ಎಂಜಲು ಆಯ್ದು ತಿನ್ನೋ ಈ ಭಿಕ್ಷುಕ 10 ಮನೆಗಳನ್ನು ಹೊಂದಿರೋ ಮಿಲೇನಿಯರ್
ಜರ್ಮನಿಯಲ್ಲಿ ವಾಸಿಸುವ ಮಿಲಿಯನೇರ್ ಯಾವ ರೀತಿಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಕೇಳಿದರೆ ನಿಮಗೆ ಅಚ್ಚರಿಯಾಗೋದು ಖಚಿತ. ಯಾಕಂದ್ರೆ ಈ ವ್ಯಕ್ತಿಗೆ 8-10 ಮನೆಗಳಿವೆ, ಆದರೆ ಇವತ್ತಿಗೂ ಕೂಡ ಭಿಕ್ಷೆ ಬೇಡಿ, ಯಾರೋ ಬಿಸಾಕಿದ ಆಹಾರ ತಿಂದು ಬದುಕುತ್ತಾರೆ.
ನಮ್ಮಲ್ಲಿ ತುಂಬಾ ಹಣವಿದ್ದಾಗ ಈ ಹಣದಿಂದ ನಾವು ಏನೆಲ್ಲಾ ಮಾಡಬಹುದು ಎಂದು ಕನಸು ಕಾಣುತ್ತೇವೆ. ಕೆಲವರು ಐಷಾರಾಮಿ ಮನೆ ಖರೀದಿಸಲು ಬಯಸಿದರೆ, ಇನ್ನೂ ಕೆಲವರು ಜಗತ್ತನ್ನು ಸುತ್ತಲು ಬಯಸುತ್ತಾರೆ. ಆದರೆ ಇನ್ನೂ ಕೆಲವು ಜನರು ಹಣದಿಂದ ಹಣ ಸಂಪಾದಿಸಲು (money making) ಬಯಸುತ್ತಾರೆ.
ಆದರೆ ಇವತ್ತು ನಾವು ನಿಮಗೆ ಹೇಳಲಿರುವ ವ್ಯಕ್ತಿಯು ಇವೆಲ್ಲಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದ್ದಾನೆ. ಅವರ ಕಥೆಯನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಯಾಕೆಂದರೆ ಭಿಕ್ಷೆ ಬೇಡಿ ಕೋಟ್ಯಾಧಿಪತಿಗಳಾಗಿದ್ದಾರೆ (millioniere beggar). ಅವರ ಬಗ್ಗೆ ತಿಳಿಯೋಣ.
ಜರ್ಮನಿಯಲ್ಲಿ ವಾಸಿಸುವ ಈ ಮಿಲಿಯನೇರ್ ಹೆಸರು ಹೈಂಜ್ ಬಿ (Heinz B).. ಆದರೆ ಅವನನ್ನು ನೋಡಿದ್ರೆ ಅವನು ಎಷ್ಟು ಆಸ್ತಿಯನ್ನು ಹೊಂದಿದ್ದಾನೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ. ಈ ಮಿಲಿಯನೇರ್ ಮನೆಯೇ ಇಲ್ಲದ ನಿರ್ಗತಿಕನಂತೆ ಬದುಕುತ್ತಾನೆ. ಆದರೆ ಈ ವ್ಯಕ್ತಿಯು 8-10 ಮನೆ ಅಪಾರ್ಟ್ ಮೆಂಟ್ ಗಳನ್ನು ಹೊಂದಿದ್ದಾನೆ ಅನ್ನೋದು ನಿಜಾ, ಅಷ್ಟೇ ಅಲ್ಲ ಇಷ್ಟೇಲ್ಲಾ ಇದ್ದರೂ ಶ ಅವನು ಇನ್ನೂ ಕಸದಿಂದ, ಅಥವಾ ಯಾರೋ ಬಿಟ್ಟ ಎಂಜಲಿನಿಂದ ಆಹಾರ ತಿನ್ನುತ್ತಾನೆ ಅನ್ನೋದು ನಿಜ.
ಆಹಾರಕ್ಕಾಗಿ ಕಡಿಮೆ ಖರ್ಚು ಮಾಡುವುದು
ಸಾಮಾನ್ಯವಾಗಿ, ಜನರು ಉತ್ತಮ ಪ್ರಮಾಣದ ಆಹಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ, ಆದರೆ ಹೈಂಜ್ ಬಿಗೆ, ಆಹಾರಕ್ಕಾಗಿ ತಿಂಗಳಿಗೆ ಕೇವಲ 450 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಅದೂ ಏನನ್ನಾದರೂ ಫ್ರೈ ಮಾಡಲು ಎಣ್ಣೆ ಅಗತ್ಯವಿದ್ದಾಗ ಮಾತ್ರ. ಉಳಿದ ಸಮಯದಲ್ಲಿ, ಅವರು ಕಸದಲ್ಲಿ ಎಸೆಯಲಾದ ಆಹಾರದಿಂದ ಹೊಟ್ಟೆ ತುಂಬಿಸಿ ಕೊಳ್ಳುತ್ತಾರೆ.
ಹೈಂಜ್ ಬಿ ಪ್ರಕಾರ, ಜನರು ಕುಟುಂಬದ ಹೊಟ್ಟೆಯನ್ನು ಆರಾಮವಾಗಿ ತುಂಬುವಷ್ಟು ಆಹಾರವನ್ನು ಎಸೆಯುತ್ತಾರೆ. ತಾನು ಅದೇ ಆಹಾರವನ್ನು ತಿಂದು ಬದುಕುತ್ತೇನೆ ಎಂದು ಹೈಂಜ್ ಬಿ ಹೇಳುತ್ತಾರೆ. ಇದಲ್ಲದೆ, ಅವರ ವೆಚ್ಚಗಳು ಲ್ಯಾಪ್ಟಾಪ್ನ ಇಂಟರ್ನೆಟ್ ಮತ್ತು ಫೋನ್ ಮಾಡುವ ಕರೆಗಳಿಗೆ ಮಾತ್ರ ವೆಚ್ಚವಾಗುತ್ತವೆ ಎಂದು ಸಹ ಹೇಳುತ್ತಾರೆ.
ಇವರ ಆಸ್ತಿ ಬಗ್ಗೆ ಕೇಳಿದರೆ, ತಲೆ ತಲೆತಿರುಗುತ್ತದೆ
ನೀವು ಈ ವ್ಯಕ್ತಿಯ ಆದಾಯದ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ?. 2021 ರಲ್ಲಿ, ಅವರು 7 ಮನೆಗಳು ಮತ್ತು 2 ಅಪಾರ್ಟ್ಮೆಂಟ್‌ಮೆಟ್‌ಗಳನ್ನು (Aprtment) ಹೊಂದಿದ್ದರು, ಅವರ ಬ್ಯಾಂಕ್ ಬ್ಯಾಲೆನ್ಸ್ 4 ಕೋಟಿ ರೂ. ಇತ್ತು. ಈಗ ಅವರು ಅದನ್ನು ಬಳಸಿಕೊಂಡು ಮನೆ ಖರೀದಿಸಿದ್ದಾರೆ ಮತ್ತು 10 ಮನೆಗಳನ್ನು ಹೊಂದಿದ್ದಾರೆ.
ಇದಲ್ಲದೆ, ಸುಮಾರು 90 ಲಕ್ಷ ರೂಪಾಯಿಗಳು ಅವರ ಸ್ಥಿರ ಠೇವಣಿಯಲ್ಲಿವೆ. ಅವರು ಪ್ರತಿ ತಿಂಗಳು 3 ಲಕ್ಷ 23 ಸಾವಿರ ರೂಪಾಯಿಗಳ ಪಿಂಚಣಿಯನ್ನು ಪಡೆಯುತ್ತಾರೆ, ಅವರು ಮತ್ತೊಂದು ಪಿಂಚಣಿಯಿಂದ (pension) 14 ಸಾವಿರ ರೂಪಾಯಿಗಳನ್ನು ಸಹ ಪಡೆಯುತ್ತಾರೆ. ಇದೆಲ್ಲದರ ಹೊರತಾಗಿಯೂ, ಹೈಂಜ್ ತನ್ನ ಜೀವನವನ್ನು ಭಿಕ್ಷುಕನಂತೆ ಬದುಕುತ್ತಾನೆ. ಎಂಜಲು ಅನ್ನ ತಿನ್ನುತ್ತಾ, ಮುರಿದ ಬೈಸಿಕಲ್ ನಲ್ಲಿ ಸವಾರಿ ಮಾಡುತ್ತಾನೆ.