ಇನ್ನೊಂದೇ ವಾರ ಬಾಕಿ! ಮಾರ್ಚ್ 31ರೊಳಗೆ ಹಣಕಾಸಿನ ಈ ಕೆಲಸಗಳನ್ನ ಮುಗಿಸಿ, ಇಲ್ಲಾಂದ್ರೆ ತೊಂದ್ರೆ ಫಿಕ್ಸ್!
ಪ್ರತಿಯೊಬ್ಬ ಮನುಷ್ಯನೂ ಆರ್ಥಿಕವಾಗಿ ಗಟ್ಟಿಯಾಗಿರಬೇಕು. ಎಷ್ಟೇ ಸಂಪಾದಿಸಿದರೂ ಕೆಲವು ಸಲ ಸಮಸ್ಯೆಗಳು ನಮ್ಮನ್ನು ಆರ್ಥಿಕವಾಗಿ ಕೆಳಗೆ ತಳ್ಳುತ್ತವೆ. ಇನ್ನೂ ಕೆಲವು ಸಲ ದೇಶದಲ್ಲಿರುವ ಸೌಲಭ್ಯಗಳನ್ನು ಕಳೆದುಕೊಳ್ಳುತ್ತೇವೆ. ಮಾರ್ಚ್ ತಿಂಗಳು ಮುಗಿಯುತ್ತಿದೆ. ಈ ಐದು ಕೆಲಸಗಳನ್ನು ಮಾಡಿದ್ರೆ ಮಾತ್ರ ನಿಮ್ಮ ಹಣ ಉಳಿಯುತ್ತೆ. ಹಾಗಾದ್ರೆ ಏನು ಮಾಡಬೇಕು?

ಆರ್ಥಿಕವಾಗಿ ಸ್ವಲ್ಪ ಹಣ ಉಳಿಸಲು, ಅನಗತ್ಯ ಖರ್ಚುಗಳನ್ನು ತಪ್ಪಿಸಲು ಈ ಸೂತ್ರಗಳನ್ನು ಅನುಸರಿಸಿ. ಮಾರ್ಚ್ 31ರೊಳಗೆ ಈ ಕೆಲಸಗಳನ್ನು ಮುಗಿಸಿಕೊಳ್ಳಿ.

ಫಾರ್ಮ್ 12 ಬಿಬಿ ಎಲ್ಲಾ ಸಂಬಳ ಪಡೆಯುವ ತೆರಿಗೆದಾರರಿಗೂ ಅನ್ವಯಿಸುತ್ತದೆ. ಮಾರ್ಚ್ 31ರೊಳಗೆ ಫಾರ್ಮ್ 12 ಬಿಬಿಯನ್ನು ಸಲ್ಲಿಸಬೇಕು.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ ಮಾರ್ಚ್ 31ರೊಳಗೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಸದಸ್ಯರಾಗಬಹುದು. ಹಣ ಉಳಿತಾಯಕ್ಕೆ ಕೇಂದ್ರ ಸರ್ಕಾರ ತಂದಿರುವ ಯೋಜನೆ ಇದಾಗಿದೆ.

ಇವಿ ಸಾಲಗಳು 2019 ಏಪ್ರಿಲ್ 1 ರಿಂದ 2023 ಮಾರ್ಚ್ 31 ರವರೆಗೆ ಎಲೆಕ್ಟ್ರಾನಿಕ್ಸ್ ವಾಹನವನ್ನು ಖರೀದಿಸಿದ್ದರೆ, ಬಡ್ಡಿ ದರ ಕಡಿಮೆಯಾಗುತ್ತದೆ.

ಪಿಪಿಎಫ್, ಇಎಲ್ಎಸ್ಎಸ್, ಸುಕನ್ಯಾ ಸಮೃದ್ಧಿ ಯೋಜನೆ ಅಥವಾ ಎಫ್‌ಡಿಯಲ್ಲಿ ಹೂಡಿಕೆ ಮಾಡಿ ತೆರಿಗೆ ಉಳಿಸಿ, ಅಭಿವೃದ್ಧಿ ಹೊಂದಬಹುದು.

ನಿಮ್ಮ ಫಾಸ್ಟ್ಯಾಗ್ ಕೆವೈಸಿ ನವೀಕರಿಸಲು, ಫಾಸ್ಟ್ಯಾಗ್ ಪೋರ್ಟಲ್‌ನಲ್ಲಿ ಅಥವಾ ನಿಮ್ಮ ಬ್ಯಾಂಕಿನ ಪೋರ್ಟಲ್‌ನಲ್ಲಿ ಲಾಗಿನ್ ಆಗಿ.