ನಿಮಗೆ ಗೊತ್ತಿರದ ಚಿನ್ನದ ರಹಸ್ಯಗಳು: ಬಂಗಾರದೊಡಲಾಳದ ಸೀಕ್ರೆಟ್ ಇಲ್ಲಿದೆ
ಏರಿಕೆಯಾದ ಚಿನ್ನದ ಬೆಲೆ ಇಳಿಕೆಯಾಗುವತ್ತ ಮುಖವೇ ಮಾಡುತ್ತಿಲ್ಲ. ಇಳಿದ್ರೂ ಮರುದಿನವೇ ಬೆಲೆ ಏರಿಕೆಯಾಗುತ್ತಿರುತ್ತದೆ. ಚಿನ್ನ ತನ್ನ ಒಡಲಾಳದೊಳಗೆ ಅನೇಕ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಆ ರಹಸ್ಯಗಳು ಏನು ಗೊತ್ತಾ?

ಬಂಗಾರ ಅಂದ್ರೆ ದುಬಾರಿ ವಸ್ತು. ಅದ್ರಲ್ಲಿ ಒಂದಿಷ್ಟು ಕಮ್ಮಿ ಇದ್ರೂ ಅದರ ಗುಣಮಟ್ಟ ಕಡಿಮೆ ಆಗಲ್ಲ. ಬಂಗಾರದ ಆಭರಣಗಳನ್ನ ತಾಮ್ರ, ಬೆಳ್ಳಿ ಬೆರೆಸಿ ಮಾಡ್ತಾರೆ. ಬಂಗಾರದ ಜೊತೆ ಬೆರೆಸುವ ಲೋಹಗಳ ಪ್ರಮಾಣದಿಂದ ಬಂಗಾರದ ಶುದ್ಧತೆ ಗೊತ್ತಾಗುತ್ತೆ. ಇದನ್ನ ಕ್ಯಾರಟ್ ಎಂದು ಕರೆಯುತ್ತಾರೆ.
99.9% ಶುದ್ಧವಾದ, ಹಳದಿ ಬಣ್ಣದಲ್ಲಿ ಹೊಳೆಯುವ ಬಂಗಾರವನ್ನು 24 ಕ್ಯಾರಟ್ ಬಂಗಾರ ಅಂತಾರೆ. 24 ಕ್ಯಾರಟ್ ಬಂಗಾರದಲ್ಲಿ 24 ಪಾಲು ಬಂಗಾರ ಇರುತ್ತೆ. ಇದಕ್ಕಿಂತ ಹೆಚ್ಚಿನ ಕ್ಯಾರಟ್ ಇರಲ್ಲ.
ಶುದ್ಧ ಬಂಗಾರದಿಂದ ಗಟ್ಟಿಮುಟ್ಟಾದ ಆಭರಣ ಮಾಡೋಕೆ ಆಗಲ್ಲ. ಹಾಗಾಗಿ ಅದಕ್ಕೆ ತಾಮ್ರ, ಬೆಳ್ಳಿ ಬೆರೆಸ್ತಾರೆ. ಇದರಿಂದ ಆಭರಣಗಳು ಗಟ್ಟಿಯಾಗಿ, ಬಾಳಿಕೆ ಬರುತ್ತೆ.
24 ಪಾಲು ಬಂಗಾರದಲ್ಲಿ 22 ಪಾಲು ಬಂಗಾರ, 2 ಪಾಲು ಬೇರೆ ಲೋಹ ಇದ್ರೆ ಅದನ್ನ 22 ಕ್ಯಾರಟ್ ಅಂತಾರೆ. ಅಂದ್ರೆ 91.67% ಬಂಗಾರ, 8.33% ಬೇರೆ ಲೋಹಗಳು.
24 ಪಾಲು ಬಂಗಾರದಲ್ಲಿ 18 ಪಾಲು ಬಂಗಾರ, 6 ಪಾಲು ಬೇರೆ ಲೋಹ ಇದ್ರೆ ಅದನ್ನ 18 ಕ್ಯಾರಟ್ ಅಂತಾರೆ. ಅಂದ್ರೆ 75% ಬಂಗಾರ, 25% ಬೇರೆ ಲೋಹಗಳು. ಡೈಮಂಡ್ ಆಭರಣಗಳನ್ನ 18 ಕ್ಯಾರಟ್ ಬಂಗಾರದಿಂದ ಮಾಡ್ತಾರೆ. ಇದು 24 ಮತ್ತು 22 ಕ್ಯಾರಟ್ ಗಿಂತ ಕಡಿಮೆ ಬೆಲೆ.
18 ಕ್ಯಾರಟ್ ಆಭರಣಗಳನ್ನ 18K, 18Kt, 18k ಅಂತ ಮುದ್ರೆ ಹಾಕ್ತಿರ್ತಾರೆ. ಕೆಲವೊಮ್ಮೆ 750, 0.75 ಅಂತಾನೂ ಮುದ್ರೆ ಇರುತ್ತೆ. ಇದು 75% ಬಂಗಾರ ಅಂತ ತೋರಿಸುತ್ತೆ.
24 ಕ್ಯಾರಟ್ – 100% ಬಂಗಾರ
22 ಕ್ಯಾರಟ್ - 91.7% ಬಂಗಾರ
18 ಕ್ಯಾರಟ್ - 75% ಬಂಗಾರ
14 ಕ್ಯಾರಟ್ - 58.3% ಬಂಗಾರ
12 ಕ್ಯಾರಟ್ - 50% ಬಂಗಾರ
10 ಕ್ಯಾರಟ್ - 41.7% ಬಂಗಾರ
ಬಂಗಾರದ ಶುದ್ಧತೆಯನ್ನ ಕ್ಯಾರಟ್ ಅಳತೆ ತೋರಿಸುತ್ತೆ. 24 ಕ್ಯಾರಟ್ ಅಂದ್ರೆ 1000/1000 ಅಥವಾ 1.000 ಶುದ್ಧತೆ. ಕ್ಯಾರಟ್ ಅಳತೆಯನ್ನ 24 ರಿಂದ ಭಾಗಿಸಿ, 1000 ರಿಂದ ಗುಣಿಸಿದ್ರೆ ಶುದ್ಧತೆ ಗೊತ್ತಾಗುತ್ತೆ.
22 ಕ್ಯಾರಟ್ ಬಂಗಾರದ ಶುದ್ಧತೆ 22/24 x 1000 = 0.9166. 21 ಕ್ಯಾರಟ್ ಅಂದ್ರೆ 21/24 x 1000 = 0.875. 18 ಕ್ಯಾರಟ್ ಅಂದ್ರೆ 0.750.
24 ಕ್ಯಾರಟ್ ಬಂಗಾರ ನೈಸರ್ಗಿಕವಾಗಿಚಿನ್ನದ ಬಣ್ಣದಲ್ಲಿರುತ್ತೆ. ಶುದ್ಧತೆ ಕಮ್ಮಿ ಮಾಡಿದ್ರೆ ಬಣ್ಣ ಬದಲಾಯಿಸಬಹುದು. ತಾಮ್ರ ಬೆರೆಸಿದ್ರೆ ರೋಸ್ ಗೋಲ್ಡ್, ಝಿಂಕ್ ಮತ್ತು ಬೆಳ್ಳಿ ಬೆರೆಸಿದ್ರೆ ಗ್ರೀನ್ ಗೋಲ್ಡ್, ನಿಕಲ್ ಬೆರೆಸಿದ್ರೆ ವೈಟ್ ಗೋಲ್ಡ್ ಸಿಗುತ್ತೆ. ಮೇಲ್ಮೈಗೆ ಬಣ್ಣ ಹಚ್ಚಬಹುದು, ಆದ್ರೆ ಅದು ಕಾಲಕ್ರಮೇಣ ಮಾಯವಾಗುತ್ತೆ.