ಡಕಾರ್ ರ‍್ಯಾಲಿಗೆ ಸಿಎಸ್ ಸಂತೋಶ್ ಒಳಗೊಂಡ ಹೀರೋ ಮೋಟಾರ್‌ಸ್ಪೋರ್ಟ್ಸ್ ತಂಡ ಪ್ರಕಟ!
ಪ್ರತಿಷ್ಠಿತ ಡಕಾರ್ ರ‍್ಯಾಲಿಗೆ ಕ್ಷಣಗನೇ ಆರಂಭಗೊಂಡಿದೆ. ಈಗಾಗಲೇ ಭರ್ಜರಿ ತಯಾರಿ ಕೂಡ ಆರಂಭಗೊಂಡಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಬಾರಿಯ ಡಕಾರ್ ರ‍್ಯಾಲಿಗೆ ಹೀರೋ ಮೋಟಾರ್ ತಂಡ ಪ್ರಕಟಿಸಿದೆ.
ಬಾಜಾ ಪೊಟ್ರಲೆಗ್ರೆಯಲ್ಲಿ ರೋಮಾಂಚಕ ವಿಜಯದ ನಂತರ, ವಿಶ್ವದ ಅತಿದೊಡ್ಡ ದ್ವಿಚಕ್ರವಾಹನಗಳ ತಯಾರಕ ಹೀರೊ ಮೊಟೊಕಾರ್ಪ್ ನ ವಾಹನಕ್ರೀಡಾ ತಂಡವಾದ ಹೀರೊ ಮೊಟೊಸ್ಪೋರ್ಟ್ಸ್ ಟೀಂ ರಾಲಿ ಇಂದು ಡಕಾರ್ 2021 ಗೆ ತನ್ನ ತಂಡ ಪ್ರಕಟಿಸಿದೆ.
ಪೂರ್ಣ ಪ್ರಮಾಣದಲ್ಲಿ ಮೂರು ಚಾಲಕರ ತಂಡದೊಂದಿಗೆ ಪಾಲ್ಗೊಳ್ಳುತ್ತಿರುವ ಹೀರೊ ಮೊಟೊಸ್ಪೋರ್ಟ್ಸ್ ಡಾಕಾರ್ 2021 ಅನ್ನು 2020 ಕ್ರಾಸ್ ಕಂಟ್ರಿ ಬಾಜಾ ವಿಶ್ವ ಕಪ್ ವಿಜೇತರಾದ ಸೆಬಾಸ್ಟಿಯನ್ ಬಹ್ಲರ್, 2019 ಪ್ಯಾನ್ ಆಫ್ರಿಕಾ ರಾಲಿ ವಿಜಯಿ ಯೋಹೆಂ ರಾಡ್ರೀಗ್ಸ್ ಮತ್ತು ಶ್ರೇಷ್ಟ ಭಾರತೀಯ ಚಾಲಕ ಸಿ ಎಸ್ ಸಂತೋಶ್ ಅವರೊಂದಿಗೆ ಭಾಗವಹಿಸಲಿದೆ.
ಸೆಬಾಸ್ಟಿಯನ್ ಗೆ ಡಕಾರ್ ನಲ್ಲಿ ಇದು ಹೀರೊ ಬಣ್ಣದಲ್ಲಿ ಎರಡನೇ ಅಧಿಕೃತ ಸಹಭಾಗವಾಗಿದ್ದು, ಜೆರಾಡ್ ಮತ್ತು ಸಂತೋಷ ಇವರಿಗೆ ಇದು ಐದನೇ ಸಹಭಾಗವಾಗಿದೆ.
ಈ ಚಾಲಕರು ಡಕಾರ್ ಸವಾಲನ್ನು ಹೊಸ ಹೀರೊ 450 ರಾಲಿ ಬೈಕ್ ನಲ್ಲಿ ಪಾಲ್ಗೊಳ್ಳಲಿದ್ದು, ಇದು ಈಗ ಹೊಸ 450 ಸಿಸಿ ಇಂಜಿನ್ ಮತ್ತು ಆಧುನಿಕ ಚಾಸಿ ಹೊಂದಿದೆ. ರಾಲಿ ಕ್ರೀಡೆಗೆ ವಿಶೇಷವಾಗಿ ತಯಾರಿಸಲಾದ ಈ ಇಂಜಿನ್ ಸುಧಾರಿತ ವೇಗ ಮತ್ತು ವೇಗವರ್ಧನ ನೀಡುತ್ತದೆ. ಹೊಂದಿಸಲಾದ ತೂಕದ ಸಮತೋಲನ, ಉತ್ತಮ ಚಾಲನೆಯ ಅನುಕೂಲಗಳು, ದೊಡ್ಡ ಇಂಧನ ಟ್ಯಾಂಕ್, ಸುಧಾರಿತ ಸಸ್ಪೆನ್ಶನ್ ಮತ್ತು ಕೂಲಿಂಗ್ ವ್ಯವಸ್ಥೆಗಳೊಂದಿಗೆ ಈ ಬೈಕ್ ಉನ್ನತ ವೇಗದಲ್ಲಿ ದೀರ್ಘ ಅಂತರಗಳನ್ನು ಪ್ರಯಾಣಿಸುವ ಎರಡೂ ಪಾತ್ರಗಳಿಗೆ ರೂಪಿಸಲಾಗಿದೆ
ಈ ತಂಡವು ಈಗ ಹೊಸ ಲಿವರಿಯಲ್ಲಿ ಕಾಣಿಸಿಕೊಳ್ಳಲಿದೆ, ಇದು ಭವಿಷ್ಯದ ಬಾರ್ಕೋಡ್ ಆಧಾರಿತ ವಿನ್ಯಾಸವನ್ನು ಹೊಂದಿದು, ನಮ್ಮ ರಾಲಿ ತಂಡದ ತಾಂತ್ರಿಕ ಪರಿಣತಿಯನ್ನು ಪ್ರದರ್ಶಿಸುತ್ತದೆ.
ಈಗ ಇರುವ ಪಿಡುಗಿನ ಕಾರಣದಿಂದ 2020 ರಲ್ಲಿ ತಂಡಕ್ಕೆ ಇದು ಬಹಳ ಚಿಕ್ಕದಾದ #RoadToDakar ಆಗಿತ್ತು. ಆದರೂ, ಬಾಜಾ ಪೆಟ್ರೋಲಾಗ್ರೆ ಮತ್ತು ಆ್ಯಂಡಾಲುಶಿಯಾ ರಾಲಿಗಳೊಂದಿಗೆ ತಂಡವು ಸ್ಪರ್ಧಾತ್ಮಕ ಕ್ರೀಡೆಗೆ ಅದ್ಭುತವಾದ ಮರುಪ್ರವೇಶ ಮಾಡಿದೆ. ಅಮೂಲ್ಯವಾದ ರೇಸ್ ಅನುಭವವನ್ನು ಪಡೆದ ಈ ಮೂರು ಚಾಲಕರು ಸ್ವಲ್ಪ ಸಾಡಲ್ ಟೈಂ ಮತ್ತು ದಕ್ಷತೆಯನ್ನು ಪಡೆಯಲು ಈ ರೇಸ್‍ಗಳ ನೆರವು ಪಡೆದರು.
ಕಡಿಮೆ ರೇಸ್‍ಗಳು ಮತ್ತು ತರಬೇತಿಗೆ ಕಡಿಮೆ ಅವಕಾಶಗಳಿಂದ ಈ ವರ್ಷವು ಭಿನ್ನವಾಗಿದೆ, ಆದರೂ ಡಕಾರ್ ರಾಲಿಗೆ ನಾವು ಮಾಡಿರುವ ಸಿದ್ಧತೆಗಳು ನನಗೆ ತೃಪ್ತಿ ತಂದಿದೆ. ಈ ಸಂದರ್ಭವನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಹೊಸ ಬೈಕ್‍ನ ಅಭಿವೃದ್ಧಿಯಲ್ಲಿ ತಂಡಕ್ಕೆ ನೆರವಾಗಲು ನಾನು ಯತ್ನಿಸಿದ್ದೇನೆ. ಎಂದು ಹೀರೊ ಮೊಟೊಸ್ಪೋರ್ಟ್ಸ್ ಟೀಂ ರಾಲಿ ರೈಡರ್ ಸಿ ಎಸ್ ಸಂತೋಶ ಹೇಳಿದ್ದಾರೆ.
ಸೆಬಾಸ್ಟಿಯನ್ ಬಹ್ಲರ್, ಚಾಲಕರು, ಹೀರೊ ಮೊಟೊಸ್ಪೋರ್ಟ್ಸ್ ಟೀಂ ರಾಲಿ, ಹೇಳಿದರು "ಹೀರೊ ಮೊಟೊಸ್ಪೋರ್ಟ್ಸ್ ನೊಂದಿಗೆ ನನ್ನ ಮೊದಲ ವರ್ಷ ರೋಮಾಂಚಕವಾಗಿದೆ. 2020ನಲ್ಲಿ ರೇಸ್‍ಗೆ ಹೆಚ್ಚು ಅವಕಾಶಗಳಿಲ್ಲದಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ಎರಡು ಅದ್ಭುತವಾದ ಪ್ರದರ್ಶನಗಳ ನಂತರ ನಾವು ಡಕಾರ್ ರಾಲಿಯನ್ನು ಪ್ರವೇಶಿಸುತ್ತಿರುವ ನನಗೆ ಸಂತಸ ತಂದಿದೆ.
ಹೀರೊ ಮೊಟೊಸ್ಪೋರ್ಟ್ಸ್ 2017ರಲ್ಲಿ ಡಕಾರ್ ರಾಲಿಯಲ್ಲಿ ತನ್ನ ಆರಂಭ ಮಾಡಿತು ಮತ್ತು ಕೆಲವೇ ವರ್ಷಗಳಲ್ಲಿ ಅಂತರಾಷ್ಟ್ರೀಯ ವಾಹನ ಕ್ರೀಡೇಯಲ್ಲಿ ಉನ್ನತ ತಂಡವಾಗಿ ಹೊಮ್ಮಿದೆ.
ವಿಶ್ವದ ಅತಿದೊಡ್ಡ ರಾಲಿಯಾದ ಡಕಾರ್ ರಾಲಿ, ತನ್ನ 43ನೇ ಆವೃತ್ತಿಯಲ್ಲಿ ಇಡೀ ಸೌದಿ ಅರೇಬಿಯಾವನ್ನು ವ್ಯಾಪಿಸಿದೆ. ಜೆಡ್ಡಾ ನಗರದಲ್ಲಿ ಆರಂಭವಾಗಿ ಅಲ್ಲಿಯೇ ಅಂತ್ಯವಾಗುವ ಈ ರಾಲಿ ಜನವರಿ 3,2021 ರಂದು ಆರಂಭವಾಗಿ, ವಿವಿಧ ನಗರಗಳನ್ನು ಹಾದು ಜನವರಿ 15,2021 ರಂದು ಅದೇ ನಗರಕ್ಕೆ ಹಿಂದಿರುಗಲಿದೆ. ರಾಲಿಯಲ್ಲಿ ಸ್ಪರ್ಧಿಗಳು ಒಟ್ಟು 7646 ಕಿಮೀ ಕ್ರಮಸಲಿದ್ದು, ಇದರಲ್ಲಿ 4767 ಕಿ.ಮೀ 12ಹಂತಗಳನ್ನಾಗಿ ವಿಂಗಡಿಸಲಾಗಿದೆ.