ಆಪರೇಶನ್ ಸಿಂದೂರ್ ಗೌರವ, 336 ದಿನ, ಕಾಲ್,ಡೇಟಾ ಸೇರಿ ಭರ್ಜರಿ ಆಫರ್ ಘೋಷಿಸಿದ BSNL
ಆಪರೇಶನ್ ಸಿಂದೂರ್, ಭಾರತೀಯ ಸೇನೆಗೆ ಗೌರವ ನೀಡಲು ಬಿಎಸ್ಎನ್ಎಲ್ ಭರ್ಜರಿ ಆಫರ್ ಘೋಷಿಸಿದೆ. ಅತೀ ಕಡಿಮೆ ಬೆಲೆಗೆ 336 ದಿನ ವ್ಯಾಲಿಟಿಡಿ ಪ್ರತಿ ರೀಚಾರ್ಜ್ ಹಣದಲ್ಲಿ ಗ್ರಾಹಕರಿಗೆ ಶೇ.2.5 ರಷ್ಟು ಡಿಸ್ಕೌಂಟ್, ಇನ್ನು ಶೇ.2.5 ರಷ್ಟು ಮೊತ್ತ ಸೇನೆಗೆ ನೀಡಲಿದೆ. ಏನಿದು ಬಿಎಸ್ಎನ್ಎಲ್ ಶೌರ್ಯ ಸಮರ್ಪಣ ಆಫರ್?

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಈಗಾಲೇ ಕೈಗೆಟುಕುವ ದರದ ಆಫರ್ ಮೂಲಕ ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದೀಗ ಭಾರತೀಯ ಸೇನೆ, ಆಪರೇಶನ್ ಸಿಂದೂರ್‌ಗೆ ಗೌರವ ನೀಡುಲ ಭರ್ಜರಿ ಆಫರ್ ಘೋಷಿಸಿದೆ. ಇದಕ್ಕಾಗಿ ಬಿಎಸ್ಎನ್ಎಲ್ ಶೌರ್ಯ ಸಮಪರ್ಣ ಆಫರ್ ಘೋಷಿಸಿದೆ. ಈ ಆಫರ್ ಮೂಲಕ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್, ಒಂದು ವರ್ಷ ವ್ಯಾಲಿಟಿಡಿ, ಡೇಟಾ, ಕರೆ ಸೇರಿದಂತೆ ಭರ್ಜರಿ ಆಫರ್ ನೀಡಲಾಗಿದೆ. ಇದರ ಜೊತೆಗೆ ಗ್ರಾಹಕರಿಗೆ ಡಿಸ್ಕೌಂಟ್ ಕೂಡ ಘೋಷಿಸಿದೆ. ಇಷ್ಟೇ ಅಲ್ಲ ರೀಚಾರ್ಜ್ ಆಗುವ ಮೊತ್ತದಲ್ಲಿ ಶೇಕಡಾ 2.5ರಷ್ಟು ಹಣವನ್ನು ಆಪರೇಶನ್ ಸಿಂದೂರ್ ಗೌರವಕ್ಕಾಗಿ ಭಾರತೀಯ ಸೇನೆಗೆ ನೀಡಲಿದೆ.
ಬಿಎಸ್ಎನ್ಎಲ್ ಶೌರ್ಯ ಸಮರ್ಪಣ ಆಫರ್ ಘೋಷಿಸಿದೆ. ಈ ಆಫರ್ 336 ದಿನ ವ್ಯಾಲಿಡಿಟಿ ಅಂದರೆ 11 ತಿಂಗಳು ಯಾವುದೇ ಚಿಂತೆ ಇಲ್ಲದೆ ಬಳಕೆ ಮಾಡಬಹುದು. ಇನ್ನು 11 ತಿಂಗಳು ಅನ್‌ಲಿಮಿಟೆಡ್ ಕಾಲ್ ಸೇವೆ ಲಭ್ಯವಿದೆ. ಉಚಿತ ರೋಮಿಂಗ್ ಸೌಲಭ್ಯ, ಪ್ರತಿ ದಿನ 100 ಎಸ್ಎಂಎಸ್ ಹಾಗೂ 24 ಜಿಬಿ ಡೇಟಾ ಸೌಲಭ್ಯವೂ ಈ ಆಫರ್ ಮೂಲಕ ಲಭ್ಯವಿದೆ.
ಬಿಎಸ್ಎನ್ಎಲ್ ಶೌರ್ಯ ಸಮರ್ಪಣ ಆಫರ್ ರೀಚಾರ್ಜ್ ಬೆಲೆ 1,499 ರೂಪಾಯಿ. ಆದರೆ ಇದು ಸರಿಸುಮಾರು 1 ವರ್ಷದ ಪ್ಲಾನ್. ಈ ಪೈಕಿ ಶೇಕಡಾ 5ರಷ್ಟು ಮೊತ್ತವನ್ನು ಬಿಎಸ್ಎನ್ಎಲ್ ಗ್ರಾಹಕರು ಹಾಗೂ ಸೇನೆಗೆ ನೀಡುತ್ತಿದೆ.ಪ್ರತಿ ರೀಚಾರ್ಜ್‌ನಲ್ಲಿನ ಶೇಕಡಾ 2.5 ರಷ್ಟು ಮೊತ್ತವನ್ನು ಗ್ರಾಹಕರಿಗೆ ಡಿಸ್ಕೌಂಟ್ ರೂಪದಲ್ಲಿ ನೀಡಲಿದೆ. ಇನ್ನುಳಿದ ಶೇಕಡಾ 2.5ರಷ್ಟು ಮೊತ್ತವನ್ನು ಭಾರತೀಯ ಸೇನಾ ವಿಭಾಗಕ್ಕೆ ನೀಡಲಿದೆ. ಈ ಮೂಲಕ ಬಿಎಸ್ಎನ್ಎಲ್ ಆಪರೇಶನ್ ಸಿಂದೂರ್‌ಗೆ ಗೌರವ ನೀಡಲು ಮುಂದಾಗಿದೆ.
ಶೇಕಡಾ ರಷ್ಟು ಬಿಎಸ್ಎನ್ಎಲ್ ಕೊಡುಗೆ ಎಂದರೆ ಪ್ರತಿ ರೀಚಾರ್ಜ್ ಮಾಡಿದ ಬಳಿಕ ಗ್ರಾಹಕರಿಗೆ 37.50 ರೂಪಾಯಿ ಕ್ಯಾಶ್‌ಬ್ಯಾಕ್ ರೂಪದಲ್ಲಿ ಖಾತೆಗೆ ಜಮೆ ಆಗಲಿದೆ. ಇನ್ನು 37.50 ರೂಪಾಯಿ ಸೇನಾ ವಿಭಾಗಗಕ್ಕೆ ಬಿಎಸ್ಎನ್ಎಲ್ ನೀಡಲಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಕಾರಣ ಗ್ರಾಹಕರು ಈ ಜೂನ್ 30ರೊಳಗೆ ರೀಚಾರ್ಜ್ ಮಾಡಿಕೊಂಡಲ್ಲಿ ಬಿಎಸ್ಎನ್ಎಲ್ ಶೌರ್ಯ ಸಮರ್ಪಣ ಆಫರ್ ಆ್ಯಕ್ಟಿವೇಟ್ ಆಗಲಿದೆ. ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು.
ಬಿಎಸ್ಎನ್ಎಲ್ ಶೌರ್ಯ ಸಮರ್ಪಣ ಆಫರ್ ರೀಚಾರ್ಜ್ ಮಾಡಿಕೊಂಡಲ್ಲಿ ಒಂದು ವರ್ಷ ಯಾವುದೇ ತಲೆನೋವಿನಲ್ಲದೆ ಸಾಗಲು ಸಾಧ್ಯವಿದೆ. 1,499 ರೂಪಾಯಿ ಅಂದರೆ 11 ತಿಂಗಳಿಗೆ ಪ್ರತಿ ತಿಂಗಳು 137 ರೂಪಾಯಿ ರೀಚಾರ್ಜ್ ಮಾಡಿದಂತೆ ಆಗಲಿದೆ. ಈ ಮೊತ್ತಕ್ಕೆ ಅನ್‌ಲಿಮಿಟೆಡ್ ಕರೆ, ಸಂದೇಶ, ಡೇಟಾ, ರೋಮಿಂಗ್ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗುತ್ತಿದೆ.
ಬಿಎಸ್ಎನ್ಎಲ್ ಇತ್ತೀಚಿನ ದಿನಗಳಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ರೀಚಾರ್ಜ್, ಯಾವುದೇ ಗ್ರಾಮೀಣ ಪ್ರದೇಶದಲ್ಲಿ ನೆಟ್‍ವರ್ಕ್ ಸೇರಿದಂತೆ ಹಲವು ಸೌಲಭ್ಯಗಳು ನೀಡುತ್ತಿದೆ. ಇನ್ನು ಬಿಎಸ್ಎನ್ಎಲ್ 5ಜಿ ಸೇವೆ ಶೀಘ್ರದಲ್ಲೇ ದೇಶಾದ್ಯಂತ ಲಭ್ಯವಾಗಲಿದೆ. ಈಗಾಗಲೇ ಟವರ್ ಹಾಗೂ ನೆಟ್‌ವರ್ಕ್ ಅಳವಡಿಕೆ ಬಹುತೇಕ ಪೂರ್ಣಗೊಂಡಿದೆ.