ಚಿನ್ನಕ್ಕೂ ತಟ್ಟಿದಾ ಇರಾನ್ ಯುದ್ಧ? ಯೋಗ ದಿನಾಚರಣೆಯಂದೇ ಏರಿಕೆ ಕಂಡ ಬಂಗಾರ
ಇಸ್ರೇಲ್ ಇರಾನ್ ಯುದ್ಧ ತೀವ್ರಗೊಳ್ಳುತ್ತಿದೆ. ಇರಾನ್ ನ್ಯೂಕ್ಲಿಯರ್ ಕುರಿತು ಮಾತುಕತೆಗೆ ನಿರಾಕರಿಸಿದ ಬೆನ್ನಲ್ಲೇ ಇತ್ತ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.ಅಂತಾರಾಷ್ಟ್ರೀಯ ಯೋಗದಿನಾಚರಣೆಯಂದೇ ಚಿನ್ನದ ಬೆಲೆ ಏರಿಕೆ ಕಂಡಿದೆ.
- FB
- TW
- Linkdin
Follow Us
)
ಕಳೆದೆರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರ ಇದೀಗ ಏರಿಕೆಯಾಗಿದೆ. ಒಂದೆಡೆ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತೈಲ ಬೆಲೆ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಬಿಸಿ ಎದುರಾಗುತ್ತಿದೆ. ಇದರ ನಡುವೆ ಚಿನ್ನದ ದರವೂ ಏರಿಕೆಯಾಗುತ್ತಾ? ಅನ್ನೋ ಆತಂಕ ಎದುರಾಗಿದೆ. ಜೂನ್ 21ರ ಶನಿವಾರ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 27 ರೂಪಾಯಿ ಏರಿಕೆಯಾಗಿದ್ದರೆ, 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂನಲ್ಲಿ 25 ರೂಪಾಯಿ ಏರಿಕೆಯಾಗಿದೆ.
ಭಾರತದಲ್ಲಿಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,075 ರೂಪಾಯಿ ಆಗಿದ್ದರೆ, 10 ಗ್ರಾಂ ಚಿನ್ನಕ್ಕೆ 1,00,750 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 9,235 ರೂಪಾಯಿ ಆಗಿದ್ದರೆ, 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,556 ರೂಪಾಯಿ ಆಗಿದೆ. ಇಸ್ರೇಲ್ ಇರಾನ್ ನಡುವಿನ ಯುದ್ಧ ಚಿನ್ನದ ಮೇಲೆ ಸದ್ಯ ಯಾವುದೇ ಪರಿಣಾಮ ಬೀರಿಲ್ಲ. ಪ್ರಮುಖವಾಗಿ ಅಮೆರಿಕ ಹಾಗೂ ಚೀನಾ ನೀತಿಗಳು ಹಾಗೂ ನಿರ್ಧಾರಗಳು ಚಿನ್ನದ ಮೇಲೆ ಪರಿಣಾಮ ಬೀರಲಿದೆ. ಪ್ರಮುಖವಾಗಿ ಡೋನಾಲ್ಡ್ ಟ್ರಂಪ್ ತೆರಿಗೆ ನೀತಿ ಚಿನ್ನದ ದರದ ಮೇಲೆ ಪರಿಣಾಮ ಬೀರಲಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಬೆಂಗಳೂರಿನಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ದರ ಇಂದು 10,075 ರೂಪಾಯಿ ಆಗಿದ್ದರೆ , 22 ಕ್ಯಾರೆಟ್ ಚಿನ್ನದ ಬೆಲೆ 9,235 ರೂಪಾಯಿ ಆಗಿದೆ. ಇನ್ನು 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,556 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,090 ರೂಪಾಯಿ ಆಗಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 9,250 ರೂಪಾಯಿ ಆಗಿದೆ.
ಮುಂಬೈನಲ್ಲಿ ಚಿನ್ನದ ಬೆಲೆ
24 ಕ್ಯಾರೆಟ್ 1 ಗ್ರಾಂ ಚಿನ್ನದ ದರ: 10,075 ರೂಪಾಯಿ
22 ಕ್ಯಾರೆಟ್ 1 ಗ್ರಾಂ ಚಿನ್ನದ ದರ: 9,235 ರೂಪಾಯಿ
18 ಕ್ಯಾರೆಟ್ 1 ಗ್ರಾಂ ಚಿನ್ನದ ದರ :7,556 ರೂಪಾಯಿ
ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
24 ಕ್ಯಾರೆಟ್ 1 ಗ್ರಾಂ ಚಿನ್ನದ ದರ: 10,075 ರೂಪಾಯಿ
22 ಕ್ಯಾರೆಟ್ 1 ಗ್ರಾಂ ಚಿನ್ನದ ದರ: 9,235 ರೂಪಾಯಿ
18 ಕ್ಯಾರೆಟ್ 1 ಗ್ರಾಂ ಚಿನ್ನದ ದರ : 7,556ರೂಪಾಯಿ
ಚೆನ್ನೈನಲ್ಲಿ ಚಿನ್ನದ ಬೆಲೆ
24 ಕ್ಯಾರೆಟ್ 1 ಗ್ರಾಂ ಚಿನ್ನದ ದರ: 10,075 ರೂಪಾಯಿ
22 ಕ್ಯಾರೆಟ್ 1 ಗ್ರಾಂ ಚಿನ್ನದ ದರ: 9,235 ರೂಪಾಯಿ
18 ಕ್ಯಾರೆಟ್ 1 ಗ್ರಾಂ ಚಿನ್ನದ ದರ : 7,600 ರೂಪಾಯಿ
ಕೋಲ್ಕತಾದಲ್ಲಿ ಚಿನ್ನದ ಬೆಲೆ
24 ಕ್ಯಾರೆಟ್ 1 ಗ್ರಾಂ ಚಿನ್ನದ ದರ: 10,075 ರೂಪಾಯಿ
22 ಕ್ಯಾರೆಟ್ 1 ಗ್ರಾಂ ಚಿನ್ನದ ದರ: 9,235 ರೂಪಾಯಿ
18 ಕ್ಯಾರೆಟ್ 1 ಗ್ರಾಂ ಚಿನ್ನದ ದರ : 7,556 ರೂಪಾಯಿ