ಚಿನ್ನ ಖರೀದಿಸುವ ಆಸೆ ಜೀವಂತ; ಇಂದಿನ ಬಂಗಾರದ ಬೆಲೆ ಎಷ್ಟಿದೆ?
ಕಳೆದ ವಾರದಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿದ್ದು, ಖರೀದಿಗೆ ಉತ್ತಮ ಸಮಯವಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ದರದ ವಿವರವಾದ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಕಳೆದೊಂದು ವಾರದಿಂದ ಇಳಿಕೆ ಹಾದಿಯಲ್ಲಿರುವ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಹಾಗಾಗಿ ತಡಮಾಡದೇ ಚಿನ್ನ ಖರೀದಿಸೋದು ಒಳ್ಳೆಯ ಆಯ್ಕೆಯಾಗಲಿದೆ. ಇಂದು ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗೆಯೇ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿಯೂ ವ್ಯತ್ಯಾಸ ಆಗುತ್ತಿರುತ್ತದೆ. ಈ ಲೇಖನದಲ್ಲಿಂದು ಚಿನ್ನದ ಜೊತೆ ಬೆಳ್ಳಿ ದರದ ಪರಿಷ್ಕೃತ ಮಾಹಿತಿಯನ್ನು ನೀಡಲಾಗಿದೆ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,275 ರೂಪಾಯಿ
8 ಗ್ರಾಂ: 74,200 ರೂಪಾಯಿ
10 ಗ್ರಾಂ: 92,750 ರೂಪಾಯಿ
100 ಗ್ರಾಂ: 9,27,500 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,118 ರೂಪಾಯಿ
8 ಗ್ರಾಂ: 80,944 ರೂಪಾಯಿ
10 ಗ್ರಾಂ: 1,01,180 ರೂಪಾಯಿ
100 ಗ್ರಾಂ: 10,11,800 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 92,750 ರೂಪಾಯಿ, ಮುಂಬೈ: 92,750 ರೂಪಾಯಿ, ದೆಹಲಿ: 92,900 ರೂಪಾಯಿ, ಕೋಲ್ಕತ್ತಾ: 92,750 ರೂಪಾಯಿ, ಬೆಂಗಳೂರು: 92,750 ರೂಪಾಯಿ, ಹೈದರಾಬಾದ್: 92,750 ರೂಪಾಯಿ, ವಡೋದರ: 92,800 ರೂಪಾಯಿ, ಅಹಮದಾಬಾದ್: 82,800 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
10 ಗ್ರಾಂ: 1,162 ರೂಪಾಯಿ
100 ಗ್ರಾಂ: 11,620 ರೂಪಾಯಿ
1000 ಗ್ರಾಂ: 1,16,200 ರೂಪಾಯಿ