ಡಿಎ ಹೆಚ್ಚಿಸಿದ ಮೋದಿ ಸರ್ಕಾರ, ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್!
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರ ಶೇ. 3ರಷ್ಟು ಹೆಚ್ಚಿಸುವ ತೀರ್ಮಾನ ಮಾಡಿದ್ದು, ಈಗ ಅವರ ಡಿಎ ಶೇ. 53 ಆಗಿದೆ. ಇದರಿಂದಾಗಿ ತಿಂಗಳಿಗೆ ₹1200 ವರೆಗೆ ಹೆಚ್ಚುವರಿ ಹಣ ನೌಕರರಿಗೆ ಸಿಗಲಿದೆ.

ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್
ದೀಪಾವಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಒಂದು ಖುಷಿಯ ಸುದ್ದಿ. ಬುಧವಾರ ಕೇಂದ್ರ ಸಚಿವ ಸಂಪುಟ ತುಟ್ಟಿಭತ್ಯೆಯನ್ನ 3% ಹೆಚ್ಚಿಸಿದೆ. ಇದರಿಂದಾಗಿ, ಒಟ್ಟು ತುಟ್ಟಿಭತ್ಯೆ ಮೂಲ ವೇತನದ 53% ಕ್ಕೆ ಏರಿಕೆಯಾಗಿದೆ.
ತುಟ್ಟಿಭತ್ಯೆ ಹೆಚ್ಚಳ
₹40,000 ಮೂಲ ವೇತನ ಪಡೆಯುವ ನೌಕರರಿಗೆ 3% ತುಟ್ಟಿಭತ್ಯೆ ಹೆಚ್ಚಳದಿಂದ, ತಿಂಗಳಿಗೆ ₹1,200 ಹೆಚ್ಚುವರಿಯಾಗಿ ಸಿಗಲಿದೆ. ಒಟ್ಟು ತುಟ್ಟಿಭತ್ಯೆ ₹21,200 ಆಗಿರುತ್ತದೆ. ಮೊದಲು ಇದು ₹20,000 ಆಗಿತ್ತು.
ಸರ್ಕಾರಿ ನೌಕರರು
ಮೂಲ ವೇತನ ಹೆಚ್ಚಿದ್ದರೆ, ತುಟ್ಟಿಭತ್ಯೆಯೂ ಹೆಚ್ಚಿರುತ್ತದೆ. ಅದೇ ರೀತಿ, ಮೂಲ ವೇತನ ಕಡಿಮೆಯಿದ್ದರೆ, ತುಟ್ಟಿಭತ್ಯೆಯೂ ಕಡಿಮೆಯಿರುತ್ತದೆ.
ಕೇಂದ್ರ ಸರ್ಕಾರಿ ನೌಕರರು
ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಅಕ್ಟೋಬರ್ ತಿಂಗಳ ವೇತನವನ್ನ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವುದು. ಕಳೆದ ಮೂರು ತಿಂಗಳ ಬಾಕಿ ಹಣವನ್ನೂ ನೀಡಲಾಗುವುದು. ನಿವೃತ್ತರಿಗೂ ತುಟ್ಟಿಭತ್ಯೆ ಹೆಚ್ಚಳದ ಲಾಭ ಸಿಗಲಿದೆ.
ತುಟ್ಟಿಭತ್ಯೆ ಏರಿಕೆ
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆಯನ್ನ ಹೆಚ್ಚಿಸಲಾಗುತ್ತದೆ. ಇದರಿಂದಾಗಿ, ಬೆಲೆ ಏರಿಕೆಯನ್ನ ನಿಭಾಯಿಸಲು ಸರ್ಕಾರ ತನ್ನ ನೌಕರರಿಗೆ ಸಹಾಯ ಮಾಡುತ್ತದೆ. ಸರ್ಕಾರಿ ನೌಕರರು ಮತ್ತು ನಿವೃತ್ತರಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ.
ದೀಪಾವಳಿ ಬೋನಸ್
ಜೀವನ ವೆಚ್ಚ ಹೆಚ್ಚಳವನ್ನ ನಿಭಾಯಿಸಲು ಇದು ಸಹಾಯ ಮಾಡುತ್ತದೆ. ಹಣದುಬ್ಬರ ದರದ ಆಧಾರದ ಮೇಲೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆಯನ್ನ ಪರಿಷ್ಕರಿಸಲಾಗುತ್ತದೆ. ಹಣದುಬ್ಬರ ಎಷ್ಟು, ತುಟ್ಟಿಭತ್ಯೆ ಎಷ್ಟಿರಬೇಕು ಎಂಬುದನ್ನ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ನಿರ್ಧರಿಸುತ್ತದೆ.
ಪಾಕಿಸ್ತಾನಿ ಗಾಯಕ ಉಮೈರ್ ಜಸ್ವಾಲ್ ಜೊತೆ ಸಾನಿಯಾ ಮಿರ್ಜಾ 2ನೇ ಮದುವೆ?
7ನೇ ವೇತನ ಆಯೋಗ
ಹಣದುಬ್ಬರದ ನಂತರವೂ ನೌಕರರು ಮತ್ತು ನಿವೃತ್ತರ ಖರೀದಿ ಸಾಮರ್ಥ್ಯದ ಮೇಲೆ ಪರಿಣಾಮ ಬೀಳದಂತೆ ಇದು ಸಹಾಯ ಮಾಡುತ್ತದೆ. ಮಾರ್ಚ್ 2024 ರಲ್ಲಿ ತುಟ್ಟಿಭತ್ಯೆಯನ್ನ 4% ಹೆಚ್ಚಿಸಲಾಗಿತ್ತು. ಇದರಿಂದಾಗಿ, ಒಟ್ಟು ತುಟ್ಟಿಭತ್ಯೆ 50% ಆಗಿತ್ತು.
ನೋಯೆಲ್ ಟಾಟಾ ಸೊಸೆ ಮಾನಸಿ, ಟಾಟಾ ಮೋಟಾರ್ಸ್‌ನ ಪ್ರಮುಖ ಎದುರಾಳಿ ಕಂಪನಿಯ ಒಡತಿ!