ಅವಧಿಗಿಂತ ಮುಂಚೆ ಸಾಲ ತೀರಿಸ್ತೀರಾ? Foreclosure ಚಾರ್ಜ್ ರದ್ದು ಮಾಡಲು ಆರ್‌ಬಿಐ ಶಿಫಾರಸು!
ಆರ್‌ಬಿಐ ಹೊಸ ರೂಲ್ಸ್ ಪ್ರಕಾರ, ಸಾಲವನ್ನು ಅವಧಿಗಿಂತ ಮುಂಚಿತವಾಗಿ ಕಟ್ಟಿದರೆ ಯಾವ ಫೈನ್ ಕೂಡ ಇರೋದಿಲ್ಲ. ಇದು ಜನಸಾಮಾನ್ಯರಿಗೂ, ಸಣ್ಣ ಕೈಗಾರಿಕೆಗಳಿಗೂ ಅನ್ವಯ ಆಗಲಿದೆ. ರೂಲ್ಸ್ ಜಾರಿಗೆ ಬರೋಕು ಮುಂಚೆ ಆರ್‌ಬಿಐ ಎಲ್ಲರಿಂದ ಅಭಿಪ್ರಾಯ ಕೇಳಲಿದೆ.

ಇಲ್ಲಿಯವರೆಗೆ, ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯಿಂದ ಸಾಲ ಪಡೆದ ಗ್ರಾಹಕರು ಅವಧಿ ಮುಗಿಯುವ ಮೊದಲು ಸಾಲವನ್ನು ಮರುಪಾವತಿಸಲು ಬಯಸಿದರೆ, Foreclosure ಶುಲ್ಕವನ್ನು ಪಾವತಿಸಬೇಕಾಗಿತ್ತು. Foreclosure ಶುಲ್ಕ ಎಂದರೆ, ಅವಧಿಗಿಂತ ಮುಂಚೆ ಸಾಲವನ್ನು ಮುಗಿಸಿದ ಕಾರಣಕ್ಕಾಗಿ ಹಾಕುವ ದಂಡ.
ಗ್ರಾಹಕರು ಫ್ಲೋಟಿಂಗ್ ರೇಟ್‌ನಲ್ಲಿ ಸಾಲವನ್ನು ಪಡೆದಿದ್ದರೆ, ಈ ಸಾಲವನ್ನು ಅವಧಿಗಿಂತ ಮೊದಲೇ ಮರುಪಾವತಿಸಲು ಈ ಪೂರ್ವಪಾವತಿ ಶುಲ್ಕವನ್ನು ಪಾವತಿಸಬೇಕಾಗಿತ್ತು.
ಈ ನಿಯಮ ಶೀಘ್ರದಲ್ಲೇ ಬದಲಾಗಲಿದ್ದು, ಈ ಬಗ್ಗೆ ಆರ್‌ಬಿಐ ಕಾರ್ಯೋನ್ಮುಖವಾಗಿದೆ. ಇನ್ನು ಮುಂದೆ ನೀವೇನಾದರೂ ಫ್ಲೋಟಿಂಗ್ ದರದಲ್ಲಿ ಸಾಲ ತೆಗೆದುಕೊಂಡಿದ್ದು, ಅದನ್ನು ನೀವು ಬಯಸಿದಾಗ ಯಾವುದೇ ಪೂರ್ವಪಾವತಿ ಶುಲ್ಕ ಇಲ್ಲದೆ ಮರುಪಾವತಿ ಮಾಡಬಹುದಾಗಿದೆ.
ಇನ್ನು ಮುಂದೆ, ಯಾವುದೇ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ ಗ್ರಾಹಕರಿಂದ ಯಾವುದೇ ದಂಡವನ್ನು ಕಡಿತಗೊಳಿಸಲು ಅಥವಾ ಸಾಲಗಳ ಆರಂಭಿಕ ಮರುಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸಾಧ್ಯವಾಗುವುದಿಲ್ಲ.
ಇನ್ನು ಮುಂದೆ ಈ ನಿಯಮವನ್ನು MSME ಗಳಿಗೂ ಜಾರಿಗೆ ತರಲಾಗುವುದು. ಬ್ಯಾಂಕಿಂಗ್ ನಿಯಂತ್ರಕ ಭಾರತೀಯ ರಿಸರ್ವ್ ಬ್ಯಾಂಕ್ ಈ ನಿಟ್ಟಿನಲ್ಲಿ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.
ಈ ಕರಡು 2025 ಮಾರ್ಚ್ 21ರವರೆಗೆ ಪಾಲುದಾರರಿಂದ ಅಭಿಪ್ರಾಯಗಳು ಮತ್ತು ಸಲಹೆಗಳಿಗಾಗಿ ತೆರೆದಿರುತ್ತದೆ, ನಂತರ ಆರ್‌ಬಿಐ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
ಆರ್‌ಬಿಐ ಅಡಿಯಲ್ಲಿರುವ ಎಲ್ಲಾ ಸಾಲದಾತರು ಯಾವುದೇ ಸಂದರ್ಭಗಳಲ್ಲಿ ಗ್ರಾಹಕ ಸಾಲಗಳ ಪೂರ್ವಪಾವತಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸಾಧ್ಯವಾಗುವುದಿಲ್ಲ.
ಪ್ರಸ್ತುತ, ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಫ್ಲೋಟಿಂಗ್ ರೇಟ್ ಅವಧಿಯ ಸಾಲಗಳ ಪೂರ್ವಪಾವತಿಗೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸುತ್ತಿದ್ದವು. ಇನ್ನು ಮುಂದೆ ಅದು ಸಾಧ್ಯವಾಗೋದಿಲ್ಲ.
ವ್ಯವಹಾರವನ್ನು ಹೊರತುಪಡಿಸಿ ಬೇರೆ ವಲಯದಲ್ಲಿ ಸಾಲವನ್ನು ಪಡೆದರೆ, ಆರಂಭಿಕ ಮರುಪಾವತಿಗೆ ಯಾವುದೇ ಶುಲ್ಕವನ್ನು ಕಡಿತಗೊಳಿಸುವ ನಿಯಮ ಪ್ರಸ್ತುತ ಇಲ್ಲ.
ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡೋರಿಗೆ ಸರ್ಕಾರದ ಗುಡ್‌ನ್ಯೂಸ್, ಡೆಪಾಸಿಟ್ ಇನ್ಶುರೆನ್ಸ್ ಏರಿಕೆ ಸಾಧ್ಯತೆ!
ಟೈಯರ್ 1 ಮತ್ತು ಟೈಯರ್ 2 ಸರ್ಕಾರಿ ಬ್ಯಾಂಕುಗಳು ಮತ್ತು ಕೆಲವು NBFC ಗಳಿಂದ ವ್ಯವಹಾರ ಉದ್ದೇಶಗಳಿಗಾಗಿ ವ್ಯಕ್ತಿ ಅಥವಾ MSME ಗುಂಪು ಪಡೆದ ಸಾಲಗಳಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ.
ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ್ ದಾಸ್ ಪಿಎಂ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ