ಕೇಂದ್ರದಿಂದ ಗುಡ್ ನ್ಯೂಸ್, ಕಡಿತಗೊಳ್ಳಲಿದೆ ನೀವು ಕಟ್ಟುವ ಆರೋಗ್ಯ, ಜೀವ ವಿಮೆ ಪ್ರೀಮಿಯಂ!
ಕೇಂದ್ರ ಸರ್ಕಾರ ಎಲ್ಲರಿಗೂ ಗುಡ್ ನ್ಯೂಸ್ ನೀಡಿದೆ. ನೀವು ಕಟ್ಟುವ ಆರೋಗ್ಯ ವಿಮೆ, ಜೀವ ವಿಮೆ ಕಂತು ಭಾರಿ ಕುಸಿತ ಕಾಣಲಿದೆ. ವಿಮೆ ಕಂತಿನ ಮೇಲಿನ ಜಿಎಸ್‌ಟಿ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.
ಆರೋಗ್ಯ ವಿಮೆ, ಜೀವ ವಿಮೆ ಪ್ರತಿಯೊಬ್ಬರಿಗೂ ಅತ್ಯವಶ್ಯತ. ಆದರೆ ಹೆಚ್ಚಿನ ಕಂತು, ಸುದೀರ್ಘ ವರ್ಷಗಳ ವರೆಗೆ ಕಟ್ಟಬೇಕಾದ ಬದ್ಧತೆ ಕಾರಣ ಕೆಲವರು ವಿಮೆಯಿಂದ ಹಿಂದೆ ಸರಿಯುತ್ತಾರೆ. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಿಂದ ನೀವು ಕಟ್ಟುವ ವಿಮೆಯ ಕಂತಿನ ಮೊತ್ತ ಕಡಿತಗೊಳ್ಳಲಿದೆ.
ಕೇಂದ್ರ ಸರ್ಕಾರ ಇದೀಗ ಆರೋಗ್ಯ ವಿಮೆ ಹಾಗೂ ಜೀವ ವಿಮೆ ಪ್ರಿಮಿಯಂ ಮೇಲಿನ ಜಿಎಸ್‌ಟಿ ಕಡಿತಗೊಳಿಸಲು ಮುಂದಾಗಿದೆ. ಮುಂದಿನ ತಿಂಗಳ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹಲವು ಸುತ್ತಿನ ಚರ್ಚೆ ಬಳಿಕ ಇದೀಗ ಜಿಎಸ್‌ಟಿ ಕಡಿತ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಪ್ರಸ್ತಾವನೆ ಜಿಎಸ್‌ಟಿ ಕೌನ್ಸಿಲ್‌ಗೆ ಸಲ್ಲಿಸಿದೆ.
ಕೇಂದ್ರ ಹೊಸ ಪ್ರಸ್ತಾವನೆ ಪ್ರಕರಾ 5 ಲಕ್ಷ ರೂಪಾಯಿ ವರೆಗಿನ ಆರೋಗ್ಯ ವಿಮೆ ಪ್ರೀಮಿಯಂಗೆ ಯಾವುದೇ ಜಿಎಸ್‌ಟಿ ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರು ಅತೀ ಕಡಿಮೆ ಮೊತ್ತದಲ್ಲಿ 5 ಲಕ್ಷ ರೂಪಾಯಿ ವಿಮೆ ಮಾಡಿಸಿಕೊಲ್ಲು ಸಾಧ್ಯವಾಗುತ್ತದೆ. ಇದಿರಂದ ಕುಟುಂಬ ಆರ್ಥಿಕ ಭದ್ರತೆ ಹೆಚ್ಚಲಿದೆ. ಇಷ್ಟೇ ಅಲ್ಲ ಆರೋಗ್ಯ, ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ.
ಹೊಸ ಪ್ರಸ್ತಾವನೆಯಲ್ಲಿ 5 ಲಕ್ಷ ರೂ ವರೆಗಿನ ವಿಮೆಗಳಿಗೆ ಜಿಎಸ್‌ಟಿ ತೆಗೆದುಹಾಕಲು ನಿರ್ಧರಿಸಿದೆ. ಇದರ ಜೊತೆಗೆ ಎಲ್ಲಾ ಹಿರಿಯ ನಾಗರಿಕರ ಆರೋಗ್ಯ ವಿಮೆ ಪ್ರೀಮಿಯಂಗಳಿಗೆ ಜಿಎಸ್‌ಟಿ ತೆಗೆದು ಹಾಕಲು ನಿರ್ಧರಿಸಲಾಗಿದೆ. ಈ ಮೂಲಕ ಹಿರಿಯ ನಾಗರಿಗೆ ವಿಶೇಷ ಸವಲತ್ತನ್ನು ಕೇಂದ್ರ ಸರ್ಕಾರ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರ ಆರೋಗ್ಯ ವಿಮೆಯನ್ನು 70 ವರ್ಷಕ್ಕಿಂತ ಹಿರಿಯ ನಾಗರೀಕರೂ ಆಯುಷ್ಮಾನ್ ಭಾರತ್ ಆರೋಗ್ಯ ಸೌಲಭ್ಯ ಒದಗಿಸಲಾಗಿದೆ.
ಜೀವ ವಿಮೆ ಪ್ರೀಮಿಯಂಗಳಿಗೂ ಜಿಎಸ್‌ಟಿ ವಿನಾಯಿತಿ ನೀಡುವ ಪ್ರಸ್ತಾಪವಿದೆ. ಈ ಕಡಿತದಿಂದ ರಾಜ್ಯಗಳಿಗೆ ಸುಮಾರು 11,000 ಕೋಟಿ ರೂ. ನಷ್ಟ ಉಂಟಾಗಲಿದ್ದು, ಇದನ್ನು ಸರಿದೂಗಿಸಲು ಐಷಾರಾಮಿ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಿಸುವ ಚಿಂತನೆಯಿದೆ.