- Home
- Astrology
- Weekly Financial Horoscope: ಯಾರಿಗೆ ಧನಲಾಭ? ಯಾರು ಖರ್ಚಿಗೆ ಬ್ರೇಕ್ ಹಾಕಬೇಕು? 12 ರಾಶಿಗಳ ಪೂರ್ಣ ವಿವರ
Weekly Financial Horoscope: ಯಾರಿಗೆ ಧನಲಾಭ? ಯಾರು ಖರ್ಚಿಗೆ ಬ್ರೇಕ್ ಹಾಕಬೇಕು? 12 ರಾಶಿಗಳ ಪೂರ್ಣ ವಿವರ
Weekly Financial Horoscope: ನವೆಂಬರ್ 16 ರಿಂದ 22, 2026 ರವರೆಗಿನ 12 ರಾಶಿಗಳ ಆರ್ಥಿಕ ಭವಿಷ್ಯ ಇಲ್ಲಿದೆ. ಕೆಲವು ರಾಶಿಯವರಿಗೆ ಲಾಭವಾದರೆ, ಇನ್ನು ಕೆಲವರಿಗೆ ಖರ್ಚು ಹೆಚ್ಚಾಗಿ ಸಾಲದ ಹೊರೆ ಬೀಳಲಿದೆ. ನಿಮ್ಮ ರಾಶಿಯ ಆರ್ಥಿಕ ಸ್ಥಿತಿ ಹೇಗಿದೆ ತಿಳಿಯಿರಿ.

Weekly Financial Horoscope
ಬೆಂಗಳೂರು: ನವೆಂಬರ್ 16 ರಿಂದ 22, 2026 ರವರೆಗೆ 12 ರಾಶಿಯವರ ಫಲಾಫಲಗಳಲ್ಲಿ ಮಿಶ್ರ ಅನುಭವ ಸಿಗಲಿದೆ. ಇದು ನಿಮ್ಮ ಆದಾಯ, ಉಳಿತಾಯ ಮತ್ತು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಕೆಲವು ರಾಶಿಯವರಿಗೆ ಜಾಕ್ಪಾಟ್ ಹೊಡೆದರೆ, ಇನ್ನು ಕೆಲವರಿಗೆ ಖರ್ಚು ಹೆಚ್ಚಾಗಿ ಸಾಲದ ಹೊರೆ ಬೀಳಲಿದೆ. ಮೇಷದಿಂದ 12 ರಾಶಿ ವರೆಗಿನ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ಹಣದ ವಿಚಾರದಲ್ಲಿ ಈ ವಾರ ವಿಶೇಷ ಎಚ್ಚರಿಕೆ ಅಗತ್ಯ. ನವೆಂಬರ್ 16ರಂದು ಸೂರ್ಯ 8ನೇ ಭಾವಕ್ಕೆ ಬರುವುದರಿಂದ ಜಂಟಿ ಹಣ, ಸಾಲ, ವಿಮೆ, ತೆರಿಗೆ ಮತ್ತು ದಿಢೀರ್ ಖರ್ಚುಗಳು ಎದುರಾಗಬಹುದು. ಸರಿಯಾಗಿ ವಿಚಾರಿಸದೆ ಹೂಡಿಕೆ ಮಾಡಬೇಡಿ ಮತ್ತು ರಿಸ್ಕ್ ತೆಗೆದುಕೊಳ್ಳಬೇಡಿ. ವಾರದ ಮಧ್ಯಭಾಗ ಬಾಕಿ ಹಣ ತೀರಿಸಲು ಉತ್ತಮವಾಗಿದೆ. ನವೆಂಬರ್ 22ರಂದು ಶುಕ್ರ 7ನೇ ಭಾವಕ್ಕೆ ಬಂದಾಗ ಸಂಗಾತಿ ಅಥವಾ ಬ್ಯುಸಿನೆಸ್ ಪಾರ್ಟ್ನರ್ ಜೊತೆ ಹಣದ ಮಾತುಕತೆ ಸುಲಭವಾಗುತ್ತದೆ. ಐಷಾರಾಮಿ ವಸ್ತುಗಳಿಗೆ ಅನಗತ್ಯ ಖರ್ಚು ಬೇಡ, ಸರಿಯಾದ ಬಜೆಟ್ ಪಾಲಿಸಿ.
ವೃಷಭ ರಾಶಿ
ಈ ವಾರ ಆರ್ಥಿಕ ಸ್ಥಿತಿ ಕೆಲವೊಮ್ಮೆ ಚೆನ್ನಾಗಿದ್ದರೆ, ಇನ್ನು ಕೆಲವೊಮ್ಮೆ ಸ್ವಲ್ಪ ಬಿಗಿ ಆಗಿರುತ್ತದೆ. ಅನಗತ್ಯ ಖರ್ಚು ತಪ್ಪಿಸುವುದೇ ನಿಮ್ಮ ಜಾಣತನ. 4ನೇ ಭಾವದಲ್ಲಿರುವ ಗುರು ಮನೆ ಅಲಂಕಾರ, ರಿಪೇರಿ ಅಥವಾ ಆಸ್ತಿ ಮೇಲೆ ಹಣ ಹಾಕುವ ಆಸೆ ಹೆಚ್ಚಿಸುತ್ತಾನೆ. ನವೆಂಬರ್ 16ರಂದು ಸೂರ್ಯ 7ನೇ ಭಾವಕ್ಕೆ ಬಂದಾಗ ಸಂಗಾತಿ ಅಥವಾ ವ್ಯಾಪಾರ ಪಾಲುದಾರರ ಜೊತೆ ಹಣದ ಚರ್ಚೆ ನಡೆಯಲಿದೆ. ಜಂಟಿ ಹೂಡಿಕೆ ಮತ್ತು ಬಾಕಿ ವ್ಯವಹಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ನವೆಂಬರ್ 22ರ ನಂತರ ಮೋಜು-ಮಸ್ತಿ ಮತ್ತು ಜೀವನಶೈಲಿ ಸುಧಾರಿಸಲು ಖರ್ಚು ಮಾಡುವ ಮನಸ್ಸಾಗುತ್ತದೆ. ಆತುರದಲ್ಲಿ ಶಾಪಿಂಗ್ ಮಾಡಬೇಡಿ.
ಮಿಥುನ ರಾಶಿ
- ಹಣಕಾಸಿನ ವಿಷಯದಲ್ಲಿ ಪ್ರಾಯೋಗಿಕವಾಗಿ ಯೋಚಿಸಿ ಹೆಜ್ಜೆ ಇಡಿ
- ಮನೆ ಅಗತ್ಯಗಳು, ಹಳೆಯ ಸಾಲ ಅಥವಾ ಆಸ್ಪತ್ರೆ ಖರ್ಚುಗಳನ್ನು ಹೆಚ್ಚಿಸಬಹುದು
- ಪೂರ್ತಿ ವಿವರ ತಿಳಿಯದೆ ಯಾವುದೇ ಆರ್ಥಿಕ ಜವಾಬ್ದಾರಿ ವಹಿಸಿಕೊಳ್ಳಬೇಡಿ
- ವಾರದ ಮಧ್ಯಭಾಗ ಬಜೆಟ್ ಪರಿಶೀಲಿಸಲು ಉತ್ತಮ
- ಮನರಂಜನೆ ಮತ್ತು ಹವ್ಯಾಸಗಳ ಮೇಲಿನ ಖರ್ಚು ನಿಯಂತ್ರಿಸಿ
ಕರ್ಕಾಟಕ ರಾಶಿ
- ಇಡೀ ವಾರ ಹಣಕಾಸಿನ ವಿಷಯಗಳೇ ಪ್ರಮುಖವಾಗಿರುತ್ತವೆ
- ಉಳಿತಾಯ ಮತ್ತು ಕುಟುಂಬದ ಆಸ್ತಿ ಹೆಚ್ಚಿಸಲು ಪ್ರೇರಣೆ ಸಿಗಲಿದೆ
- ಕುಟುಂಬದ ಜವಾಬ್ದಾರಿ ಅಥವಾ ಐಷಾರಾಮಿ ವಸ್ತುಗಳ ಖರ್ಚು
- ಉಳಿತಾಯ ಮತ್ತು ಖರ್ಚಿನ ನಡುವೆ ಸಮತೋಲನ ಇರಲಿ
- ಮಕ್ಕಳ ಶಿಕ್ಷಣ, ಫೀಸ್ ಅಥವಾ ಕ್ರಿಯೇಟಿವ್ ಕೆಲಸಗಳಿಗೆ ಖರ್ಚು
- ರಿಸ್ಕ್ ವ್ಯವಹಾರಗಳಿಂದ ದೂರವಿರಿ
ಸಿಂಹ ರಾಶಿ
- ಈ ವಾರ ಹಣಕಾಸಿನ ಯೋಜನೆಗಳನ್ನು ಯೋಚಿಸಿ ಮಾಡಬೇಕು
- ಐಷಾರಾಮಿ ವಸ್ತುಗಳು, ಕುಟುಂಬದ ಬೇಡಿಕೆ, ಸ್ವಂತ ಸೌಕರ್ಯಗಳಿಗೆ ಅನಗತ್ಯ ಖರ್ಚು
- ಆತುರದಲ್ಲಿ ಯಾವುದನ್ನೂ ಖರೀದಿ ಮಾಡಬೇಡಿ
- ಹಣದ ಮಾತುಕತೆ ಮತ್ತು ಡೀಲ್ಗಳಲ್ಲಿ ನಿಮ್ಮ ಕೈ ಮೇಲಾಗುತ್ತದೆ
- ಸಾಲ ಕೊಡುವ-ತೆಗೆದುಕೊಳ್ಳುವ ಮುನ್ನ ಷರತ್ತುಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ
ಕನ್ಯಾ ರಾಶಿ
- ವಾರದ ದ್ವಿತೀಯಾರ್ಧದಲ್ಲಿ ಆರ್ಥಿಕ ಯೋಜನೆ ತುಂಬಾ ಮುಖ್ಯ
- ಆರ್ಥಿಕ ಸ್ಥಿತಿಯ ಬಗ್ಗೆ ಅಸಮಾಧಾನ ಉಂಟಾಗಬಹುದು
- ಸುಖ-ಸೌಕರ್ಯಗಳಿಗೆ ಖರ್ಚು ಹೆಚ್ಚಾಗಬಹುದು
- ಅನಗತ್ಯ ಖರೀದಿ ತಪ್ಪಿಸಿ, ಹೂಡಿಕೆ ಪ್ರಸ್ತಾವನೆ ಪರಿಶೀಲಿಸಿ
- ನವೆಂಬರ್ 22ರಂದು ಆರ್ಥಿಕ ಸ್ಥಿತಿಗೆ ಬಲ ಸಿಗಲಿದೆ
ತುಲಾ ರಾಶಿ
- ವಾರದ ಮೊದಲ ಭಾಗದಲ್ಲಿ ಹಣದ ವಿಚಾರದಲ್ಲಿ ಹೆಚ್ಚು ಗಮನ ಕೊಡಬೇಕು
- ಆದಾಯ ಹೆಚ್ಚಿಸಲು ಮತ್ತು ಕುಟುಂಬದ ಖರ್ಚು ನಿಭಾಯಿಸಲು ಗಮನ ಹರಿಸಿ
- ಮನೆಯಲ್ಲಿ ದಿಢೀರ್ ಎದುರಾಗುವ ಅಗತ್ಯವೊಂದು ಉಳಿತಾಯಕ್ಕೆ ಪೆಟ್ಟು
- ಅನಗತ್ಯ ಶಾಪಿಂಗ್, ಹೂಡಿಕೆ ಬೇಡ
- ನವೆಂಬರ್ 22ರಂದು ಆರ್ಥಿಕ ನಿರ್ಧಾರದಲ್ಲಿ ಆತ್ಮವಿಶ್ವಾಸ
- ಬಟ್ಟೆ, ಅಲಂಕಾರ ಅಥವಾ ಜೀವನಶೈಲಿಗೆ ಖರ್ಚು ಮಾಡುವ ಮುನ್ನ ಬಜೆಟ್ ಗಮನಿಸಿ
ವೃಶ್ಚಿಕ ರಾಶಿ
- ಹಣದ ವಿಚಾರದಲ್ಲಿ ಶಿಸ್ತು ಮತ್ತು ಎಚ್ಚರಿಕೆಯ ಯೋಜನೆ ಅಗತ್ಯ
- ಎಲ್ಲಾ ಅವಕಾಶಗಳಿಂದ ತಕ್ಷಣವೇ ಹಣ ಸಿಗುತ್ತದೆ ಎನ್ನಲಾಗದು
- ಶಾಪಿಂಗ್ ಮತ್ತು ಮನರಂಜನೆಗೆ ಖರ್ಚು ಹೆಚ್ಚಾಗಬಹು
- ಹೂಡಿಕೆಗೆ ಮುನ್ನ ಪೂರ್ತಿ ರಿಸರ್ಚ್ ಮಾಡಿ
ಧನು ರಾಶಿ
- ಈ ವಾರ ಆರ್ಥಿಕ ಯೋಜನೆಗೆ ಮೊದಲ ಆದ್ಯತೆ ನೀಡಿ
- ಮನೆ ಅಗತ್ಯ, ವೈದ್ಯಕೀಯ, ವೈಯಕ್ತಿಕ ಖರ್ಚುಗಳು ಹೆಚ್ಚು
- ಅನಗತ್ಯ ಖರೀದಿ ತಪ್ಪಿಸಿ, ಖರ್ಚು-ವೆಚ್ಚದ ಲೆಕ್ಕ ಬರೆದಿಡಿ
- ರಿಸ್ಕ್ ಇರುವ ಹೂಡಿಕೆಗಳಿಂದ ದೂರವಿರಿ
- ಶಿಕ್ಷಣ, ವಿದೇಶಿ ಸಂಪರ್ಕ ಸಿಗುವ ಸಾಧ್ಯತೆ ಇದೆ
- ಅನಿಶ್ಚಿತ ಭರವಸೆಗಳನ್ನು ಪೂರ್ತಿ ನಂಬಬೇಡಿ
ಮಕರ ರಾಶಿ
- ಆರ್ಥಿಕವಾಗಿ ಈ ವಾರ ಉತ್ತಮ ಅವಕಾಶಗಳಿವೆ
- ಆದರೆ ಎಚ್ಚರಿಕೆಯ ಪ್ಲಾನಿಂಗ್ ಬೇಕು
- ರಿಸ್ಕ್ ಹೂಡಿಕೆ ಬೇಡ
- ತೆರಿಗೆ (Tax) ವಿಚಾರಗಳನ್ನು ಪರಿಶೀಲಿಸಿ
ಕುಂಭ ರಾಶಿ
- ಹಣದ ವಿಚಾರದಲ್ಲಿ ಈ ವಾರ ಎಚ್ಚರಿಕೆಯಿಂದ ಹೆಜ್ಜೆ ಇಡಿ
- ಉಳಿತಾಯ ಮತ್ತು ಕುಟುಂಬದ ಸಂಪತ್ತಿನ ಮೇಲೆ ಗಮನ
- ಮನೆಯ ಖರ್ಚುಗಳನ್ನು ಯೋಚಿಸಿ ನಿಭಾಯಿಸಿ, ಅನಗತ್ಯ ಖರೀದಿ ಬೇಡ
- ಪಾರ್ಟ್ನರ್ಶಿಪ್ ಹಣ ಮತ್ತು ಬ್ಯುಸಿನೆಸ್ ವ್ಯವಹಾರಗಳ ಕಡೆ ಗಮನ ಸೆಳೆಯುತ್ತಾರೆ
- ಆರ್ಥಿಕ ಒಪ್ಪಂದ ಮಾಡಿಕೊಳ್ಳುವ ಮುನ್ನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ
- ಶಿಕ್ಷಣ ಅಥವಾ ಸ್ವಂತ ಬೆಳವಣಿಗೆಗಾಗಿ ಖರ್ಚು ಹೆಚ್ಚಾಗಬಹುದು
ಮೀನ ರಾಶಿ
ಈ ವಾರ ಹಣಕಾಸಿನ ವಿಚಾರಗಳನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ವಾರದ ಆರಂಭದಲ್ಲಿ ಶುಕ್ರ 7ನೇ ಭಾವದಲ್ಲಿ ನೀಚ ಸ್ಥಿತಿಯಲ್ಲಿ ಇದ್ದು, ನವೆಂಬರ್ 22ರಂದು 8ನೇ ಭಾವಕ್ಕೆ ಬರುತ್ತಾನೆ. ಇದು ಸಂಗಾತಿ ಅಥವಾ ಬ್ಯುಸಿನೆಸ್ ಪಾರ್ಟ್ನರ್ ಜೊತೆಗಿನ ಹಣಕಾಸು ವ್ಯವಹಾರಗಳ ಕಡೆ ಗಮನ ಸೆಳೆಯುತ್ತದೆ. ಬಾಕಿ ಪಾವತಿ, ಸಾಲ ಮತ್ತು ಹೂಡಿಕೆಗಳನ್ನು ಪರಿಶೀಲಿಸಿ. ನವೆಂಬರ್ 16ರಂದು ಸೂರ್ಯ 9ನೇ ಭಾವಕ್ಕೆ ಬರುವುದರಿಂದ ಉನ್ನತ ಶಿಕ್ಷಣ, ಪ್ರಯಾಣ ಅಥವಾ ವೃತ್ತಿ ಪ್ರಗತಿಯ ಹೊಸ ಅವಕಾಶಗಳನ್ನು ಹುಡುಕುವಿರಿ.













