Asianet Suvarna News Asianet Suvarna News

ಸಖತ್‌ ಫೀಚರ್ಸ್‌ನೊಂದಿಗೆ ಪೋಕೋದ ಮೊದಲ ಸ್ಮಾರ್ಟ್‌ವಾಚ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ!

ಪೋಕೋ ತನ್ನ ಮೊದಲ ಸ್ಮಾರ್ಟ್ ವಾಚ್, ಪೋಕೋ ವಾಚನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಲ್ಲದೆ, ಕಂಪನಿಯು ಪೊಕೊ ಬಡ್ಸ್ ಪ್ರೊ ಟ್ರಯ ವೈಯರ್‌ ಲೆಸ್ ಪ್ರಾರಂಭಿಸಬಹುದು ಎಂದು ವರದಿಗಳು ಸೂಚಿಸಿವೆ
 

Poco Watch Buds Pro specifications and design leaked may launch soon mnj
Author
Bengaluru, First Published Apr 24, 2022, 10:32 AM IST

Poco Watch and  Poco Buds Pro: ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಪೊಕೊ ಮುಂಬರುವ ದಿನಗಳಲ್ಲಿ ತನ್ನ ಮೊದಲ ಸ್ಮಾರ್ಟ್‌ವಾಚ್ 'ಪೊಕೊ ವಾಚ್' ಬಿಡುಗಡೆ ಮಾಡಲಿದೆ. ಈ ಸ್ಟೈಲಿಶ್ ಸ್ಮಾರ್ಟ್‌ವಾಚ್‌ನ ಬಿಡುಗಡೆಯ ದಿನಾಂಕವನ್ನು ಕಂಪನಿ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲವಾದರೂ, ಅದರ ವೈಶಿಷ್ಟ್ಯಗಳು ಸೋರಿಕೆಯ ಮೂಲಕ ತಿಳಿದುಬಂದಿದೆ. ಪೋಕೋದ ಈ  ಸ್ಮಾರ್ಟ್ ವಾಚ್ ಆಪಲ್‌ ವಾಚ್‌ನಂತೇ ವೈಶಿಷ್ಟ್ಯಗಳನ್ನು ಪಡೆಯಲಿದೆ ಎಂದು ವರದಿಗಳು ಸೂಚಿಸಿವೆ. 

ಈ ಮೂಲಕ ಕಂಪನಿಯು ಸ್ಮಾರ್ಟ್‌ಫೋನ್‌ಗಳನ್ನೂ ಮೀರಿ ಭಾರತದಲ್ಲಿ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಯೋಜಿಸುತ್ತಿದೆ. ಕೋವಿಡ್‌ 19 ಕಾರಣದಿಂದಾಗಿ ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಪೋಕೋದ ಉತ್ಪನ್ನಗಳ ಬಿಡುಗಡೆಯಲ್ಲಿ ವಿಳಂಬವಾಗಿದೆ. ಹೀಗಾಗಿ ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿರುವ ಪೊಕೊ ಹೊಸ ಉತ್ಪನ್ನಗಳಲ್ಲಿ  ಪೊಕೊ ವಾಚ್  ಕೂಡ ಒಂದಾಗಿದೆ. 

ಇದನ್ನೂ ಓದಿ: Samsung Galaxy F12, Poco C31: ಇಲ್ಲಿವೆ ₹10,000 ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

ಕಂಪನಿಯು ತನ್ನ ಮೊದಲ ಸ್ಮಾರ್ಟ್‌ವಾಚ್‌ನ ನಿಖರವಾದ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿಲ್ಲ. ಏತನ್ಮಧ್ಯೆ, ಟಿಪ್‌ಸ್ಟರ್ ಆನ್‌ಲೀಕ್ಸ್ ಉಲ್ಲೇಖಿಸಿ ಡಿಜಿಟ್ ವರದಿಯು ಪೊಕೊ ವಾಚ್‌ನ ವಿಶೇಷಣಗಳನ್ನು ಬಹಿರಂಗಪಡಿಸಿದೆ. ಟಿಪ್‌ಸ್ಟರ್ ಪೊಕೊ ಬಡ್ಸ್ ಪ್ರೊನ ವಿನ್ಯಾಸ ರೆಂಡರ್ ಚಿತ್ರಗಳನ್ನು ಸಹ ಬಹಿರಂಗಪಡಿಸಿದ್ದಾರೆ, ಇದು ಈ ವರ್ಷದ ನಂತರವೂ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.

ಪೋಕೋ ವಾಚ್ ಫೀಚರ್ಸ್:‌ ಪೋಕೋ ವಾಚ್ ರೆಡ್‌ಮಿ ವಾಚ್ 2 ಲೈಟನ್ನು ಹೋಲುತ್ತದೆ. ಆದಾಗ್ಯೂ, ವಿಶೇಷಣಗಳು ರೆಡ್‌ಮಿ ಸ್ಮಾರ್ಟ್ ವಾಚ್‌ಗಿಂತ ಭಿನ್ನವಾಗಿವೆ. ವರದಿಯ ಪ್ರಕಾರ, ಸಾಧನವು 1.6-ಇಂಚಿನ AMOLED ಡಿಸ್ಪ್ಲೇಯೊಂದಿಗೆ ಸುತ್ತಲೂ ಸ್ವಲ್ಪ ಕರ್ವ್ನೊಂದಿಗೆ  ಬಿಡುಗಡೆಯಾಗಲಿದೆ. ಇದು 360 x 320 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುತ್ತದೆ.  ಸ್ಮಾರ್ಟ್‌ವಾಚ್‌ನಲ್ಲಿ ನ್ಯಾವಿಗೇಟ್ ಮಾಡಲು ಫ್ರೇಮ್‌ನ ಬಲ ತುದಿಯಲ್ಲಿ ಒಂದು ಬಟನ್ ಇರುತ್ತದೆ.

ನಿರೀಕ್ಷೆಯಂತೆ, ಪೋಕೋ ವಾಚ್ ಆರೋಗ್ಯ ಮತ್ತು ಫಿಟ್‌ನೆಸ್-ಸಂಬಂಧಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವರದಿಗಳ ಪ್ರಕಾರ, ಫೋನ್ ಟೋಟಲ್‌ ಸ್ಟೇಪ್ಸ್ ಮತ್ತು ಇತರ ಫಿಟ್‌ನೆಸ್ ಅಂಕಿಅಂಶಗಳೊಂದಿಗೆ ವರ್ಣರಂಜಿತ ವಾಚ್ ಫೇಸನ್ನು ಹೊಂದಿರುತ್ತದೆ. ಸ್ಮಾರ್ಟ್ ವಾಚ್ ಆಪ್ಟಿಕಲ್ ಹಾರ್ಟ್ ರೇಟ್ ಸೆನ್ಸರ್ ಮತ್ತು ಬ್ಲಡ್ ಆಕ್ಸಿಜನ್ (SpO2) ಸೆನ್ಸಾರ್ ಜೊತೆಗೆ ಬರಲಿದೆ. ಇದು ನೀರಿನ ಪ್ರತಿರೋಧಕ್ಕಾಗಿ 5ATM ರೇಟಿಂಗ್ ಸಹ ಹೊಂದಿರುತ್ತದೆ.

ಇದನ್ನೂ ಓದಿ: 5,000mAh ಬ್ಯಾಟರಿ, ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ Poco X4 Pro 5G ಭಾರತದಲ್ಲಿ ಬಿಡುಗಡೆ!

ಪೋಕೋ ತನ್ನ ಸ್ಮಾರ್ಟ್ ವಾಚ್‌ನಲ್ಲಿ 225 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಸಾಧನವು ಸುಮಾರು 31 ಗ್ರಾಂ ತೂಗುತ್ತದೆ ಮತ್ತು 39.1 x 34.4 x 9.98mm ಅಳತೆಯನ್ನು ಹೊಂದಿರುತ್ತದೆ. ಆನ್‌ಲೀಕ್ಸ್ ಪ್ರಕಾರ, ಪೊಕೊ ವಾಚ್ ಕಪ್ಪು, ನೀಲಿ ಮತ್ತು ಐವರಿ ಬಣ್ಣಗಳಲ್ಲಿ ಪಾದಾರ್ಪಣೆ ಮಾಡಲಿದೆ

ಪೊಕೊ ಬಡ್ಸ್ ಪ್ರೊ ವಿನ್ಯಾಸ:‌ ಟಿಪ್‌ಸ್ಟರ್ ಪೊಕೊ ಬಡ್ಸ್ ಪ್ರೊ (ಜೆನ್‌ಶಿನ್ ಇಂಪ್ಯಾಕ್ಟ್ ಎಡಿಷನ್) ವಿನ್ಯಾಸದ ಚಿತ್ರಗಳನ್ನು ಸಹ ಸೋರಿಕೆ ಮಾಡಿದ್ದಾರೆ. ಪೊಕೊ ಬಡ್ಸ್ ಪ್ರೊ ಇಯರ್‌ಬಡ್‌ಗಳು ಮತ್ತು ಚಾರ್ಜಿಂಗ್ ಕೇಸ್ ಕೆಂಪು ಬಣ್ಣದ ಕೇಸ್‌ನಲ್ಲಿ ಬರಲಿದೆ ಎಂದು ಚಿತ್ರಗಳು ಬಹಿರಂಗಪಡಿಸುತ್ತವೆ.

ಇಯರ್‌ಬಡ್‌ಗಳು ಇನ್-ಇಯರ್ ವಿನ್ಯಾಸವನ್ನು ಹೊಂದಿವೆ. ಪ್ರತಿ ಇಯರ್‌ಬಡ್ ಉತ್ತಮ ಹಿಡಿತ ಮತ್ತು ಶಬ್ದ ರದ್ದತಿಗಾಗಿ ಸಿಲಿಕೋನ್ ಇಯರ್ ಟಿಪ್ಸ್‌ಗಳನ್ನು ಹೊಂದಿದೆ. ಇಯರ್‌ಬಡ್‌ಗಳು ನೀರಿನ ಪ್ರತಿರೋಧಕ್ಕಾಗಿ IPX4 ರೇಟಿಂಗ್‌ನೊಂದಿಗೆ ಬರುತ್ತವೆ.

ಪೋಕೋ ಬಡ್ಸ್ ಪ್ರೊ 35dB ಸಕ್ರಿಯ ಶಬ್ದ ರದ್ದತಿ (ANC) ಯೊಂದಿಗೆ ಬರುತ್ತದೆ. ಡ್ಯುಯಲ್ ಟ್ರಾನ್ಸ್‌ಪರನ್ಸಿ ಮೋಡನ್ನು ಸಹ ಬೆಂಬಲಿಸುತ್ತವೆ. ಇಯರ್‌ಬಡ್‌ಗಳು 28 ಗಂಟೆಗಳ (ಚಾರ್ಜಿಂಗ್ ಕೇಸ್ ಸೇರಿದಂತೆ) ಕ್ಲೈಮ್ ಮಾಡಲಾದ ಬ್ಯಾಟರಿ ಅವಧಿಯನ್ನು ಸಹ ಹೊಂದಿರುತ್ತದೆ.

Follow Us:
Download App:
  • android
  • ios