Credit Card: ಈ 5 ಜನ ಕ್ರೆಡಿಟ್ ಕಾರ್ಡ್ ತಗೊಂಡ್ರೆ ಮುಗೀತು ಕಥೆ.. ಹುಶಾರ್ ಆಗಿರಿ...!
ಕ್ರೆಡಿಟ್ ಕಾರ್ಡ್ ಯಾರು ಬಳಸಬಾರದು: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಜೋರಾಗಿದೆ. ಆನ್‌ಲೈನ್ ಶಾಪಿಂಗ್‌ನಿಂದ ಹಿಡಿದು ಹಣ ತೆಗೆಯುವವರೆಗೆ ಎಲ್ಲದಕ್ಕೂ ಇದು ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಕೆಲವರಿಗೆ ಅನುಕೂಲವಾದ್ರೆ, ಕೆಲವರಿಗೆ ತೊಂದರೆಯಾಗಬಹುದು. ಈ 5 ತರಹದ ಜನ ದೂರ ಇರೋದು ಒಳ್ಳೆಯದು...

ಫಿಕ್ಸೆಡ್ ಆದಾಯ ಇಲ್ಲದವರಿಗೆ ಕ್ರೆಡಿಟ್ ಕಾರ್ಡ್ ಬೇಡ
ಜಾಬ್ ಅಥವಾ ಆದಾಯ ಫಿಕ್ಸೆಡ್ ಇಲ್ಲದವರಿಗೆ, ತಿಂಗಳಿಗೆ ಇಂತಿಷ್ಟು ಅಂತಾ ದುಡ್ಡು ಬರದಿದ್ರೆ ಕ್ರೆಡಿಟ್ ಕಾರ್ಡ್ ತಗೋಬಾರ್ದು. ಟೈಮ್‌ಗೆ ಬಿಲ್ ಕಟ್ಟಿಲ್ಲ ಅಂದ್ರೆ ಸಾಲದ ಹೊರೆ ಜಾಸ್ತಿಯಾಗುತ್ತೆ. ಫೈನಾನ್ಸಿಯಲಿ ತೊಂದರೆಯಾಗಬಹುದು.
ಫಿಕ್ಸೆಡ್ ಆದಾಯ ಇಲ್ಲದವರಿಗೆ ಕ್ರೆಡಿಟ್ ಕಾರ್ಡ್ ಬೇಡ
ಜಾಬ್ ಅಥವಾ ಆದಾಯ ಫಿಕ್ಸೆಡ್ ಇಲ್ಲದವರಿಗೆ, ತಿಂಗಳಿಗೆ ಇಂತಿಷ್ಟು ಅಂತಾ ದುಡ್ಡು ಬರದಿದ್ರೆ ಕ್ರೆಡಿಟ್ ಕಾರ್ಡ್ ತಗೋಬಾರ್ದು. ಟೈಮ್‌ಗೆ ಬಿಲ್ ಕಟ್ಟಿಲ್ಲ ಅಂದ್ರೆ ಸಾಲದ ಹೊರೆ ಜಾಸ್ತಿಯಾಗುತ್ತೆ. ಫೈನಾನ್ಸಿಯಲಿ ತೊಂದರೆಯಾಗಬಹುದು.
ತುಂಬಾ ಸಾಲ ಇರೋರಿಗೆ ಕ್ರೆಡಿಟ್ ಕಾರ್ಡ್ ಬೇಡ
ಈಗಾಗಲೇ ಪರ್ಸನಲ್ ಲೋನ್, ಹೋಮ್ ಲೋನ್ ಅಥವಾ ಬೇರೆ ಸಾಲ ಇದ್ರೆ ಕ್ರೆಡಿಟ್ ಕಾರ್ಡ್ ತಗೋಬೇಡಿ. ಕಾರ್ಡ್ ಖರ್ಚು ಜಾಸ್ತಿಯಾಗಬಹುದು. ಎಲ್ಲಾ EMI ಕಟ್ಟೋಕೆ ಕಷ್ಟ ಆಗಬಹುದು. ಸಾಲ ಜಾಸ್ತಿಯಾದ್ರೆ ದುಡ್ಡಿಲ್ಲದೆ ಪರದಾಡಬೇಕಾಗುತ್ತೆ.
ಸರಿಯಾದ ಟೈಮ್‌ಗೆ ಬಿಲ್ ಕಟ್ಟೋಕೆ ಆಗ್ದಿದ್ರೆ ಕ್ರೆಡಿಟ್ ಕಾರ್ಡ್ ಬೇಡ
ಸಾಲದ EMI ಅಥವಾ ಬಿಲ್ ಟೈಮ್‌ಗೆ ಕಟ್ಟೋಕೆ ಆಗ್ದಿರೋರು ಕ್ರೆಡಿಟ್ ಕಾರ್ಡ್‌ನಿಂದ ದೂರ ಇರಿ. ಕ್ರೆಡಿಟ್ ಕಾರ್ಡ್ ಬಿಲ್ ಟೈಮ್‌ಗೆ ಕಟ್ಟಿಲ್ಲ ಅಂದ್ರೆ ಲೇಟ್ ಫೀಸ್ ಮತ್ತೆ ಜಾಸ್ತಿ ಇಂಟರೆಸ್ಟ್ ಕಟ್ಟಬೇಕಾಗುತ್ತೆ. ಇದರಿಂದ CIBIL ಸ್ಕೋರ್ ಹಾಳಾಗುತ್ತೆ.
ಖರ್ಚು ಕಂಟ್ರೋಲ್ ಮಾಡೋಕೆ ಆಗ್ದಿದ್ರೆ ಕ್ರೆಡಿಟ್ ಕಾರ್ಡ್ ಬೇಡ
ಯೋಚನೆ ಮಾಡ್ದೆ ಖರ್ಚು ಮಾಡೋದು, ಶಾಪಿಂಗ್ ಅಂತಾ ದುಡ್ಡು ತಗೊಂಡು ಹೋಗಿ ಖರ್ಚು ಮಾಡೋ ಅಭ್ಯಾಸ ಇದ್ರೆ ಕ್ರೆಡಿಟ್ ಕಾರ್ಡ್ ಬೇಡ. ಇದು ಸಾಲದ ಹೊರೆ ಜಾಸ್ತಿ ಮಾಡುತ್ತೆ. ಕ್ರೆಡಿಟ್ ಕಾರ್ಡ್ ಲಿಮಿಟ್ ಮುಗಿದ ಮೇಲೆ ಹೊಸ ಕಾರ್ಡ್ ತಗೋತಾರೆ.
ಕೇವಲ ಮಿನಿಮಮ್ ಬ್ಯಾಲೆನ್ಸ್ ಕಟ್ಟಿದ್ರೆ ಕ್ರೆಡಿಟ್ ಕಾರ್ಡ್ ಬೇಡ
ಕ್ರೆಡಿಟ್ ಕಾರ್ಡ್‌ನ ಮಿನಿಮಮ್ ಬಿಲ್ ಕಟ್ಟಿ ಸರಿಹೋಗುತ್ತೆ ಅಂದ್ರೆ ನೀವು ದುಡ್ಡಿಲ್ಲದೆ ಸಾಲದಲ್ಲಿ ಸಿಲುಕಬಹುದು. ಬಡ್ಡಿ ಜಾಸ್ತಿಯಾಗಿ ಸಾಲ ಹೆಚ್ಚಾಗುತ್ತೆ. ಅಂಥೋರಿಗೆ ಕ್ರೆಡಿಟ್ ಕಾರ್ಡ್ ಬೇಡ.