MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಬಿಬಿಎಂಪಿ ಶಾಲೆಗಳಿಗೆ ಭರ್ಜರಿ ಪ್ರವೇಶ: ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

ಬಿಬಿಎಂಪಿ ಶಾಲೆಗಳಿಗೆ ಭರ್ಜರಿ ಪ್ರವೇಶ: ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈವರೆಗೆ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಜೂನ್ 30ರವರೆಗೆ ದಾಖಲಾತಿಗೆ ಅವಕಾಶವಿದ್ದು, ಉಚಿತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

1 Min read
Author : Mahmad Rafik
Published : Jun 17 2025, 10:35 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : social media

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿಬಿಎಂಪಿಯ ಶಾಲಾ-ಕಾಲೇಜುಗಳಿಗೆ ಈವರೆಗೆ 19,356 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದು, ಜೂನ್‌ 30 ವರೆಗೆ ದಾಖಲಾತಿಗೆ ಅವಕಾಶವಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

25
Image Credit : GOOGLE

ಶಿಶುವಿಹಾರದಿಂದ ಸ್ನಾತಕೋತ್ತರ ಪದವಿ ಕಾಲೇಜುವರೆಗೆ ಒಟ್ಟು 171 ಶಾಲಾ-ಕಾಲೇಜುಗಳನ್ನು ಬಿಬಿಎಂಪಿ ಹೊಂದಿದೆ. ಈ ಪೈಕಿ ಶಿಶು ವಿಹಾರಕ್ಕೆ 3986, ಪ್ರಾಥಮಿಕ ಶಾಲೆಗೆ 3833, ಪ್ರೌಢ ಶಾಲೆಗೆ 6383, ಪದವಿ ಪೂರ್ವ ಕಾಲೇಜಿಗೆ 3770, ಪದವಿ ಹಾಗೂ ಸ್ನಾತಕೋತ್ತರ ಪದವಿಗೆ 1385 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ

Related Articles

Related image1
Now Playing
Bengaluru: ಗುತ್ತಿಗೆದಾರನಿಗೆ 50 ಸಾವಿರ ದಂಡ ವಿಧಿಸಿದ BBMP Morning 30 News
Related image2
'ರಸ್ತೆಗುಂಡಿ ಮುಚ್ಚಿ ಎಂದ್ರೆ ಎಕ್ಸ್ ಖಾತೆ ಬ್ಲಾಕ್ ಮಾಡ್ತೀರಾ?' BBMP ವಿರುದ್ಧ ಬೆಂಗಳೂರಿಗರು ಕಿಡಿ!
35
Image Credit : getty

ಜೂನ್‌ 30ರ ವರೆಗೆ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಕಳೆದ ವರ್ಷ ಒಟ್ಟು 23 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದರು. ಈ ವರ್ಷವೂ ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾತಿ ಪಡೆಯುವ ನಿರೀಕ್ಷೆ ಇದೆ. ದಾಖಲಾತಿ ಕುರಿತು ಶಾಲಾ-ಕಾಲೇಜು ಶಿಕ್ಷಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಾಲಿಕೆ ಶಿಕ್ಷಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

45
Image Credit : Getty

ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯ

ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಸಾಕಷ್ಟು ಉಚಿತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರಮುಖವಾಗಿ ನೋಟ್ ಪುಸ್ತಕ, ಪಠ್ಯ ಪುಸ್ತಕಗಳು, ಸಮವಸ್ತ್ರಗಳು, ಶೂ ಮತ್ತು ಕಾಲುಚೀಲ, ಬ್ಯಾಗ್ ಗಳು, ಸ್ವೇಟರ್, ಮಧ್ಯಾಹ್ನದ ಬಿಸಿಯೂಟ , ಶಿಶುವಿಹಾರದ ಮಕ್ಕಳಿಗೆ ಬಿಸಿ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿ, ಆಟವಾಡಲು ಆಟಿಕೆಗಳು ಸಿಗುತ್ತವೆ.

55
Image Credit : getty

ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯ

ಉನ್ನತ ಶಿಕ್ಷಣ ಒದಗಿಸಲು ಸ್ಮಾರ್ಟ್ ತರಗತಿ ಮೂಲಕ ಬೋಧನೆ, ಕಂಪ್ಯೂಟರ್ ಲ್ಯಾಬ್, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಅತ್ಯುನ್ನತ ಶ್ರೇಣಿ ಪಡೆದ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 35 ಸಾವಿರ ಪ್ರೋತ್ಸಾಹ ಧನ ಸೇರಿದಂತೆ ಸಾಕಷ್ಟು ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಬಿಎಂಪಿ
ಶಾಲೆ
ವಿದ್ಯಾರ್ಥಿ

Latest Videos
Recommended Stories
Recommended image1
ತರಕಾರಿಯಲ್ಲಿನ ಅಪಾಯಕಾರಿ ಅಂಶ ದೇಹಕ್ಕೆ ಸೇರದಿರಲು ಈ ಕ್ರಮ ಅನುಸರಿಸಿ ಸೇವಿಸಿ
Recommended image2
ದರ್ಶನ್- ರೇಣುಕಾಸ್ವಾಮಿ ಕೇಸ್: ಪೊಲೀಸರ ವಿರುದ್ಧವೇ ಸುಳ್ಳು ಸಾಕ್ಷ್ಯ ಸೃಷ್ಟಿಸಿರುವ ಆರೋಪ
Recommended image3
ದಿನಪತ್ರಿಕೆಗಳನ್ನು ಹಂಚುತ್ತಿದ್ದ ಹುಡುಗ ಈಗ ಜಡ್ಜ್
Related Stories
Recommended image1
Now Playing
Bengaluru: ಗುತ್ತಿಗೆದಾರನಿಗೆ 50 ಸಾವಿರ ದಂಡ ವಿಧಿಸಿದ BBMP Morning 30 News
Recommended image2
'ರಸ್ತೆಗುಂಡಿ ಮುಚ್ಚಿ ಎಂದ್ರೆ ಎಕ್ಸ್ ಖಾತೆ ಬ್ಲಾಕ್ ಮಾಡ್ತೀರಾ?' BBMP ವಿರುದ್ಧ ಬೆಂಗಳೂರಿಗರು ಕಿಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved