Vivoದಿಂದ ಮೊದಲ ಡ್ರೋನ್ 5G ಸ್ಮಾರ್ಟ್‌ಫೋನ್; 400MP ಡ್ರೋನ್ ಕ್ಯಾಮೆರಾ ಎಷ್ಟು ಎತ್ತರ ಹಾರುತ್ತೆ?
ವಿವೋ ಕಂಪನಿಯು 400MP ಡ್ರೋನ್ ಕ್ಯಾಮೆರಾ ಹೊಂದಿರುವ Vivo Drone P1 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. ಡ್ರೋನ್ ಕ್ಯಾಮೆರಾ, MediaTek Dimensity 8200 ಪ್ರೊಸೆಸರ್, 7100mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಹೊಂದಿದೆ.
Vivo Drone P1 5G: ಸದ್ಯ ಮೊಬೈಲ್ ಲೋಕದಲ್ಲಿ ಡ್ರೋನ್ ಕ್ಯಾಮೆರಾವುಳ್ಳ 5ಜಿ ಸ್ಮಾರ್ಟ್‌ಫೋನ್ ಟ್ರೆಂಡ್ ಸೃಷ್ಟಿಸುತ್ತಿವೆ. ಇದೀಗ ಸ್ಮಾರ್ಟ್‌ಫೋನ್ ದೈತ್ಯ ಕಂಪನಿಯಾಗಿರುವ ವಿವೋ ಸಹ 400MP ಸಾಮರ್ಥ್ಯದ ಡ್ರೋನ್ ಕ್ಯಾಮೆರಾ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. Vivo Drone P1 5G ಸ್ಮಾರ್ಟ್‌ಫೋನ್ ಡ್ರೋನ್ ಕ್ಯಾಮೆರಾ ಫೀಚರ್ ಜೊತೆ ಒಳ್ಳೆ ಗುಣಮಟ್ಟದ ಫೋಟೋಗ್ರಾಫಿಯನ್ನು ಸಹ ಒಳಗೊಂಡಿರಲಿದೆ. ಸ್ಮಾರ್ಟ್‌ಫೋನ್‌ಗಳ ಜಗತ್ತಿಗೆ Vivo ಡ್ರೋನ್ P1 5G ಅನ್ನು ಅತ್ಯಾಕರ್ಷಕ ಸೇರ್ಪಡೆಯಾಗುತ್ತಿದೆ. ಈ ಸ್ಮಾರ್ಟ್‌ಫೋನಿನ ಬೆಲೆ ಸೇರಿದಂತೆ ವಿಶೇಷತೆ ಈ ಲೇಖನದಲ್ಲಿದೆ.
ಅತ್ಯಾಕರ್ಷಕ Display
ವಿವೋ ಡ್ರೋನ್ P1 5G ಸ್ಮಾರ್ಟ್‌ಫೋನ್ 6.72 ಇಂಚಿನ ಪಂಚ್-ಹೋಲ್ ಡಿಸ್‌ಪ್ಲೇಯನ್ನು ಹೊಂದಿದೆ. 144Hz ರಿಫ್ರೆಸ್ ರೇಟ್‌ನ್ನು ಸ್ಕ್ರೀನ್ ಸಪೋರ್ಟ್ ಜೊತೆ ಸ್ಮೂಥ್ ಸ್ಕ್ರಾಲಿಂಗ್ ಮತ್ತು ಉತ್ತಮ ಗೇಮಿಂಗ್ ಕಾರ್ಯಕ್ಷಮತೆಯನ್ನು ಹೊಂದಿದೆ. 1080×3200 pixels ರೆಸೆಲ್ಯೂಷನ್ ಶಾರ್ಪ್ ಮತ್ತು ವೈಬ್ರಂಟ್ ವಿಷ್ಯುಯಲ್ಸ್ ನ ಅನುಭವವನ್ನು ನೀಡಲಿದೆ.
Vivo ಡ್ರೋನ್ P1 5G ಸ್ಮಾರ್ಟ್‌ಫೋನ್ ಅತ್ಯಾಧುನಿಕ ತಂತ್ರಜ್ಞಾನಕ್ಕೆ (cutting-edge technology) ಪೂರಕವಾಗಿದ್ದು, ಜೊತೆಯಲ್ಲಿ MediaTek Dimensity 8200 ಪ್ರೊಸೆಸರ್ ಒಳಗೊಂಡಿದೆ. ಇದು ದಕ್ಷತೆ ಮತ್ತು ಹೆಚ್ಚಿನ ಕಾರ್ಯಕ್ಷಮತೆಗೆ ಹೆಸರುವಾಸಿಯಾದ ದೃಢವಾದ ಪ್ರೊಸೆಸರ್ ಆಗಿದೆ. ಸೆಕ್ಯೂರಿಟಿಗಾಗಿ ಈ ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.
400MP ಕ್ಯಾಮೆರಾ
ಇದರ ವಿಶೇಷತೆ ಅಂದ್ರೆ ಡ್ರೋನ್ ಕ್ಯಾಮೆರಾ ಆಗಿದೆ. 400MP ಡ್ರೋನ್ ಕ್ಯಾಮೆರಾ 10 ರಿಂದ 30 ಮೀಟರ್ ಎತ್ತರವರೆಗೆ ಹಾರಲಿದೆ. ಇದರ ಮೂಲಕ ಬಳಕೆದಾರರು ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿಯನ್ನು ಹೈ ಕ್ವಾಲಿಟಿಯಲ್ಲಿ ಮಾಡಬಹುದಾಗಿದೆ. ಈ ವಿಶೇಷ ಫೀಚರ್ ಪ್ರತ್ಯೇಕ ಡ್ರೋನ್ ಉಪಕರಣಗಳ ಅಗತ್ಯವನ್ನು ನಿವಾರಿಸುತ್ತದೆ. ಏರಿಯಲ್ ವ್ಯೂವ್‌ಗಾಗಿ ಡ್ರೋನ್ ಕ್ಯಾಮೆರಾ ಒಳ್ಳೆಯ ಆಯ್ಕೆಯಾಗಲಿದೆ. ಇದರ ಜೊತೆಯಲ್ಲಿ 50 MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 13MP ಡೆಪ್ತ್ ಸೆನ್ಸಾರ್ ಸಹ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ 50MP front ಕ್ಯಾಮೆರಾ ನೀಡಲಾಗಿದೆ.
ಪವರ್‌ಫುಲ್ Battery ಜೊತೆ Ultra-Fast Charging
Vivo ಡ್ರೋನ್ P1 5G ಸ್ಮಾರ್ಟ್‌ಫೋನ್ 7100mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ 100-watt ಫಾಸ್ಟ್ ಜಾರ್ಜಿಂಗ್ ನೀಡಲಾಗಿದೆ. ಕಡಿಮೆ ಸಮಯದಲ್ಲಿ ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗುತ್ತದೆ. ಯಾವಾಗಲೂ ಪ್ರಯಾಣದಲ್ಲಿರುವವರಿಗೆ ಮತ್ತು ಕನಿಷ್ಠ ಅಲಭ್ಯತೆಯನ್ನು ಬಯಸುವವರಿಗೆ ಈ ವೈಶಿಷ್ಟ್ಯವು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಸ್ಟೋರೇಜ್ ಮತ್ತು ಮೆಮೊರಿ ಆಯ್ಕೆ RAM and ROM
Vivo ಡ್ರೋನ್ P1 5G ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿರಲಿದೆ. RAM ಮತ್ತು ROM ಸಾಮರ್ಥ್ಯದ ಮೇಲೆ ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ವ್ಯತ್ಯಾಸ ಆಗುತ್ತದೆ.
8GB RAM + 128GB ಇಂಟರ್‌ನಲ್ ಸ್ಟೋರೇಜ್
12GB RAM + 512GB ಇಂಟರ್‌ನಲ್ ಸ್ಟೋರೇಜ್
16GB RAM + 512GB ಇಂಟರ್‌ನಲ್ ಸ್ಟೋರೇಜ್
ಇದನ್ನೂ ಓದಿ: 80 ಲಕ್ಷ ಜನರ ಮೊಬೈಲ್‌ನಲ್ಲಿವೆ 15 ನಕಲಿ ಲೋನ್ ಆ್ಯಪ್‌ಗಳು; ಇದ್ರೆ ಇಂದೇ ಡಿಲೀಟ್ ಮಾಡಿ, ಎಚ್ಚರಿಕೆ ಸಂದೇಶ
ಬೆಲೆ ಮತ್ತು ಡಿಸ್ಕೌಂಟ್
ಅತ್ಯಾಕರ್ಷಕ Vivo ಡ್ರೋನ್ P1 5G ಸ್ಮಾರ್ಟ್‌ಫೋನ್ ಬೆಲೆ 39,999 ರೂ.ಗಳಿಂದ 44,999 ರೂ.ಗಳ ನಡುವೆ ಇರಲಿದೆ ಎಂದು ಅಂದಾಜಿಸಲಾಗಿದೆ. ಕೆಲ ಡಿಸ್ಕೌಂಟ್ ಸೇರ್ಪಡೆಯಾದ್ರೆ 2 ರಿಂದ 3 ಸಾವಿರ ರೂ.ವರೆಗೆ ಉಳಿತಾಯವಾಗಬಹುದು. 12,000 ರೂ.ಯ ಮಾಸಿಕ ಕಂತಿನ ಮೇಲೆಯೂ ಈ ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಬಹುದು.
Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆ ಫೀಚರ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸಂಭಾವ್ಯ ಖರೀದಿದಾರರು ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಬಗ್ಗೆ ದೃಢಪಡಿಸಿದ ವಿವರಗಳಿಗಾಗಿ Vivo ನಿಂದ ಅಧಿಕೃತ ಪ್ರಕಟಣೆಗಳಿಗಾಗಿ ಕಾಯಬೇಕಾಗುತ್ತದೆ.
ಇದನ್ನೂ ಓದಿ: ಬಿಡುಗಡೆಗೆ ಸಜ್ಜಾದ ರೆಡ್‌ಮಿಯ 12GB RAM, 512GB ಸ್ಟೋರೇಜ್ ಜೊತೆ 4 ಕ್ಯಾಮೆರಾದ 5G ಸ್ಮಾರ್ಟ್‌ಫೋನ್