ರೆಡ್‌ಮಿಯ 200MP ಕ್ಯಾಮೆರಾ, 5000mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ 8 ಸಾವಿರ ರೂಪಾಯಿ ಇಳಿಕೆ

ಇದು 200MP ಕ್ಯಾಮೆರಾ, 5000mAh ಬ್ಯಾಟರಿ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ₹8,000 ರಿಯಾಯಿತಿಯೊಂದಿಗೆ ಈಗ ಲಭ್ಯವಿದೆ.ಈ ಸೂಪರ್ ಸ್ಮಾರ್ಟ್‌ಫೋನ್ ಹಲವು ವಿಶೇಷ ಮತ್ತು ವಿನೂತನ ಫೀಚರ್ಸ್‌ಗಳನ್ನು ಒಳಗೊಂಡಿದೆ.

Rs 8000 Discounty on Xiaomi Redmi Note 13 Pro Plus 5G Smartphone mrq

Xiaomi ತನ್ನ ಹೊಸ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್ Redmi Note 13 Pro Plus 5Gಯನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಸೂಪರ್ ಸ್ಮಾರ್ಟ್‌ಫೋನ್ ಹಲವು ವಿಶೇಷ ಮತ್ತು ವಿನೂತನ ಫೀಚರ್ಸ್‌ಗಳನ್ನು ಒಳಗೊಂಡಿದೆ.  ಇದೀಗ ಧಮಾಕಾ  ಆಫರ್ ನೀಡಿದ್ದು, 13 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ ಬೆಲೆಯಲ್ಲಿ 8 ಸಾವಿರ ರೂಪಾಯಿ ಕಡಿತಗೊಳಿಸಿದೆ. ಮಧ್ಯಮ ವರ್ಗದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ಗುಡ್‌ನ್ಯೂಸ್ ಆಗಲಿದೆ.  ನೀವು ಏನಾದ್ರೂ ಸ್ಮಾರ್ಟ್‌ಫೋನ್ ಖರೀದಿಗೆ ಪ್ಲಾನ್ ಮಾಡ್ಕೊಂಡಿದ್ದರೆ Redmi Note 13 Pro Plus 5Gಯ ಫೀಚರ್‌ಗಳನ್ನು ಗಮನಿಸಬಹುದಾಗಿದೆ. 

Redmi Note 13 Pro Plus 5G ಸ್ಮಾರ್ಟ್‌ಫೋನ್ MediaTek Dimensity 7200-Ultra ಪ್ರೊಸೆಸರ್‌ನಲ್ಲಿ ಬರಲಿದ್ದು, 4nm ಟೆಕ್ನಿಟ್  ಆಧಾರಿತವಾಗಿದೆ. ಇದರ ಜೊತೆಯ ಈ ಸ್ಮಾರ್ಟ್‌ಫೋನ್‌ನಲ್ಲಿ  Mali-G610 GPU ನೀಡಲಾಗಿದೆ.  8GB, 12GB ಮತ್ತು 16GB LPDDR5 RAM ಆಯ್ಕೆಗಳನ್ನು ನೀಡಲಾಗಿದೆ. ಈ 5G ಸ್ಮಾರ್ಟ್‌ಫೋನ್  Android 13 ಆಧಾರಿತವಾಗಿದ್ದು, MIUI 14 ಕಾರ್ಯನಿರ್ವಹಿಸುತ್ತದೆ. 

ಡಿಸ್‌ಪ್ಲೇ
ಈ 5G ಸ್ಮಾರ್ಟ್‌ಫೋನ್ 6.67 ಇಂಚಿನ CrystalRes AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 1.5K ರೆಸ್ಯೂಲೇಷನ್ ಮತ್ತು  120Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ.  1800 ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಹೊಂದಿದ್ದು, Corning Gorilla Glass Victusನ ಪ್ರೊಟೆಕ್ಷನ್ ನೀಡಲಾಗಿದೆ. ಈ ಡಿಸ್‌ಪ್ಲೇ Dolby Vision ಮತ್ತು HDR10+ ಸಪೋರ್ಟ್ ಮಾಡುತ್ತದೆ. 

ಕ್ಯಾಮೆರಾ
Redmi Note 13 Pro Plus 5G ಮೂರು ರಿಯರ್ ಕ್ಯಾಮೆರಾ ಒಳಗೊಂಡಿದೆ. ಪ್ರೈಮರಿ 200MPಯ ಕ್ಯಾಮೆರಾ OIS 
ಜೊತೆಯಲ್ಲಿ ಬರುತ್ತದೆ. ಎರಡನೇ ಕ್ಯಾಮೆರಾ 8MPಯ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಆಗಿದೆ. ಸೆಲ್ಫಿಗಾಗಿ 16MP ಕ್ಯಾಮೆರಾ ನೀಡಲಾಗಿದೆ.

ಇದನ್ನೂ ಓದಿ: ಜಸ್ಟ್‌ 599 ರೂಪಾಯಿಯಲ್ಲಿ  ಸಿಗ್ತಿದೆ ₹33,999 ಬೆಲೆಯ Vivo V40e 5G AI ಸ್ಮಾರ್ಟ್‌ಫೋನ್

ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್ 
Redmi Note 13 Pro Plus 5G ಸ್ಮಾರ್ಟ್‌ಫೋನ್  5000mAh ಪವರ್‌ಫುಲ್ ಬ್ಯಾಟರಿ ಜೊತೆ 120W ಹೈಪರ್ ಚಾರ್ಜ್ ಸಪೋರ್ಟ್ ಮಾಡುತ್ತದೆ. ಕೇವಲ 19 ನಿಮಿಷದಲ್ಲಿ ಈ ಬ್ಯಾಟರಿ ಫುಲ್ ಆಗುತ್ತದೆ. ಈ ಸ್ಮಾರ್ಟ್‌ಫೋನ್ ಜೊತೆ ಗ್ರಾಹಕರಿಗೆ  USB Type-C ಪೋರ್ಟ್ ಸಹ ನೀಡಲಾಗಿದೆ. ಕೆನೆಕ್ಟಿವಿಟಿಗಾಗಿ 5G, Wi-Fi 6, ಬ್ಲೂಟೂಥ್ 5.3 ಮತ್ತು  IR ಬ್ಲಾಸ್ಟರ್‌ನಂತಹ ಆಯ್ಕೆಗಳನ್ನು ನೀಡಲಾಗಿದೆ. 

ಬೆಲೆ ಮತ್ತು ಡಿಸ್ಕೌಂಟ್
Redmi Note 13 Pro Plus 5G ಸ್ಮಾರ್ಟ್‌ಫೋನಿನ ಆರಂಭದ ಬೆಲೆ  31,999 ರೂಪಾಯಿ ಆಗಿದೆ. ಇದೀಗ ಕಂಪನಿ 8000 ರೂ. ಡಿಸ್ಕೌಂಟ್ ನೀಡುತ್ತಿದೆ. ಈ ಡಿಸ್ಕೌಂಟ್ ಬಳಿಕ ಫೋನಿನ ಬೆಲೆ 23,999 ರೂಪಾಯಿ ಆಗುತ್ತದೆ. ಈ ಡಿಸ್ಕೌಂಟ್ ಕೇವಲ ಕೆಲ ದಿನಗಳಿಗೆ ಮಾತ್ರ  ಸೀಮಿತವಾಗಿದೆ.

ಇದನ್ನೂ ಓದಿ: Samsung 430MP ರಿಂಗ್ ಕ್ಯಾಮೆರಾವುಳ್ಳ 5G ಸ್ಮಾರ್ಟ್‌ಫೋನ್; 7300mAh ಬ್ಯಾಟರಿಯೊಂದಿಗೆ 512GB ಸ್ಟೋರೇಜ್

Latest Videos
Follow Us:
Download App:
  • android
  • ios