ಚಿನ್ನದ ಬೆಲೆಯಲ್ಲಿ ಮತ್ತೆ 1,200 ರೂ ಇಳಿಕೆ, ಖರೀದಿಗೆ ಇದು ಸೂಕ್ತವ ಸಮಯವೇ?
ಚಿನ್ನದ ಬೆಲೆಯಲ್ಲಿ ಮತ್ತೆ 1,200 ರೂ ಇಳಿಕೆ, ಖರೀದಿಗೆ ಇದು ಸೂಕ್ತವ ಸಮಯವೇ? ಕಾರಣ ದಿನದಿಂದ ದಿನಕ್ಕೆ ಬಂಗಾರ ಬೆಲೆ ಇಳಿಕೆಯಾಗುತ್ತಿದೆ. ಹೀಗಾಗಿ ಕಾಯಬೇಕಾ ಅಥವಾ ಏರಿಕೆ ಕಾಣುವ ಮೊದಲೇ ಖರೀದಿಸಬೇಕಾ ಅನ್ನೋ ಚರ್ಚೆ ಶುರುವಾಗಿದೆ.

ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ
ಭಾರತೀಯರಿಗೆ ಬಂಗಾರ ಅತ್ಯಮೂಲ್ಯ.ಹೂಡಿಕೆ ದೃಷ್ಟಿಯಿಂದ ಮಾತ್ರವಲ್ಲ, ಆಭರಣ ರೂಪದಲ್ಲೂ ಅತ್ಯಂತ ಮಹತ್ವದ್ದಾಗಿದೆ. ಆದರೆ ಚಿನ್ನದ ಬೆಲೆ ಮಾತ್ರ ಕೈಗೆಟುಕುತ್ತಿಲ್ಲ. ಭಾರಿ ಏರಿಕೆ ಕಂಡಿರುವ ಚಿನ್ನದ ಬೆಲೆಯಲ್ಲಿ ಇದೀಗ ಕೊಂಚ ಸಮಾಧಾನ. ಕಾರಣ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಮಂಗಳವಾರ (ನ.04) ಮತ್ತಷ್ಟು ಇಳಿಕೆ ಕಂಡಿದೆ.
1200 ರೂಪಾಯಿ ಇಳಿಕೆ
ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ (ನ.04) ಚಿನ್ನದ ಬೆಲೆಯಲ್ಲಿ 1,200 ರೂಪಾಯಿ ಇಳಿಕೆಯಾಗಿದೆ. ಸೋಮವಾರ 10 ಗ್ರಾಂ ಚಿನ್ನಕ್ಕೆ 1,24,700 ರೂಪಾಯಿ ಇದ್ದರೆ, ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 1,23,500 ರೂಪಾಯಿಗೆ ಇಳಿಕೆಯಾಗಿದೆ. ಇದು ಅಮೆರಿಕದ ಫೆಡರಲ್ ಬ್ಯಾಂಕ್‌ಗಳ ಬಡ್ಡಿದರ ಕಡಿತ ಬಳಿಕ ಚಿನ್ನದ ಬೆಲೆ ಮೇಲೂ ಪರಿಣಾಮ ಬೀರಿದೆ.
ಮತ್ತಷ್ಟು ಇಳಿಕೆಯಾಗುತ್ತಾ ಚಿನ್ನ
ಚಿನ್ನದ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆಯಾಗುತ್ತಾ ಸಾಗುತ್ತಿದೆ. ಹೀಗಾಗಿ ಭಾರತೀಯರು ಮತ್ತಷ್ಟು ಇಳಿಕೆ ನಿರೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಮೆರಿಕನ್ ಫೆಡರಲ್ ಬ್ಯಾಂಕ್ ಮುಂದಿನ ತಿಂಗಳು ಮತ್ತಷ್ಟು ರೆಪೋ ರೇಟ್, ಬಡ್ಡಿದರ ಕಡಿತಕ್ಕೆ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಯಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತಜ್ಞರು ಹೇಳುವುದೇನು?
ಅಮೆರಿಕನ್ ಫೆಡರ್ ಬ್ಯಾಂಕ್‌ಗಳು ಮುಂದಿನ ತಿಂಗಳು ಮತ್ತೆ ಬಡ್ಡಿ ದರ ಕಡಿತ ಮಾಡುತ್ತಾರೆ ಅನ್ನೋ ಮಾತುಗಳನ್ನು ಹೆಚ್‌ಡಿಎಫ್‌ಸಿ ಸೆಕ್ಯೂರಿಟಿ ಅನಾಲಿಸ್ಟ್ ಸೌಮಿಲ್ ಗಾಂಧಿ ತಳ್ಳಿ ಹಾಕಿದ್ದಾರೆ. ಆದರೆ ಚಿನ್ನದ ಬೆಲೆ ತೆರಿಗೆ ನೀತಿಯಲ್ಲಿ ಸಡಿಲೀಕರಣ ಸೇರಿದಂತೆ ಇತರ ಮಾರುಕಟ್ಟೆ ಮೇಲಿನ ಪರಿಣಾಮಗಳಿಂದ ಕಡಿಮೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ.
ತಜ್ಞರು ಹೇಳುವುದೇನು?
ವಿವಿಧ ನಗರದಲ್ಲಿ ಚಿನ್ನದ ದರ
- ದೆಹಲಿ: 24 ಕ್ಯಾರೆಟ್ ಚಿನ್ನದ ದರ 1,20,810 ರೂಪಾಯಿ (10 ಗ್ರಾಂ)
- ಬೆಂಗಳೂರು: 24 ಕ್ಯಾರೆಟ್ ಚಿನ್ನದ ದರ 1,21,070 ರೂಪಾಯಿ (10 ಗ್ರಾಂ)
- ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 1,21,030 ರೂಪಾಯಿ(10 ಗ್ರಾಂ)
- ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 1,21,190 ರೂಪಾಯಿ(10 ಗ್ರಾಂ)