2025 ರಲ್ಲಿ ಹೊಸ ಮನೆ ಕಟ್ಟೋ ಪ್ಲಾನ್ ಇದ್ಯಾ? ಬಾಡಿಗೆ ಮನೆಯಲ್ಲಿದ್ರೂ ಈ ತಪ್ಪು ಮಾಡಬೇಡಿ!
ಬಾಡಿಗೆ ಮನೆಯಲ್ಲಿ ವಾಸ್ತು ನಿಯಮಗಳನ್ನ ಜನ ನಿರ್ಲಕ್ಷ್ಯ ಮಾಡ್ತಾರೆ, ಅದ್ರ ಪರಿಣಾಮ ಗೊತ್ತಿಲ್ದೆ. ಇದು ಮನೆ ಮಾಲೀಕರಾಗೋ ಕನಸಿಗೆ ಅಡ್ಡಿಯಾಗಬಹುದು ಹುಷಾರು. ಹೊಸ ಮನೆ ಕಟ್ಟುವ ಪ್ಲಾನ್ ಮಾಡಿದ್ರೆ ಬಾಡಿಗೆ ಮನೆಯಲ್ಲಿ ವಾಸ್ತು ನಿಯಮ ನಿರ್ಲಕ್ಷ್ಯ ಮಾಡಬೇಡಿ..
ಸ್ವಂತ ಮನೆ ಅನ್ನೋದು ಎಲ್ಲರ ಕನಸು. ಸ್ವಂತ ಮನೆ ಕಟ್ಟಲು ಎಷ್ಟೆಲ್ಲ ಶ್ರಮ ಹಾಕಿರುತ್ತೇವೆ. ಹೊಸ ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತೇವೆ. ಆದರೆ ಬಾಡಿಗೆ ಮನೆಯಲ್ಲಿದ್ದಾಗ ವಾಸ್ತು ನಿಯಮಗಳ ಬಗ್ಗೆ ನಿರ್ಲಕ್ಷ್ಯ ಮಾಡೊದೇ ಹೆಚ್ಚು. ಹೀಗೆ ಅರಿವಿಲ್ಲದೆಯೇ ವಾಸ್ತು ದೋಷಗಳನ್ನು ಮಾಡ್ಕೊಳ್ಳೋದು ಮನೆ ಖರೀದಿಗೆ ತಡೆಯಾಗಬಹುದು.
ಬಾಡಿಗೆ ಮನೆಗಳಿಗೆ ವಾಸ್ತು
ವಾಸ್ತು ನಿಯಮ ಪಾಲನೆ ಮಾಡದಿರುವುದರಿಂದ ಬಾಡಿಗೆದಾರರಿಗೂ ಮತ್ತು ಮನೆ ಮಾಲೀಕರಿಗೂ ಪರಿಣಾಮ ಬೀರುತ್ತವೆ. ಒಬ್ಬಂಟಿಯಾಗಿದ್ದರೆ, ನೀವು ಜಾಗವನ್ನು ಬಳಸುವುದರಿಂದ ವಾಸ್ತು ನಿಮ್ಮ ಜವಾಬ್ದಾರಿ. ಸಮೃದ್ಧಿಗಾಗಿ ಮರದ ಬಾಗಿಲುಗಳಿಗಿಂತ ಉಕ್ಕಿನ ಬಾಗಿಲುಗಳು ಉತ್ತಮ.
ಬಾಡಿಗೆ ಮನೆಗೆ ವಾಸ್ತು ಟಿಪ್ಸ್: ಹಾಳಾದ ಮರದ ಬಾಗಿಲುಗಳು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತವೆ. ಹೀಗಾಗಿ ಮರದ ಬಾಗಿಲು ಬದಲಿಗೆ ಉಕ್ಕಿನ ಬಾಗಿಲುಗಳು ಇರುವುದು ಶುಭ. ಸ್ಥಳವನ್ನು ಶುದ್ಧೀಕರಿಸಲು ಸಂಜೆ ಕರ್ಪೂರ ಅಥವಾ ಧೂಪವನ್ನು ಹಚ್ಚಿ.
ಸಮೃದ್ಧಿಗೆ ವಾಸ್ತು ಸಲಹೆಗಳು
ಬಾಡಿಗೆ ಮನೆಗಳಲ್ಲಿ ಮುರಿದ ವಸ್ತುಗಳನ್ನು ಇಡಬೇಡಿ. ಹಣಕಾಸಿನ ನಷ್ಟವನ್ನು ತಡೆಗಟ್ಟಲು ಸೋರುವ ನಲ್ಲಿಗಳನ್ನು ತಕ್ಷಣ ದುರಸ್ತಿ ಮಾಡಿ. ಮುಖ್ಯ ಬಾಗಿಲನ್ನು ಶುಭ ಸಂಕೇತಗಳಿಂದ ಅಲಂಕರಿಸಿ.