ಪೋಸ್ಟ್ ಆಫಿಸ್‌ನಲ್ಲಿ ಭರ್ಜರಿ ಸ್ಕೀಮ್: 5 ವರ್ಷದಲ್ಲಿ 35 ಲಕ್ಷ ಸಂಪಾದಿಸುವ ಬೊಂಬಾಟ್ ಯೋಜನೆ
ಅಂಚೆ ಕಚೇರಿ RD ಯೋಜನೆಯು 5 ವರ್ಷಗಳಲ್ಲಿ ನಿಮ್ಮ ಹಣವನ್ನು ಸುರಕ್ಷಿತವಾಗಿ ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಕಡಿಮೆ ಹೂಡಿಕೆಯಿಂದ ದೊಡ್ಡ ಲಾಭ ಪಡೆಯಲು ಇದು ಒಂದು ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ವಿಧಾನ ಮತ್ತು ಲಾಭದ ಬಗ್ಗೆ ಇನ್ನಷ್ಟು ತಿಳಿಯಿರಿ.

ನೀವು ನಿಮ್ಮ ಉಳಿತಾಯವನ್ನು ಸುರಕ್ಷಿತ ಮಾರ್ಗದಲ್ಲಿ ಹೂಡಿಕೆ ಮಾಡಲು ಯೋಚನೆ ಮಾಡುತ್ತಿದ್ದೀರಾ? ಅಂಚೆ ಕಚೇರಿಯ RD ಸ್ಕೀಮ್ ನಿಮಗೆ ಹಣ ಹೂಡಿಕೆ ಮಾಡಲು ಒಳ್ಳೆಯ ಯೋಜನೆಯಾಗಲಿದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ಹಂತ ಹಂತವಾಗಿ ಹಣ ಹೂಡಿಕೆ ಮಾಡಿ, ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶವನ್ನು ಅಂಚೆ ಕಚೇರಿ ಸಾರ್ವಜನಿಕರಿಗೆ ನೀಡುತ್ತಿದೆ. ಅಂಚೆ ಕಚೇರಿಯಲ್ಲಿನ ಯೋಜನೆಗಳು ಮಾರುಕಟ್ಟೆ ಅಪಾಯಗಳಿಂದ ದೂರವಿರುತ್ತವೆ.
ಐದು ವರ್ಷಗಳ ಈ ಯೋಜನೆಯಲ್ಲಿ ನೀವು ಹಣ ಹೂಡಿಕೆ ಮಾಡುವ ಆರ್ಥಿಕ ಭದ್ರತೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಐದು ವರ್ಷ ಕಡಿಮೆ ಸಮಯವಾಗಿದದ್ದು, ಒಂದೊಳ್ಳೆಯ ಮೊತ್ತ ನಿಮ್ಮ ಕೈಗೆ ಸೇರುತ್ತದೆ.ಸಣ್ಣ ಹೂಡಿಕೆಗಳಿಂದ ದೊಡ್ಡ ಬಂಡವಾಳವನ್ನು ಸೃಷ್ಟಿಸಲು ಇದು ವಿಶ್ವಾಸಾರ್ಹ ಮತ್ತು ಖಾತರಿಯ ಆದಾಯದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡೋದು ಹೇಗೆ? ಐದು ವರ್ಷದಲ್ಲಿ ನಿಮಗೆ ಸಿಗುವ ರಿಟರ್ನ್ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
ಅಂಚೆ ಕಚೇರಿಯ RD ಸ್ಕೀಮ್ ಅವಧಿ 5 ವರ್ಷಗಳಾಗಿದೆ. ಈ ಅವಧಿಯಲ್ಲಿ ಹೂಡಿಕೆದಾರರು ಸ್ಥಿರ ಬಡ್ಡಿದರದಲ್ಲಿ ಹೂಡಿಕೆಯ ಮೊತ್ತಕ್ಕೆ ಲಾಭ ಪಡೆದುಕೊಳ್ಳುತ್ತಾರೆ. ಮಾರುಕಟ್ಟೆ ಅಪಾಯರಹಿತ ಮಾರ್ಗದಲ್ಲಿ ಉಳಿತಾಯದ ಹಣ ಹೂಡಿಕೆ ಮಾಡಲು ಬಯಸಿದರೆ ಈ ಯೋಜನೆಯು ಉತ್ತಮ ಆಯ್ಕೆಯಾಗಲಿದೆ. ನಿಮ್ಮ ಸಮೀಪದ ಅಂಚೆ ಕಚೇರಿಗೆ ತೆರಳುವ ಮೂಲಕ ಈ ಯೋಜನೆಯಲ್ಲಿ ಹಣ ಹೂಡಿಕೆ ಆರಂಭಿಸಬಹುದು. ನಿಯಮಿತ ಉಳಿತಾಯದ ಅಭ್ಯಾಸ ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ಸದೃಢವಾಗಿಸುತ್ತದೆ. ಈ ಯೋಜನೆಯಲ್ಲಿ 5 ವರ್ಷದ ನಂತರ ಬಡ್ಡಿಯೊಂದಿಗೆ ಪಡೆಯುವ ಮೊತ್ತ ಎಷ್ಟು?
ತಿಂಗಳಿಗೆ 100 ರೂ. ಉಳಿತಾಯ ಮಾಡುವ ಮೂಲಕ ಅಂಚೆ ಕಚೇರಿಯ RD ಯೋಜನೆ ಆರಂಭಿಸಬಹುದು. ನಿಮ್ಮ ಆರ್ಥಿಕ ಶಕ್ತಿಯನುಸಾರವಾಗಿ ಹಣ ಹೂಡಿಕೆ ಮಾಡಬಹುದಾಗಿದೆ. ಇಷ್ಟೇ ದೊಡ್ಡ ಮೊತ್ತ ಹೂಡಿಕೆಯಿಂದ ಈ ಯೋಜನೆ ಆರಂಭಿಸಬೇಕೆಂಬ ಯಾವುದೇ ನಿಯಮಗಳಿಲ್ಲ. ಮಾಸಿಕ ಸಂಬಳ ಪಡೆಯುವ ಜನರು, ಗೃಹಿಣಿಯರು ಅಥವಾ ಸಣ್ಣ ವ್ಯಾಪಾರಿಗಳು ಹಣ ಉಳಿಸಲು ಈ ಯೋಜನೆ ಒಳ್ಳೆಯ ಆಯ್ಕೆಯಾಗಲಿದೆ. ಮಧ್ಯಮ ವರ್ಗಕ್ಕೆ ಸೂಕ್ತವಾದ ಯೋಜನೆ ಇದಾಗಿದೆ ಎಂದು ಹೇಳಬಹುದಾಗಿದೆ.
10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದಾಗಿದೆ. ಅಪ್ರಾಪ್ತರು ಪೋಷಕರು ಸಹಾಯದಿಂದ ಖಾತೆಯನ್ನು ತೆರೆಯಬಹುದು. 18 ವರ್ಷದ ಬಳಿಕ ಕೆವೈಸಿ ಅಪ್‌ಡೇಟ್ ಮಾಡಿಸುವ ಮೂಲಕ ಖಾತೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬಹುದು. RD ಖಾತೆಯು ಆರಂಭಿಸುವ ಪ್ರಕ್ರಿಯೆ ಸರಳೀಕರಣ ಮಾಡಲಾಗಿದೆ. ಕಡಿಮೆ ಮತ್ತು ಕೇವಲ ಅಗತ್ಯ ದಾಖಲೆಗಳಿಂದ RD ಖಾತೆ ತೆರೆಯಬಹುದಾಗಿದೆ. ಮೊಬೈಲ್ ಬ್ಯಾಂಕಿಂಗ್ ಅಥವಾ ಇ-ಬ್ಯಾಂಕಿಂಗ್ ಮೂಲಕ ಖಾತೆ ಓಪನ್ ಮಾಡುವ ಆಯ್ಕೆಯನ್ನು ನೀಡಲಾಗಿದೆ.
RD ಖಾತೆ ತೆರೆದ ದಿನವೇ ಗ್ರಾಹಕರು ಮೊದಲ ಕಂತಿನ ಹಣವನ್ನು ಪಾವತಿಸಬೇಕಾಗುತ್ತದೆ. ತಿಂಗಳ 16 ನೇ ತಾರೀಖಿನ ಮೊದಲು ಖಾತೆಯನ್ನು ತೆರೆದಿದ್ದರೆ ಮುಂದಿನ ಕಂತುಗಳನ್ನು ಪ್ರತಿ ತಿಂಗಳ 15 ನೇ ತಾರೀಖಿನೊಳಗೆ ಠೇವಣಿ ಇಡಬೇಕಾಗುತ್ತದೆ. 16 ನೇ ತಾರೀಖಿನ ನಂತರ ಖಾತೆ ತೆರೆದರೆ, ಪ್ರತಿ ತಿಂಗಳ 16 ನೇ ತಾರೀಖಿನಿಂದ ತಿಂಗಳ ಕೊನೆಯ ಕೆಲಸದ ದಿನದವರೆಗೆ ಹಣವನ್ನು ಠೇವಣಿ ಮಾಡಲು ನಿಮಗೆ ಸಮಯ ಸಿಗುತ್ತದೆ. ಗ್ರಾಹಕರು ಠೇವಣಿ ಮೊತ್ತದ ಶೇ.50ರಷ್ಟು ಸಾಲವನ್ನು ಸಹ ಹೂಡಿಕೆದಾರರು ಪಡೆದುಕೊಳ್ಳಬಹುದಾಗಿದೆ.