ಮುಂಬೈ(ಜ.13): ಲ್ಯಾಪ್‌ಟಾಪ್, ಕಂಪ್ಯೂಟರ್‌ನಲ್ಲಿ HP(Hewlett-Packard) ಕಂಪನಿ ಜನಮನ್ನಣೆ ಗಳಿಸಿದೆ. ಗುಣಮಟ್ಟತೆಯಲ್ಲಿ ರಾಜಿಯಾಗದ ಹೆಚ್‌ಪಿ, ಪ್ರತಿ ಭಾರಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬರುತ್ತಿದೆ. ಇದೀಗ ಮುಂದಿನ ಪೀಳಿಗೆಯ ಅಪ್‌ಡೇಟೆಡ್ ವರ್ಶನ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. 

ಇದನ್ನೂ ಓದಿ:ಒನ್‌ಪ್ಲಸ್ ಟಿವಿಯಲ್ಲಿ ಹೊಸ ಸೌಲಭ್ಯ, ಕ್ಯಾಶ್‌ಬ್ಯಾಕ್ ಆಫರ್

ಮುಂದಿನ ಪೀಳಿಗೆಯ ಅಪ್‌ಡೇಟೆಡ್ ವರ್ಶನ್‌ನ ಸ್ಪೆಕ್ಟರ್‌  360* 13 ಕನ್ವರ್ಟೆಬಲ್ ಲ್ಯಾಪ್‌ಟಾಪ್ ಅನ್ನು ಹೆಚ್‌ಪಿ ಬಿಡುಗಡೆ ಮಾಡಿದೆ. ಇದರ ಹಳೆಯ ವರ್ಶನ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಪ್ರೀಮಿಯಂ ವಿನ್ಯಾಸದ ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ 10 ಪ್ರೊಸೆಸರ್ ಹೊಂದಿದೆ. 

ಹೀಗಾಗಿ ವೇಗವಾಗಿ ಕೆಲಸ ಮಾಡಬಲ್ಲದು. ಹಿಂದಿನ ವರ್ಶನ್‌ಗಿಂತ  ಶೇ.13 ರಷ್ಟು ಕಿರಿದಾಗಿದೆ. ಐರಿಸ್ ಪ್ಲಸ್ ಗ್ರಾಪಿಕ್ಸ್ ಹೊಂದಿರೋದು ಮತ್ತೊಂದು ವಿಶೇಷ. 4 ಕೆ ಒಎಲ್‌ಇಡಿ ಸಪೋರ್ಟ್‌ನೊಂದಿಗೆ ಎಚ್‌ಡಿ ಡಿಸ್‌ಪ್ಲೇ ಇದೆ. 13.3 ಇಂಚಿನ ಡಿಸ್ಪ್ಲೇ ಇದೆ. ಒಮ್ಮೆ ಚಾರ್ಜ್ ಮಾಡಿದರೆ 22 ಗಂಟೆಗಳ ಕಾಲ ಬಳಸಬಹುದು. ಬೆಲೆ: 99, 990 ರು.