- Home
- Business
- ಅಂಬಾನಿ ಜಿಯೋ ಮಾಲ್ ಚಿಲ್ಲರೆ ವ್ಯವಹಾರಕ್ಕೆ ಹೊಸ ಪ್ರತಿಸ್ಪರ್ಧಿ, 15000 ಕೋಟಿ ರೂ ಆಸ್ತಿಯ ಬಿಲಿಯನೇರ್ ವ್ಯಕ್ತಿ
ಅಂಬಾನಿ ಜಿಯೋ ಮಾಲ್ ಚಿಲ್ಲರೆ ವ್ಯವಹಾರಕ್ಕೆ ಹೊಸ ಪ್ರತಿಸ್ಪರ್ಧಿ, 15000 ಕೋಟಿ ರೂ ಆಸ್ತಿಯ ಬಿಲಿಯನೇರ್ ವ್ಯಕ್ತಿ
ಏಷ್ಯಾ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಇತ್ತೀಚೆಗೆ ತಮ್ಮ ಅಲ್ಟ್ರಾ ಐಷಾರಾಮಿ ಮೆಗಾ-ಮಾಲ್ ಜಿಯೋ ವರ್ಲ್ಡ್ ಪ್ಲಾಜಾವನ್ನು ಪ್ರಾರಂಭಿಸುವುದರೊಂದಿಗೆ ಚಿಲ್ಲರೆ ವಲಯದಲ್ಲಿ ತಮ್ಮ ಅತಿದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಇವರಿಗೆ ಪ್ರತಿಸ್ಫರ್ಧಿಯೊಬ್ಬರಿದ್ದಾರೆ.

ಬರೋಬ್ಬರಿ 7,50,000 ಚದರ ಅಡಿಯಲ್ಲಿ ಇರುವ ಈ ಮಾಲ್ ಲೂಯಿಸ್ ವಿಟಾನ್, ಗುಸ್ಸಿ, ಅರ್ಮಾನಿ ಮತ್ತು ಬಾಲೆನ್ಸಿಯಾಗದಂತಹ ಪ್ರಪಂಚದಾದ್ಯಂತದ ಕೆಲವು ಐಷಾರಾಮಿ ಬ್ರಾಂಡ್‌ಗಳನ್ನು ಹೊಂದಿರುತ್ತದೆ. ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶವಾದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (BKC) ಇರುವ ಮಾಲ್‌ನ ಉದ್ಘಾಟನಾ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಮತ್ತು ಬಾಲಿವುಡ್ ತಾರೆಗಳು, ಗಣ್ಯರು ಭಾಗವಹಿಸಿದ್ದರು.
ಉದ್ಯಮಿ ಅತುಲ್ ರುಯಿಯಾ ಅವರು ಕೂಡ ಚಿಲ್ಲರೆ ವಲಯದ ಪ್ರವರ್ತಕರಲ್ಲಿ ಒಬ್ಬರು. ಅಂಬಾನಿಗೆ ಪ್ರತಿಸ್ಪರ್ಧಿ. ಅಂಬಾನಿಯ ಜಿಯೋ ವರ್ಲ್ಡ್ ಪ್ಲಾಜಾದಿಂದ ಸುಮಾರು 30 ನಿಮಿಷಗಳ ಪ್ರಯಾಣದ ದೂರದಲ್ಲಿ ಲೋವರ್ ಪರೇಲ್‌ನಲ್ಲಿ ಭಾರತದ ಮೊದಲ ಪ್ರೀಮಿಯಂ ಐಷಾರಾಮಿ ಚಿಲ್ಲರೆ ಮಾರಾಟ ಸ್ಥಳವಾದ ಫೀನಿಕ್ಸ್ ಪಲ್ಲಾಡಿಯಮ್ ನಿಂತಿದೆ. ಈ ಐಷಾರಾಮಿ ಮಾಲ್ ಫೀನಿಕ್ಸ್ ಮಿಲ್ಸ್‌ನ ಪ್ರಮುಖ ಸ್ಥಾಪನೆಗಳಲ್ಲಿ ಒಂದಾಗಿದೆ. ಇದು 36,000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಲಿಸ್ಟೆಡ್ ರಿಯಲ್ ಎಸ್ಟೇಟ್ ದೈತ್ಯ.
ಈಗ ಮಾಲ್, ವಸತಿ, ರಿಯಲ್ ಎಸ್ಟೇಟ್ ಮತ್ತು ಹೋಟೆಲ್ ವಿಭಾಗಗಳಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಫೀನಿಕ್ಸ್ ಮಿಲ್ಸ್ ಒಂದು ಶತಮಾನದಷ್ಟು ಹಳೆಯದಾದ ನಷ್ಟದಲ್ಲಿದ್ದ ಜವಳಿ ಕಂಪನಿಯಾಗಿದ್ದು ಅದು 90 ರ ದಶಕದಲ್ಲಿ ಅದ್ಭುತವಾದ ಗಿರಣಿ ಗೋಡಾನ್‌ನಿಂದ ಮಾಲ್ ಗೆ ರೂಪಾಂತರವನ್ನು ಕಂಡಿತು. ಈ ಮಾಲ್ ಯಶಸ್ವಿಯಾದುದರ ಹಿಂದಿನ ರೂವಾರಿ ರಿಯಲ್ ಎಸ್ಟೇಟ್ ಮಾಂತ್ರಿಕ ಅತುಲ್ ರುಯಿಯಾ. ಮುಂಬೈ ಮೂಲದ ಉದ್ಯಮಿ 2023 ರಲ್ಲಿ ಭಾರತದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅತುಲ್ ರುಯಿಯಾ ಇಂದು ಸುಮಾರು 15,000 ಕೋಟಿ ರೂ ($1.8 ಬಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಕಾರ್ಮಿಕರ ಸಮಸ್ಯೆಗಳ ನಡುವೆ ಕುಂಟುತ್ತಾ ಸಾಗುತ್ತಿದ್ದ 33 ಲಕ್ಷ ಚದರ ಅಡಿಯ ಗಿರಣಿಯಲ್ಲಿ ಅವರು ಮಾಲ್ ಸ್ಥಾಪಿಸಿ ಬೃಹತ್ ಯಶಸ್ಸು ಕಂಡರು.
1994 ರಲ್ಲಿ ಹೆಣಗಾಡುತ್ತಿರುವ ಕುಟುಂಬದ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡ ರೂಯಾ ಫೀನಿಕ್ಸ್ ಮಿಲ್ಸ್ ಅನ್ನು ಮುಂಬೈನ ಹೆಚ್ಚು ಬೇಡಿಕೆಯಿರುವ ಚಿಲ್ಲರೆ ಜಾಗವಾಗಿ ಮರು ಅಭಿವೃದ್ಧಿ ಮಾಡಿದರು. ಅವರು 2007 ರಲ್ಲಿ ಕಾಂಪೌಂಡ್‌ನಲ್ಲಿ ಪಂಚತಾರಾ ಐಷಾರಾಮಿ ಹೋಟೆಲ್ ಅನ್ನು ತೆರೆದರು. ಫೀನಿಕ್ಸ್ ಮಿಲ್ಸ್ ಇಂದು ದೇಶದ 6 ನಗರಗಳಾದ ಮುಂಬೈ, ಅಹಮದಾಬಾದ್, ಇಂದೋರ್, ಲಕ್ನೋ, ಚೆನ್ನೈ, ಪುಣೆ ಮತ್ತು ಬೆಂಗಳೂರುಗಳಲ್ಲಿ 8 ಮಾಲ್‌ಗಳನ್ನು ನಡೆಸುತ್ತಿದೆ. ಇದರ ವ್ಯಾಪಾರ ಆಸಕ್ತಿಗಳು ಸೇಂಟ್ ರೆಗಿಸ್ ಮುಂಬೈ ಮತ್ತು ಕೋರ್ಟ್ಯಾರ್ಡ್ ಮ್ಯಾರಿಯಟ್ ಆಗ್ರಾ ಹೋಟೆಲ್‌ಗಳನ್ನು ಸಹ ಒಳಗೊಂಡಿವೆ.
ಅತುಲ್ ರುಯಿಯಾ ಅವರು ಫೀನಿಕ್ಸ್ ಮಿಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿದ್ದು, ಈಗ ಸಂಸ್ಥೆಯ ಅಧ್ಯಕ್ಷರಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಗೆ ಹೋದರು. ಅವರ ವ್ಯವಹಾರ ಮಾದರಿಯು ವಿಶ್ವ ದರ್ಜೆಯ ಮಿಶ್ರ ಬಳಕೆಯ ರಿಯಲ್ ಎಸ್ಟೇಟ್ ಕಂಪನಿಯನ್ನು ರಚಿಸುವ ಗುರಿಯನ್ನು ಹೊಂದಿದೆ.
ಇದು ಚಿಲ್ಲರೆ ಸ್ವತ್ತುಗಳನ್ನು ಹೊಂದುವುದು, ಅಭಿವೃದ್ಧಿ ಪಡಿಸುವುದು ಮತ್ತು ನಿರ್ವಹಿಸುವುದು, ವಸತಿ ಸ್ವತ್ತುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಮಾರಾಟ ಮಾಡುವುದು, ವಾಣಿಜ್ಯ ಸ್ವತ್ತುಗಳನ್ನು ಅಭಿವೃದ್ಧಿಪಡಿಸುವುದು, ಹೊಂದುವುದು ಮತ್ತು ಗುತ್ತಿಗೆ ನೀಡುವುದು ಮತ್ತು ಆತಿಥ್ಯ ಸ್ವತ್ತುಗಳನ್ನು ಹೊಂದುವುದು ಮತ್ತು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.