ಏರ್‌ಟೆಲ್ ಭರ್ಜರಿ ಆಫರ್, ಬರೋಬ್ಬರಿ 17000 ರೂ ವಾರ್ಷಿಕ ಸಬ್‌ಸ್ಕ್ರಿಪ್ಶನ್ ಶುಲ್ಕ ಉಚಿತ
ಏರ್‌ಟೆಲ್ ಇದೀಗ ಬಿಗ್ ಆಫರ್ ಘೋಷಿಸಿದೆ. ವಾರ್ಷಿಕ ಸಬ್‌ಸ್ಕ್ರಿಪಶ್ಶನ್ ಶುಲ್ಕ ಬರೋಬ್ಬರಿ 17,000 ರೂಪಾಯಿ ಉಚಿತವಾಗಿ ನೀಡುತ್ತಿದೆ. ಈ ಮೂಲಕ ಗ್ರಾಹಕರಿಗೆ ಎಐ ಸಂಪೂರ್ಣ ನೆರವು ಲಭ್ಯವಾಗಲಿದೆ. ಏನಿದು ಏರ್‌ಟೆಲ್ ಪೆರ್ಪ್ಲೆಕ್ಸಿಟಿ ಆಫರ್?

ಏರ್‌ಟೆಲ್ ಇದೀಗ ಅತೀ ದೊಡ್ಡ ಆಫರ್ ಘೋಷಿಸಿದೆ. ಬರೋಬ್ಬರಿ 17,000 ರೂಪಾಯಿ ಶುಲ್ಕದ ವಾರ್ಷಿಕ ಸಬ್‌ಸ್ಕ್ರಿಪ್ಶನ್‌ನ ಉಚಿತವಾಗಿ ನೀಡುತ್ತಿದೆ. ಇದಕ್ಕಾಗಿ ಏರ್‌ಟೆಲ್ ಇದೀಗ ಪೆರ್ಪ್ಲೆಕ್ಸಿಟಿ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಏರ್‌ಟೆಲ್ ತನ್ನ ಎಲ್ಲಾ ಗ್ರಾಹಕರಿಗೆ 12 ತಿಂಗಳ ವರೆಗೆ ಪೆರ್ಪ್ಲೆಕ್ಸಿಟಿ ಪ್ರೊ ಚಂದಾದಾರಿಕೆ ಉಚಿತವಾಗಿ ನೀಡುತ್ತಿದೆ. ಪೆರ್ಪ್ಲೆಕ್ಸಿಟಿ ಒಂದು ಎಐ-ಚಾಲಿತ ಹುಡುಕಾಟ ಮತ್ತು ಉತ್ತರ ನೀಡುವ ಇಂಜಿನ್ ಆಗಿದ್ದು, ಇದು ವಾಸ್ತವ ಸಮಯದ, ನಿಖರ ಮತ್ತು ಆಳವಾಗಿ ಅಧ್ಯಯನ ಮಾಡಿದ ಉತ್ತರಗಳನ್ನು ಬಳಕೆದಾರರಿಗೆ ಸಾಮಾನ್ಯ, ಸರಳ ಅರ್ಥವಾಗುವ ಭಾಷೆಯಲ್ಲಿ ನೀಡುತ್ತದೆ. ಪುಟಗಳ ಪಟ್ಟಿಯಿಂದ ಹಿಡಿದು ಸರಳ ಓದಬಲ್ಲ ಉತ್ತರದವರೆಗೆ, ಇದು ಗ್ರಾಹಕರ ಹುಡುಕಾಟ ನಡೆಸುವ ಅನುಭವವನ್ನು ಹೆಚ್ಚಿಸುತ್ತದೆ.
ಪೆರ್ಪ್ಲೆಕ್ಸಿಟಿ ಬೇಸ್ ಸಬ್‌ಸ್ಕ್ರಿಪ್ಶನ್ ಉಚಿತವಾಗಿ ಬಳಸಬಹುದು, ಇದರಲ್ಲಿ ಉತ್ತಮ ಹುಡುಕಾಟ ಕಾರ್ಯಗಳನ್ನು ಒದಗಿಸಲಾಗಿದೆ, ಅದೇ ಪ್ರೊ ಆವೃತ್ತಿಯಲ್ಲಿ ವೃತ್ತಿಪರರು ಮತ್ತು ಅಧಿಕ ಬಳಕೆದಾರರಿಗೆ ವೃದ್ಧಿಸಿದ ಸಾಮರ್ಥ್ಯಗಳನ್ನು ನೀಡಲಾಗಿದೆ. ಪೆರ್ಪ್ಲೆಕ್ಸಿಟಿ ಪ್ರೊ ಪ್ರತಿ ಬಳಕೆದಾರನಿಗೆ ಹೆಚ್ಚಿನ ದಿನನಿತ್ಯದ ಪ್ರೊ ಹುಡುಕಾಟಗಳು, ಸುಧಾರಿತ ಎಐ ಮಾಡೆಲ್ ಗಳಿಗೆ ಪ್ರವೇಶ(ಉದಾ: ಜಿಪಿಟಿ 4.1, ಕ್ಲೌಡ್) ಮತ್ತು ನಿರ್ದಿಷ್ಟ ಮಾಡೆಲ್ಸ್ ಆಯ್ಕೆ ಮಾಡುವ ಸಾಮರ್ಥ್ಯ, ಆಳ ಸಂಶೋಧನೆ, ಚಿತ್ರ ಉತ್ಪಾದನೆ, ಫೈಲ್ ಅಪ್ಲೋಡ್ ಮತ್ತು ವಿಶ್ಲೇಷಣೆ ಜೊತೆಗೆ ಆಲೋಚನೆಗಳಿಗೆ ಜೀವ ತುಂಬುವ ಪೆರ್ಪ್ಲೆಕ್ಸಿಟಿ ಲ್ಯಾಬ್ಸ್ ಸೌಲಭ್ಯಗಳನ್ನು ಒಳಗೊಂಡಿದೆ). ಪೆರ್ಪ್ಲೆಕ್ಸಿಟಿ ಪ್ರೊ ಒಂದು ವರ್ಷಕ್ಕೆ *INR 17000 ಜಾಗತಿಕ ಶುಲ್ಕ ಹೊಂದಿದೆ.
17000 ರೂಪಾಯಿ ಮೌಲ್ಯದ ಈ ಪ್ರೊ ಚಂದಾದಾರಿಕೆಯು ಈಗ ಎಲ್ಲಾ ಏರ್‌ಟೆಲ್ ಗ್ರಾಹಕರಿಗೆ(ಮೊಬೈಲ್, ವೈಫೈ ಮತ್ತು ಡಿಟಿಎಚ್) ಒಂದು ವರ್ಷದವರೆಗೆ ಉಚಿತವಾಗಿ ಲಭ್ಯವಿರಲಿದೆ. ಇದು ಭಾರತೀಯ ಟೆಲಿಕಾಂ ಸಂಸ್ಥೆಯೊಂದಿಗೆ ಪೆರ್ಪ್ಲೆಕ್ಸಿಟಿಯ ಮೊದಲ ಪಾಲುದಾರಿಕೆಯಾಗಿದೆ. ಏರ್‌ಟೆಲ್ ಥ್ಯಾಂಕ್ಸ್ ಆಪ್ ಗೆ ಲಾಗ್ ಇನ್ ಮಾಡಿಕೊಳ್ಳುವ ಮೂಲಕ ಎಲ್ಲಾ ಏರ್‌ಟೆಲ್ ಬಳಕೆದಾರರು ಈ ಕೊಡುಗೆಯನ್ನು ಪಡೆಯಬಹುದಾಗಿದೆ.
ಪೆರ್ಪ್ಲೆಕ್ಸಿಟಿ ಪ್ರೊ ವೆಬ್ ಮೇಲೆ ವಿಶ್ವಾಸಾರ್ಹ ಸಂಶೋಧನೆಯ ಪ್ರಕ್ರಿಯೆಗಳನ್ನು, ಕಲಿಕೆ ಮತ್ತು ಸಹಭಾಗಿತ್ವವನ್ನು ನೀಡಬಹುದು ಮತ್ತು ವಿಷಯವನ್ನು ತಾರ್ಕಿಕವಾಗಿ ಆಯೋಜಿಸಲು ಮತ್ತು ಸರಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಈ ಮೂಲಕ ವಿದ್ಯಾರ್ಥಿಗೆ ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಲು ಅವಕಾಶ ನೀಡುತ್ತದೆ. ಕನ್ಯಾಕುಮಾರಿ ಪಟ್ಟಣದಲ್ಲಿ ವಾಸ ಮಾಡುತ್ತಿರುವ ಒಬ್ಬ ಗೃಹಿಣಿ ಉದಾಹರಣೆ ನೋಡೋಣ. ಪೆರ್ಪ್ಲೆಕ್ಸಿಟಿ ಅವರಿಗೆ ಪ್ರತಿದಿನದ ಚಟುವಟಿಕೆಗಳಿಗೆ ತಕ್ಷಣದ ಮತ್ತು ಸರಿಯಾದ ಉತ್ತರಗಳನ್ನು ನೀಡಲು ಸಹಾಯಕನಂತೆ ಕೆಲಸ ಮಾಡುತ್ತದೆ ಮತ್ತು ಸೃಜನಶೀಲತೆ ಪ್ರೋತ್ಸಾಹಿಸಲು ಮತ್ತು ಮಾಹಿತಿಯುಳ್ಳ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ.
ಇದೆಲ್ಲವೂ ಬಳಕೆದಾರ-ಸ್ನೇಹಿ ಇಂಟರ್ಫೇಸ್ ನಿಂದ ಸಾಧ್ಯವಾಗಿದೆ. ಒಬ್ಬ ಬ್ಯುಸಿ ಉದ್ಯೋಗಿಯ ವಿಷಯದಲ್ಲಿ, ಒಂದು ಹೊಸ ಸ್ಥಳಕ್ಕೆ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಲು ಇದು ಸಹಾಯ ಮಾಡುತ್ತದೆ, ಪೆರ್ಪ್ಲೆಕ್ಸಿಟಿ ಪ್ರೊ ಸಮಯ ಆಧರಿಸಿ ಪ್ರವಾಸದ ವಿವರಗಳನ್ನು, ನಿರ್ದಿಷ್ಟ ಬಜೆಟ್ ಗಳನ್ನು ಮತ್ತು ಮಾಡಲೇ ಬೇಕಾದ ಅಥವಾ ನೋಡಲೇ ಬೇಕಾದ ಅಗತ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ, ಅದೂ ಕೆಲವೇ ಸೆಕೆಂಡುಗಳಲ್ಲಿ. ಬಳಕೆದಾರರ ಉತ್ಪಾದಕತೆಯಲ್ಲಿ ಹೆಚ್ಚಳ, ಒತ್ತಡದ ನಿವಾರಣೆ, ಇವೆಲ್ಲವೂ ಈ ಸಾಧನದ ಬಳಕೆಯಿಂದ ಸಿಗಬಹುದಾದ ಪ್ರಯೋಜನಗಳಾಗಿವೆ.