡಾ 90 ರಷ್ಟು ಜಿಗಿತ ಕಂಡಿದೆ.