ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್
ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಈ ನಿಯಮ ಕಡಿಮೆ ಬಜೆಟ್ ಹೊಂದಿರುವ ಜನರಲ್ಲಿ ಬ್ಯಾಂಕಿನ ಬಗ್ಗೆ ವಿಶ್ವಾಸವನ್ನು ಹೆಚ್ಚಿಸುತ್ತದೆ.

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಜೂನ್ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಕೆನರಾ ಬ್ಯಾಂಕ್ ನೀಡಿರುವ ಗುಡ್‌ನ್ಯೂಸ್‌ಗೆ ಗ್ರಾಹಕರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.
ಕೆನರಾ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯ ರದ್ದುಗೊಳಿಸಿದೆ. ಉಳಿತಾಯ ಖಾತೆಗಳಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ (AMB) ಅಗತ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಕೆನರಾ ಬ್ಯಾಂಕ್ ಘೋಷಿಸಿದೆ. ಇನ್ಮುಂದೆ ಕನಿಷ್ಠ ಮೊತ್ತಕ್ಕಿಂತ ಕಡಿಮೆ ಹಣ ಖಾತೆಯಲ್ಲಿರಿಸಿದ್ರೆ ಯಾವುದೇ ದಂಡವನ್ನು ಕೆನರಾ ಬ್ಯಾಂಕ್ ವಿಧಿಸುವುದಿಲ್ಲ.
ಈ ಹಿಂದೆ ಕನಿಷ್ಠ ಮೊತ್ತ ನಿರ್ವಹಣೆ ಮಾಡದ ಗ್ರಾಹಕರಿಗೆ ಕೆನರಾ ಬ್ಯಾಂಕ್ ದಂಡ ವಿಧಿಸುತ್ತಿತ್ತು. ಉಳಿತಾಯ ಖಾತೆ, ಸ್ಯಾಲರಿ ಖಾತೆ ಮತ್ತು ಎನ್‌ಆರ್‌ಐ ಖಾತೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಜೂನ್ 1 ರಿಂದಲೇ ಈ ನಿಯಮ ಜಾರಿಗೆ ಬಂದಿದೆ.
ಈ ಮೊದಲಿನ ನಿಯಮದ ಪ್ರಕಾರ, ನಗರ ಶಾಖೆಯಲ್ಲಿ ಕನಿಷ್ಠ 2,000 ರೂಪಾಯಿ, ಅರೆ ನಗರ ಶಾಖೆಗಳಲ್ಲಿ 1,000 ರೂಪಾಯಿ ಮತ್ತು ಗ್ರಾಮೀಣ ಶಾಖೆಗಳ ಗ್ರಾಹಕರು ಕನಿಷ್ಠ 500 ರೂಪಾಯಿ ಮೊತ್ತವನ್ನು ನಿರ್ವಹಣೆ ಮಾಡಬೇಕಿತ್ತು. ದಂಡ ವಿಧಿಸದ ನಿಯಮದಿಂದ ವಿಶೇಷವಾಗಿ ಮಧ್ಯಮ ವರ್ಗ, ಹಿರಿಯ ನಾಗರೀಕರು, ವಿದ್ಯಾರ್ಥಿಗಳಿಗೆ ರಿಲೀಫ್ ಸಿಕ್ಕಂತಾಗಿದೆ.
1ನೇ ಜೂನ್ 2025ರಿಂದ ಕೆನರಾ ಬ್ಯಾಂಕ್ ಗ್ರಾಹಕರು ಜೀರೋ ಬ್ಯಾಲೆನ್ಸ್ ಖಾತೆಯನ್ನು ನಿರ್ವಹಣೆ ಮಾಡಬಹುದಾಗಿದೆ. ಈ ನಿಯಮ ಕಡಿಮೆ ಬಜೆಟ್ ಹೊಂದಿರುವ ಜನರಲ್ಲಿ ಬ್ಯಾಂಕಿನ ಬಗ್ಗೆ ವಿಶ್ವಾಸವನ್ನು ಹೆಚ್ಚಿಸುತ್ತದೆ.