ಚೀನಾ ಹಿಂದಿಕ್ಕಿ ಅತೀ ದೊಡ್ಡ ಸ್ಮಾರ್ಟ್‌ಫೋನ್ ಪೂರೈಕೆದಾರನಾದ ಭಾರತ
ಅಮೆರಿಕಾಗೆ ಸ್ಮಾರ್ಟ್‌ಫೋನ್ ರಫ್ತು ಮಾಡುವ ಅತೀ ದೊಡ್ಡ ದೇಶ ಭಾರತ ಅನ್ನೋ ದಾಖಲೆ ಬರೆದಿದೆ. ಚೀನಾ ಹಿಂದಿಕ್ಕಿ ಭಾರತ ಮೊದಲ ಸ್ಥಾನ ಅಲಂಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳ ಮೂಲಕ ಭಾರತದಲ್ಲಿ ಉತ್ಪಾದಕತೆ ಹೆಚ್ಚಿಸುವ ಹಾಗೂ ವಿದೇಶಗಳಿಗೆ ರಫ್ತು ಮಾಡುವ ಮಹತ್ತರ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆಗಳ ಪರಿಣಾಮ ಭಾರತ ಹಲವು ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ಈ ಪೈಕಿ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ರಚಿಸಿದೆ. ಅಮೆರಿಕಗೆ ಅತೀ ಹೆಚ್ಚು ಸ್ಮಾರ್ಟ್‌ಫೋನ್ ರಫ್ತು ಮಾಡುವ ದೇಶ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ವಿಶೇಷ ಅಂದರೆ ಚೀನಾ ಹಿಂದಿಕ್ಕಿರುವ ಭಾರತ ಈ ಸ್ಥಾನ ಪಡದುಕೊಂಡಿದೆ.
2025ರ ಎರಡನೇ ತ್ರೈಮಾಸಿಕದಲ್ಲಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್ ಅಮೆರಿಕಾಗೆ ಆಗುತ್ತಿರುವ ರಫ್ತು ಪ್ರಮಾಣ ಬರೋಬ್ಬರಿ ಶೇಕಡಾ 240ರಷ್ಟು ಹೆಚ್ಚಾಗಿದೆ. ಭಾರತ ಇದೀಗ ಶೇಕಡಾ 44ರಷ್ಟು ಸ್ಮಾರ್ಟ್‌ಫೋನ್ ಅಮೆರಿಕೆಗ ರಫ್ತು ಮಾಡುತ್ತಿದೆ. ಈ ಮೂಲಕ ಚೀನಾವನ್ನು ಹಿಂದಿಕ್ಕಿದೆ. ಕಳೆದ ವರ್ಷ ಈ ಪ್ರಮಾಣ ಶೇಕಡಾ 13ರಷ್ಟಿತ್ತು.
ಇದೇ ಸಮಯದಲ್ಲಿ ಚೀನಾ ಸ್ಮಾರ್ಟ್‌ಪೋನ್ ಅಮೆರಿಕಗೆ ರಫ್ತು ಪ್ರಮಾಣ ಶೇಕಡಾ 25ಕ್ಕೆ ಇಳಿಕೆಯಾಗಿದೆ. 2024ರ ಎರಡನೇ ತ್ರೈಮಾಸಿಕದಲ್ಲಿ ಚೀನಾ, ಅಮೆರಿಕಾಗೆ ಶೇಕಡಾ 61ರಷ್ಟು ಸ್ಮಾರ್ಟ್‌ಫೋನ್ ರಫ್ತು ಮಾಡುತ್ತಿತ್ತು. ಆದರೆ ಇದೀಗ ಭಾರತ ಈ ಸ್ಥಾನ ಆಕ್ರಮಿಸಿಕೊಂಡು ಚೀನಾವನ್ನು ಹಿಂದಿಕ್ಕಿದೆ.
ಚೀನಾ ಭಾರಿ ಕುಸಿತ ಹಾಗೂ ಭಾರತದ ಗಣನೀಯ ಏರಿಕೆಗೆ ಪ್ರಮುಖ ಎರಡು ಕಾರಣಗಳಿವೆ. ಒಂದು ಅಮೆರಿಕ ಹಾಗೂ ಚೀನಾ ನಡುವೆ ನಡೆದ ತೆರಿಗೆ ಸಮರ. ಡೋನಾಲ್ಡ್ ಟ್ರಂಪ್ ವಿಧಿಸಿದ ಸುಂಕಕ್ಕೆ ಚೀನಾ ತಿರುಗೇಟು ನೀಡಿತ್ತು.ಈ ಸಮರದಲ್ಲಿ ಚೀನಾದ ರಫ್ತು ಕಂಠಿತಗೊಂಡಿತ್ತು. ಮತ್ತೊಂದು ಪ್ರಮುಖ ಕಾರಣ ಭಾರತದಲ್ಲಿ ಆ್ಯಪಲ್ ಐಫೋನ್ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿದೆ. ಇದೀಗ ಆ್ಯಪಲ್ ಚೀನಾಗಿಂತ ಭಾರತದಲ್ಲಿ ಐಫೋನ್ ಉತ್ಪಾದನೆ ಮೇಲೆ ಹೆಚ್ಚಿನ ಗಮನಕೇಂದ್ರೀಕರಿಸಿದೆ.
ಸ್ಯಾಮ್‌ಸಂಗ್, ಮೋಟೋರೋಲಾ ಕೂಡ ಮೇಡ್ ಇಂಡಿಯಾ ಸ್ಮಾರ್ಟ್‌ಫೋನ್ ಅಮೆರಿಕಗೆ ರಫ್ತು ಮಾಡುತ್ತಿದೆ. ಮೋಟೋರೋಲಾ ಚೀನಾ ಫ್ಯಾಕ್ಟರಿ ಮೂಲಕ ಅತೀ ಹೆಚ್ಚು ಸ್ಮಾರ್ಟ್‌ಫೋನ್ ಉತ್ಪಾದಿಸಿ ಅಮೆರಿಕೆಗೆ ರಫ್ತು ಮಾಡುತ್ತಿದೆ. ಇತ್ತೀಚೆಗೆ ಭಾರತದಲ್ಲೂ ಮೋಟೋರೋಲಾ ಸ್ಮಾರ್ಟ್‌ಫೋನ್ ಉತ್ಪಾದನೆ ಹೆಚ್ಚಿಸಿದೆ.