ಹಂಟರ್ 350 , ಇದು ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಅತೀ ಕಡಿಮೆ ಬೆಲೆ ಬೈಕ್
ಯೂತ್ ಫೇವರಿಟ್ ಬೈಕ್ ಆಗಿರುವ ರಾಯಲ್ ಎನ್‌ಫೀಲ್ಡ್ ಕಂಪನಿ ತನ್ನ ಬೈಕ್ಸ್‌ಗಳಲ್ಲಿ ಕಡಿಮೆ ಬೆಲೆಗೆ ಹಂಟರ್ 350 ಮಾಡೆಲ್ ನೀಡುತ್ತಿದೆ. ಸಾಮಾನ್ಯವಾಗಿ ರಾಯಲ್ ಎನ್‌ಫೀಲ್ಡ್ ಬೈಕ್ಸ್‌ಗಳ ಆರಂಭಿಕ ಬೆಲೆ ರೂ.1.70 ಲಕ್ಷದಿಂದ ಇರುತ್ತದೆ. ಆದರೆ ಹಂಟರ್ 350 ಮಾಡೆಲ್ ಅನ್ನು ಕಡಿಮೆ ಬೆಲೆಗೆ ಕಂಪನಿ ನೀಡುತ್ತಿದೆ. ಅದರ ಬೆಲೆ, ಬೈಕ್ ಫೀಚರ್ಸ್ ತಿಳಿದುಕೊಳ್ಳೋಣ ಬನ್ನಿ.

ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಎಲ್ಲಾ ವಯೋಮಾನದವರಿಗೆ ಮೋಹ ಇದ್ದೇ ಇದೆ. ಬೈಕ್ ಖರೀದಿಸಿದರೆ ರಾಯಲ್ ಎನ್‌ಫೀಲ್ಡ್ ಇರಬೇಕು ಎಂದುಕೊಳ್ಳುತ್ತಾರೆ. ಇಷ್ಟೇ ಅಲ್ಲ ಪ್ರತಿ ದಿನ ಬಳಕೆಗೆ ಅಥವಾ ಲಾಂಗ್ ರೈಡ್‌ಗೆ ಎನ್‌ಫೀಲ್ಡ್ ಹೇಳಿ ಮಾಡಿಸಿದ ಬ್ರ್ಯಾಂಡ್. ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಿದ ಬೇಡಿಕೆ ಬೈಕ್ ಎಂದರೆ ಹಂಟರ್ 350. ವಿಶೇಷ ಅಂದರೆ ಈ ಬೈಕ್ ಬೆಲೆ ಅತೀ ಕಡಿಮೆ. ಸ್ಟೈಲೀಶ್ ಲುಕ್, ಉತ್ತಮ ಪರ್ಪಾಮೆನ್ಸ್ ಸೇರಿದಂತೆ ಹಲವು ವಿಶೇಷತೆ ಈ ಬೈಕ್‌ನಲ್ಲಿದೆ.
ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೆಲೆ
ರಾಯಲ್ ಎನ್‌ಫೀಲ್ಡ್ ಹಂಟರ್ 350 ಕೊಳ್ಳಬೇಕು ಅಂದ್ರೆ ಇದೇ ಒಳ್ಳೆ ಟೈಮ್. ಯಾಕಂದ್ರೆ ಇದು ಕೊಳ್ಳುವವರಿಗೆ ಈಗ ಕಂಪನಿ ಒಳ್ಳೆ ಆಪ್ಷನ್ಸ್ ಕೊಡ್ತಿದೆ. ಅಂದ್ರೆ ಬೇಸಿಕ್ ಮಾಡೆಲ್ ಹಂಟರ್ 350 ರೆಟ್ರೋ ಫ್ಯಾಕ್ಟರಿ ಬೆಲೆ ಕೇವಲ ರೂ.1,49,900 ಮಾತ್ರ. ಅದೇ ಮೆಟ್ರೋ ಡ್ಯಾಂಪರ್ ವೇರಿಯೆಂಟ್ ಆದ್ರೆ ರೂ.1,69,434.
ರಾಯಲ್ ಎನ್‌ಫೀಲ್ಡ್ ಹಂಟರ್ 350 ಫೀಚರ್ಸ್
ಈ ಬೈಕ್ 20.2 bhp ಪವರ್, 27 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂದೆ, ಹಿಂದೆ ಡಿಸ್ಕ್ ಬ್ರೇಕ್ಸ್ ಕೂಡ ಇವೆ. ಆದ್ದರಿಂದ ಅಪಘಾತಗಳಿಗೆ ಆಸ್ಪದ ಮ್ಯಾಕ್ಸಿಮಮ್ ಇರೋದಿಲ್ಲ. ಅಷ್ಟೇ ಅಲ್ಲದೆ ಇದರಲ್ಲಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಕೂಡ ಇದೆ. ಇನ್ನು ಫ್ಯೂಯಲ್ ಟ್ಯಾಂಕ್ ಕೆಪಾಸಿಟಿ ಗೊತ್ತಾದ್ರೆ ಆಶ್ಚರ್ಯಪಡ್ತೀರ. ಇದು ಬರೋಬ್ಬರಿ 13 ಲೀಟರ್ ಕೆಪಾಸಿಟಿಯನ್ನು ಹೊಂದಿದೆ.
ಹಂಟರ್ 350 ಮೆಟ್ರೋ ವೇರಿಯಂಟ್ ಫೀಚರ್ಸ್
ಮೆಟ್ರೋ ವೇರಿಯಂಟ್‌ನಲ್ಲಿ ಅಲಾಯ್ ವೀಲ್ಸ್ ಕೊಟ್ಟಿದ್ದಾರೆ. ಇದರಲ್ಲಿ ಕೂಡ ಎರಡು ಟೈರ್‌ಗಳಿಗೆ ಡಿಸ್ಕ್ ಬ್ರೇಕ್ಸ್ ಇವೆ. ಡ್ಯೂಯಲ್ ಚಾನೆಲ್ ABS ಇರುತ್ತದೆ. ಹಂಟರ್ 350 ರಾಯಲ್ ಎನ್‌ಫೀಲ್ಡ್ J-ಪ್ಲಾಟ್‌ಫಾರ್ಮ್ ಮೇಲೆ ತಯಾರು ಮಾಡಿದ್ದಾರೆ. ಆದ್ದರಿಂದ ರೈಡಿಂಗ್ ಎಕ್ಸ್‌ಪೀರಿಯೆನ್ಸ್ ತುಂಬಾ ಚೆನ್ನಾಗಿರುತ್ತದೆ.