Asianet Suvarna News Asianet Suvarna News

ದೀಪಾವಳಿ ಹಬ್ಬಕ್ಕೆ ರಿಲಾಯನ್ಸ್ ಡಿಜಿಟಲ್‌ನಲ್ಲಿ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಕೊಡುಗೆ!

  • ಡಿಜಿಟಲ್‌ ಫೆಸ್ಟಿವಲ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಕೊಡುಗೆ  ಘೋಷಿಸಿದ ರಿಲಾಯನ್ಸ್
  • ಬಿಗ್ ಆಫರ್ 2020 ನವೆಂಬರ್ 16 ರ ವರೆಗೆ ಚಾಲ್ತಿಯಲ್ಲಿರಲಿದೆ
  •  10% ಕ್ಯಾಶ್‌ಬ್ಯಾಕ್‌,  ಇಎಂಐನಲ್ಲಿ ರೂ. 4500/- ವರೆಗೆ ರಿಯಾಯಿತಿ, 1000/- ಮೌಲ್ಯದ ವೋಚರ್‌ ಗಿಫ್ಟ್
This diwali celebration get bigger with reliance digital festival of electronics ckm
Author
Bengaluru, First Published Nov 12, 2020, 10:57 PM IST

ಬೆಂಗಳೂರು(ನ.12) ಈ ವರ್ಷದ ರಿಲಾಯನ್ಸ್ ಡಿಜಿಟಲ್‌ ಫೆಸ್ಟಿವಲ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಇನ್ನಷ್ಟು ದೊಡ್ಡದಾಗಿದೆ ಮತ್ತು ಉತ್ತಮ ಆಫರ್‌ಗಳೂ ಇವೆ. ವಿವಿಧ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಬಗ್ಗೆ ಅದ್ಭುತ ಡೀಲ್‌ಗಳನ್ನು ಗ್ರಾಹಕರು ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್‌ ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಈಸಿ ಇಎಂಐ ಮೂಲಕ 10% ಕ್ಯಾಶ್‌ಬ್ಯಾಕ್‌ ಕೂಡ ಲಭ್ಯವಿದೆ. ಸಿಟಿಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್‌ ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್‌ ಕಾರ್ಡ್‌ಗಳು ಮತ್ತು ಇಎಂಐನಲ್ಲಿ ರೂ. 4500/- ವರೆಗೆ ರಿಯಾಯಿತಿಯನ್ನೂ ಪಡೆಯಬಹುದು. ಅಮೆರಿಕನ್‌ ಎಕ್ಸ್‌ಪ್ರೆಸ್‌ ಗ್ರಾಹಕರು ಅಮೆರಿಕನ್‌ ಎಕ್ಸ್‌ಪ್ರೆಸ್‌ ಕಾರ್ಡ್‌ಗಳ ಮೇಲೆ ರೂ. 2000/- ಫ್ಲಾಟ್ ಡಿಸ್ಕೌಂಟ್* ಪಡೆಯಬಹುದು. ರಿಲಾಯನ್ಸ್‌ ಡಿಜಿಟಲ್‌ನಿಂದ ಹಬ್ಬದ ಕೊಡುಗೆಯಾಗಿ, ರೂ. 1000/- ಮೌಲ್ಯದ ವೋಚರ್‌ಗಳನ್ನು ಗ್ರಾಹಕರು ಪಡೆಯುತ್ತಾರೆ. ಸೇಲ್‌ ಪ್ರಸ್ತುತ ಚಾಲ್ತಿಯಲ್ಲಿದೆ ಮತ್ತು 2020 ನವೆಂಬರ್ 16 ರ ವರೆಗೆ ಚಾಲ್ತಿಯಲ್ಲಿರಲಿದೆ.

ರಿಲಯನ್ಸ್ ಡಿಜಿಟಲ್‌ನಲ್ಲಿ ಭರ್ಜರಿ ಆಫರ್; Apple ಐಪ್ಯಾಡ್, ವಾಚ್ ಪ್ರಿ ಬುಕಿಂಗ್

ವಿವಿಧ ವಿಭಾಗಗಳಲ್ಲಿ ಆಕರ್ಷಕ ಕೊಡುಗೆಗಳು ಲಭ್ಯವಿರುತ್ತದೆ. ಮೊಬೈಲ್‌ ಫೋನ್‌ಗಳ ಮೇಲೆ ಕೊಡುಗೆಗಳ ಪೈಕಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20 ರೂ. 40,999/- ರಿಯಾಯತಿ ದರದಲ್ಲಿ ಲಭ್ಯವಿದ್ದು, ಇದು ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ಯಾಶ್‌ ಬ್ಯಾಕ್‌ ಅನ್ನೂ ಒಳಗೊಂಡಿದೆ. ಅಲ್ಲದೆ, ಹೊಸದಾಗಿ ಬಿಡುಗಡೆಯಾದ ಐಫೋನ್‌ 12 ಮತ್ತು ಐಫೋನ್‌ 12 ಪ್ರೋ ಮೇಲೂ ಕೊಡುಗೆಗಳಿವೆ. ಗ್ರಾಹಕರು ಮಾಸಿಕ 2796/-* ಮಾಸಿಕ ದರದಲ್ಲಿ 40% ವರೆಗೆ ಖಚಿತ ಬೈಬ್ಯಾಕ್‌ ಅಡಿಯಲ್ಲಿ ಐಫೋನ್‌ 11 ಅನ್ನೂ ಪಡೆಯಬಹುದು. ವೇರೆಬಲ್‌ ವಿಭಾಗದಲ್ಲಿ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಎಲ್‌ಟಿಇ (42 ಎಂಎಂ) ರಿಯಾಯಿತಿ ದರ ರೂ. 13,950/-* ರಲ್ಲಿ ಎಚ್‌ಡಿಎಫ್‌ಸಿ ಕ್ಯಾಶ್‌ ಬ್ಯಾಕ್‌ ಒಳಗೊಂಡು ಲಭ್ಯವಿದೆ.

ಈ ಹಬ್ಬದ ಸಮಯದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಎದುರು ನೋಡುತ್ತಿರುವವರು ಎಸಸ್ (Asus) ಥಿನ್ ಆಂಡ್ ಲೈಟ್‌ ಲ್ಯಾಪ್‌ಟಾಪ್‌ಗಳ ಮೇಲಿನ ಆಕರ್ಷಕ ಡೀಲ್‌ಗಳನ್ನು ಪಡೆಯಬಹುದು. ರೂ. 18,999/- ಬೆಲೆಯಲ್ಲಿ 2 ವರ್ಷ ವಾರಂಟಿ ಹಾಗೂ ರೂ.6,800/- ಮೌಲ್ಯದ ಲಾಭಗಳನ್ನು ಒಳಗೊಂಡಿದೆ. ಡೆಲ್‌ ಇಂಟೆಲ್‌ ಕೋರ್‌ ಐ3 ಲ್ಯಾಪ್‌ಟಾಪ್‌ಗಳು ರೂ. 37,499/- ರಿಂದ ಆರಂಭವಾಗುತ್ತವೆ ಮತ್ತು ಎಚ್‌ಪಿ ಎಎಂಡಿ ರೈಝೆನ್‌ 5 ಲ್ಯಾಪ್‌ಟಾಪ್‌ ರೂ. 41,290 ರಿಂದ ಆರಂಭವಾಗುತ್ತವೆ. ಇಂಟೆಲ್ 11ನೇ ಜೆನ್‌ ಲ್ಯಾಪ್‌ಟಾಪ್‌ಗಳು ಎಂಎಸ್‌ ಆಫೀಸ್‌ ಪ್ರಿ ಇನ್‌ಸ್ಟಾಲ್‌ ಆಗಿ ಲಭ್ಯವಿದ್ದು, 47,999/-* ರಿಂದ ಆರಂಭವಾಗುತ್ತವೆ. ಎಲ್ಲ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೇಲೆ 10% ರಿಯಾಯಿತಿ ಘೋಷಿಸಲಾಗಿದ್ದು ಗೇಮರ್‌ಗಳಿಗೆ ಖುಷಿಯಾಗಲಿದೆ. ಮನೆಯಿಂದ ಮಕ್ಕಳು ಅಭ್ಯಾಸ ಮಾಡುವುದಕ್ಕಾಗಿ, ಸ್ಯಾಮ್‌ಸಂಗ್ ಟ್ಯಾಬ್‌ ವಿತ್‌ ಎಲ್‌ಟಿಇ, ರೂ.11,999/-*ರಿಂದ ಆರಂಭವಾಗಲಿದೆ.

ಟೆಲಿವಿಷನ್‌ಗಳ ಮೇಲೆ ಗ್ರಾಹಕರು ಹಲವು ರೀತಿಯ ಕೊಡುಗೆಗಳನ್ನು ಪಡೆಯಬಹುದು. 32 ಇಂಚಿನ ಸ್ಮಾರ್ಟ್‌ ಟಿವಿಗಳು (ಹೈಸೆನ್ಸ್, ತೊಶಿಬಾ, ಒನ್‌ಪ್ಲಸ್‌ ಮತ್ತು ಟಿಸಿಎಲ್‌) 3 ವರ್ಷದ ವಾರಂಟಿ ಸಮೇತ ರೂ. 12,490/-* ರಲ್ಲಿ ಲಭ್ಯವಿರುತ್ತದೆ. ಮತ್ತು ಸ್ಯಾಮ್‌ಸಂಗ್‌ 50 ಇಂಚಿನ ಕ್ಯೂಎಲ್‌ಇಡಿ ಸ್ಮಾರ್ಟ್ ಟಿವಿ ರೂ. 64,990/-* ರಲ್ಲಿ 3 ವರ್ಷ ವಾರಂಟಿ ಸಹಿತ ಲಭ್ಯವಿದೆ. ಎಲ್‌ಜಿ ಒಎಲ್‌ಇಡಿ ಟಿವಿ ಖರೀದಿಸುವ ಗ್ರಾಹಕರು ರೂ. 64,990/- ಮೌಲ್ಯದ 3 ವರ್ಷ ವಾರಂಟಿ ಸಹಿತ ಪಡೆಯುತ್ತಾರೆ ಮತ್ತು 3 ತಿಂಗಳವರೆಗೆ ಉಚಿತ ನೆಟ್‌ಫ್ಲಿಕ್ಸ್‌ ಸಬ್‌ಸ್ಕ್ರಿಪ್ಷನ್‌ ಪಡೆಯುತ್ತಾರೆ.

ಹೋಮ್ ಅಪ್ಲೈಯನ್ಸ್‌ಗಳನ್ನು ಖರೀದಿಸಲು ಬಯಸುತ್ತಿರುವವರು ರೂ. 49,990/- ರಿಂದ ಆರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್‌ಗಳು, ರೂ. 11,990/- ರಿಂದ ಟಾಪ್‌ ಲೋಡ್ ವಾಶಿಂಗ್‌ ಮಶಿನ್‌ಗಳು ಮತ್ತು ರೂ. 42,990/- ರಿಂದ ಆರಂಭವಾಗುವ ವಾಶರ್ ಡ್ರೈಯರ್‌ಗಳನ್ನು ನೋಡಬಹುದು. ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್‌ ಖರೀದಿ ಮಾಡುವ ಗ್ರಾಹಕರು ಉಚಿತವಾಗಿ ರೂ. 43,000/-* ಮೌಲ್ಯದ ನೋಟ್‌ 10 ಲೈಟ್‌ ಪಡೆಯುತ್ತಾರೆ.

 ಸುಲಭ ಹಣಕಾಸು ಮತ್ತು ಇಎಂಐ ಆಯ್ಕೆಗಳೊಂದಿಗೆ ಈ ವರ್ಷದ ಫೆಸ್ಟಿವಲ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಅನುಭವವು ಇನ್ನಷ್ಟು ಉತ್ತಮವಾಗಿರುತ್ತವೆ. ರಿಲಾಯನ್ಸ್ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ  ಖರೀದಿ ಮಾಡಬಹುದು.  ಜೊತೆಗೆ ಇನ್‌ಸ್ಟಾ ಡೆಲಿವರಿ (3 ಗಂಟೆಗಳೊಳಗೆ ಡೆಲಿವರಿ) ಮತ್ತು ಸ್ಟೋರ್ ಗಳಿಂದ ಪಿಕಪ್ ಆಯ್ಕೆಗಳೂ ಇವೆ.

Follow Us:
Download App:
  • android
  • ios