ಚೆಕ್ ಬರೆಯುವಾಗ ಈ ಆರು ತಪ್ಪುಗಳನ್ನು ಮಾಡಬೇಡಿ
ಚೆಕ್ ಬರೆಯುವಾಗ ಕೆಲವೊಂದು ನಿಯಮಗಳನ್ನು ಪಾಲಿಸದಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೆಸರು ಮತ್ತು ಸಂಖ್ಯೆಯ ಮಧ್ಯೆ ಸ್ಪೇಸ್ ಬಿಡುವುದು ಹಲವು ಕ್ರಮಗಳನ್ನು ಪಾಲಿಸಬೇಕು.

ಚೆಕ್ ಬರೆಯುವಾಗ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಚೆಕ್ ಬರೆಯುವ ಮಾಡುವ ತಪ್ಪಿನಿಂದ ಕೆಲವೊಮ್ಮೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಆ ನಿಯಮಗಳು ಏನು ಎಂದು ನೋಡೋಣ ಬನ್ನಿ.
1.ಪದ ಅಥವಾ ಹೆಸರಿನ ಮಧ್ಯೆ ಜಾಗ ಬಿಡಬೇಡಿ
ನೀವು ಚೆಕ್ ಬರೆಯುವಾಗ ಹೆಸರು ಮತ್ತು ಸಂಖ್ಯೆಯ ಮಧ್ಯೆ ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ಸ್ಪೇಸ್ ಬಿಡಬಾರದು. ಉದಾಹರಣೆಗೆ ನೀವು Ram Malhotra ಹೆಸರಿಗೆ ಚೆಕ್ ನೀಡುತ್ತಿದ್ರೆ ರಾಮ್ ಮತ್ತು ಮಲ್ಹೋತ್ರಾ ನಡುವೆ ಒಂದು ಸ್ಪೇಸ್ ಬಿಡಬೇಕು. ಎರಡು ಸ್ಪೇಸ್ ಇದ್ರೆ Ram ಪಕ್ಕದಲ್ಲಿ A ಸೇರಿಸಿ ಅದನ್ನು ರಮಾ ಎಂದು ಮಾಡಿಕೊಳ್ಲುವ ಸಾಧ್ಯತೆ ಇರುತ್ತದೆ.
2.ಕ್ರಾಸ್ ಚೆಕ್
ಯಾವಾಗಲೂ ಚೆಕ್ ನೀಡುವಾಗ ಎಡಭಾಗದ ಮೇಲಿನ ಮೂಲೆಯಲ್ಲಿ ಎರಡು ಗೆರೆಗಳನ್ನು ಎಳೆಯಬೇಕು. ಹೀಗೆ ಮಾಡೋದರಿಂದ ಪಾವತಿದಾರರ ಬ್ಯಾಂಕ್ ಖಾತೆಗೆ ಮಾತ್ರ ಜಮೆಯಾಗುತ್ತದೆ. ಎರಡು ಗೆರೆಗಳಿದ್ರೆ ಕೌಂಟರ್ ಮೂಲಕ ನಗದು ನೀಡಲ್ಲ.
3.ಹೆಸರು, ಮೊತ್ತದ ನಂತರ ಗೆರೆ ಎಳೆಯುವುದು
ಚೆಕ್‌ನಲ್ಲಿ ಹೆಸರು ಮೊತ್ತದ ನಂತರ ಉದ್ದವಾದ ಗೆರೆಯನ್ನು ಎಳೆಯಬೇಕಾಗುತ್ತದೆ. ಮೊತ್ತವನ್ನು ಪದಗಳಲ್ಲಿ ಬರೆದಾಗಲೂ ಅದರ ಮುಂದೆ ಗೆರೆ ಎಳೆಯಬೇಕು. ಹೀಗೆ ಮಾಡೋದರಿಂದ ಖಾಲಿ ಜಾಗದಲ್ಲಿ ಹೊಸದಾಗಿ ಏನು ಬರೆಯಲು ಸಾಧ್ಯವಾಗಿಲ್ಲ.
4. ಬೇರರ್
"Pay" ವಿಭಾಗದಲ್ಲಿ, ಹೆಸರಿಗೆ ಸ್ಥಳವಿರುತ್ತದೆ ಮತ್ತು ನಂತರ ಬಲ ಮೂಲೆಯಲ್ಲಿ ಅದು "Barer" ಎಂದು ಕೊನೆಗೊಳ್ಳುತ್ತದೆ, ಅಂದರೆ ಚೆಕ್‌ನಲ್ಲಿ ಯಾರ ಹೆಸರು ಬರೆಯಲ್ಪಟ್ಟಿದೆಯೋ ಅಥವಾ ಚೆಕ್ ಹೊಂದಿರುವ ಬೇರೆ ಯಾರಾದರೂ ಅದನ್ನು ನಗದೀಕರಿಸಬಹುದು. ಹಾಗಾಗಿ ಬೇರರ್ ಪದದ ಮೇಲೆ ಗೆರೆ ಎಳೆದ್ರೆ ನಿಮ್ಮ ಚೆಕ್ ಹೆಚ್ಚು ಸುರಕ್ಷಿತವಾಗಿರುತ್ತದೆ.
5. ಮೊತ್ತದ ನಂತರ “/-” ಚಿಹ್ನೆ ಸೇರಿಸಿ
ಚೆಕ್‌ನಲ್ಲಿ ಪಾವತಿಸುವ ಮೊತ್ತ ದಾಖಲಿಸಿದ ನಂತರ ಕಡ್ಡಾಯವಾಗಿ “/-” ಚಿಹ್ನೆ ಸೇರಿಸಬೇಕು. ಮೊತ್ತದ ನಂತರ (5000/-) ಇದನನ್ನು ಸೇರಿಸಿದ್ರೆ ಮುಂದೆ ಯಾವುದೇ ಅಂಕಿಯನ್ನು ಸೇರಿಸಲು ಸಾಧ್ಯವಾಗಲ್ಲ.
6.ಚೆಕ್ ಮಾಹಿತಿ
ಚೆಕ್ ನೀಡುವಾಗ ಬೇಸರವಾದ್ರೂ ಕೆಲವು ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಚೆಕ್ ಸಂಖ್ಯೆ, ಯಾರಿಗೆ ನೀಡಲಾಗದೇ ಮತ್ತು ಎಷ್ಟು ಮೊತ್ತ ಎಂದು ದಾಖಲಿಸಿಕೊಳ್ಳಬೇಕು. ಚೆಕ್ ನೀಡಿದ ಬಳಿಕ ನಿಮಗೆ ರದ್ದುಗೊಳಿಸಬೇಕು ಅನ್ನಿಸಿದಾಗ ಈ ಎಲ್ಲಾ ಮಾಹಿತಿ ನೀಡಿ ಚೆಕ್ ಕ್ಯಾನ್ಸಲ್ ಮಾಡಬಹುದು.