1ಕಿ.ಮೀಗೆ 25 ಪೈಸೆ ಖರ್ಚು, ಅತೀ ಕಡಿಮೆ ನಿರ್ವಹಣೆಯ ಈ ಸ್ಪೋರ್ಟ್ಸ್ ಬೈಕ್ ಖರೀದಿಗೆ ಸಿಗಲಿದೆ ಸಬ್ಸಿಡಿ!
ಸ್ಪೋರ್ಟ್ಸ್ ಬೈಕ್ ಮೈಲೇಜ್ ಕಡಿಮೆ, ನಿರ್ವಹಣೆ ಹೆಚ್ಚು, ಬೆಲೆಯೂ ದುಬಾರಿ. ಆದರೆ ಇದೀಗ ಅತೀ ಕಡಿಮೆ ನಿರ್ವಹಣೆ ಅಂದರೆ 1 ಕಿ.ಮೀಗೆ 25ಪೈಸೆಯೂ ಖರ್ಚಾಗಲ್ಲ. ಇನ್ನು ಬೈಕ್ ಕೈಗೆಟುಕುವ ದರದಲ್ಲಿ ಲಭ್ಯವಿದೆ. ಜೊತೆಗೆ ಈ ಬೈಕ್ ಖರೀದಿಸುವ ಗ್ರಾಹಕನಿಗೆ ಸರ್ಕಾರದಿಂದ ಸಬ್ಸಿಡಿ ಕೂಡ ಲಭ್ಯವಿದೆ.
ಸ್ಪೋರ್ಟ್ಸ್ ಬೈಕ್ ಎಲ್ಲರನ್ನು ಆಕರ್ಷಿಸುತ್ತದೆ. ಸ್ಪೋರ್ಟ್ಸ್ ಬೈಕ್ ಪರ್ಫಾಮೆನ್ಸ್, ವಿನ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಸ್ಪೋರ್ಟ್ಸ್ ಬೈಕ್ ಬೆಲೆಯೂ ದುಬಾರಿಯಾಗಿದೆ. ಆದರೆ ಇದೀಗ ಹೊಚ್ಚ ಹೊಸ ಸ್ಪೋರ್ಟ್ಸ್ ಬೈಕ್ ಅತೀ ಕಡಿಮೆ ಬೆಲೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚದ ಬೈಕ್ ಲಭ್ಯವಾಗಿದೆ.
ಭಾರತದಲ್ಲಿ ಒಕಾಯ ಸ್ಟಾರ್ಟ್‌ಅಪ್ ಕಂಪನಿ ಇದೀಗ ಹೊಸ ಸ್ಪೋರ್ಟ್ಸ್ ಬೈಕ್ ಬಿಡುಗಡೆ ಮಾಡಿದೆ ಒಕಾಯ ಫೆರಾಟೋ ಡಿಸ್‌ರಪ್ಟರ್ ಸ್ಪೋರ್ಟ್ಸ್ ಬೈಕ್ ಮಾರುಕಟ್ಟೆಗೆ ಪರಿಚಯಿಸಿದೆ.
ಇದು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್. ಅತ್ಯಂತ ಆಕರ್ಷಕ ವಿನ್ಯಾಸ ಜೊತೆಗೆ ಅಷ್ಟೇ ಅತ್ಯುತ್ತಮ ಫರ್ಪಾಮೆನ್ಸ್ ಹೊಂದಿದೆ. ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ ಈ ಬೈಕ್ 129 ಕಿ. ಮೀ ಮೈಲೇಜ್ ನೀಡಲಿದೆ.
ಫುಲ್ ಚಾರ್ಜ್ ಮಾಡಲು ಕೇವಲ 32 ರೂಪಾಯಿ ಸಾಕು. ಅಂದರೆ ಪ್ರತಿ ಕಿಲೋಮೀಟರ್‌ಗೆ ಕೇವಲ 25 ಪೈಸೆಯಂತೆ ಖರ್ಚಾಗಲಿದೆ. ಹೀಗಾಗಿ ಒಕಾಯ ಸ್ಪೋರ್ಟ್ಸ್ ಬೈಕ್ ನಿರ್ವಹಣೆ ಅತೀ ಕಡಿಮೆ.
ಇದು ಎಲೆಕ್ಟ್ರಿಕ್ ಬೈಕ್ ಹೀಗಾಗಿ, ಕೇಂದ್ರ ಸರ್ಕಾರದ ಫೇಮ್ 2 ಸಬ್ಸಿಡಿ ಯೋಜನೆ ಅನ್ವಯವಾಗಲಿದೆ. ಹೀಗಾಗಿ ಈ ಬೈಕ್ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸಬ್ಸಿಡಿ ಸಿಗಲಿದೆ.
ಕರ್ನಾಟಕ ಸರ್ಕಾರದ ಸಬ್ಸಿಡಿ ಯೋಜನೆಗಳು ಪೂರ್ಣಗೊಂಡಿದೆ. ಆದರೆ ಇತರ ಕೆಲ ರಾಜ್ಯಗಳಲ್ಲಿ ಸಬ್ಸಿಡಿ ಯೋಜನೆಗಳು ಲಭ್ಯವಿದೆ. ಹೀಗಾಗಿ ಈ ಬೈಕ್ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.
3 ವರ್ಷ ವಾರೆಂಟಿ ಅಥವಾ 30,000 ಕಿ.ಮೀ ಬ್ಯಾಟರಿ ವಾರೆಂಟಿಯನ್ನು ಕಂಪನಿ ನೀಡುತ್ತಿದೆ. ಇನ್ನು ಒಕಾಯಾ ಫೆರಾಟೋ ಡಿಸ್‌ರಪ್ಟರ್ ಗರಿಷ್ಠ ವೇಗ 95 ಕಿ.ಮೀ ಪ್ರತಿ ಗಂಟೆಗೆ.
ಒಕಾಯಾ ಫೆರಾಟೋ ಡಿಸ್‌ರಪ್ಟರ್ ಬೈಕ್ ಬೆಲೆ 1.60 ಲಕ್ಷ ರೂಪಾಯಿ. ಸ್ಫೋರ್ಟ್ಸ್ ಬೈಕ್‌ಗೆ ಹೋಲಿಕೆ ಮಾಡಿದರೆ ಅತೀ ಕಡಿಮೆ ಬೆಲೆಯಲ್ಲಿ ಒಕಾಯ ಸ್ಪೋರ್ಟ್ಸ್ ಬೈಕ್ ಲಭ್ಯವಿದೆ.