ಸ್ಮಾರ್ಟ್‌ಫೋನ್‌ಗಳ ಯುಗದಲ್ಲಿ, ಮೂಲಭೂತ ಕಾರ್ಯಗಳಿರುವ 'ಡಂಬ್ ಫೋನ್‌'ಗಳು ಮತ್ತೆ ಜನಪ್ರಿಯತೆ ಗಳಿಸುತ್ತಿವೆ. ಡಿಜಿಟಲ್ ಓವರ್‌ಲೋಡ್ ಕಡಿಮೆ ಮಾಡಲು, ಬ್ಯಾಟರಿ ಬಾಳಿಕೆ ಹೆಚ್ಚಿಸಲು, ಕೈಗೆಟಕುವ ಬೆಲೆ, ಗೌಪ್ಯತೆ ಹೆಚ್ಚಿಸಲು ಮತ್ತು ಸರಳ ಸಂವಹನಕ್ಕಾಗಿ ಯುವಜನರು ಇವುಗಳತ್ತ ಮುಖ ಮಾಡುತ್ತಿದ್ದಾರೆ. ಈ ಟ್ರೆಂಡ್ 2025ರಲ್ಲಿ ಮತ್ತಷ್ಟು ಹೆಚ್ಚಲಿದೆ.

ಇಂದು ಎಂಥವರ ಬಳಿಯೂ ಸ್ಮಾರ್ಟ್‌ಫೋನ್‌ ಇರುವುದು. ಹೈಟೆಕ್ ಸ್ಮಾರ್ಟ್‌ಫೋನ್‌ಗಳ ಈ ಯುಗದಲ್ಲಿ, ಸಿಂಪಲ್‌ ಬೇಸಿಕ್‌ ಸೆಟ್‌ ಅಥವಾ “ಡಂಬ್ ಫೋನ್‌ಗಳು” ( DumbPhones ) ಮತ್ತೆ ಬೇಡಿಕೆ ಹೆಚ್ಚಿಸಿಕೊಂಡಿವೆ. ಕೌಂಟರ್‌ ಪಾಯಿಂಟ್ ರಿಸರ್ಚ್‌ನ 2023 ರ ವರದಿಯ ಪ್ರಕಾರ, ಯುವ ಜನರು, ವಿಶೇಷವಾಗಿ zen c ಮತ್ತು ಮಿಲೇನಿಯಲ್‌ಗಳು ಈ ಫೋನ್‌ ಬಳಸುತ್ತಿದ್ದಾರೆ. ಹಾಗಾದರೆ ಡಂಬ್ ಫೋನ್‌ಗಳು ಯಾವುವು, ಯಾಕೆ ಇವು 2025 ರಲ್ಲಿ ಜನಪ್ರಿಯವಾಗುತ್ತಿವೆ?

ಡಂಬ್ ಫೋನ್‌ಗಳು ಎಂದರೇನು?
ಡಂಬ್ ಫೋನ್‌ಗಳು ಕರೆ ಮಾಡುವುದು ಮತ್ತು ಸಂದೇಶ ಕಳುಹಿಸುವುದು ಮುಂತಾದ ಮೂಲಭೂತ ಕೆಲಸಗಳನ್ನು ಮಾತ್ರ ಮಾಡುತ್ತವೆ. ಸ್ಮಾರ್ಟ್‌ಫೋನ್‌ಗಳಂತೆ, ಇವು ಸೋಶಿಯಲ್‌ ಮೀಡಿಯಾ ಆಪ್‌ಗಳು, ಸೂಪರ್ ಕ್ಯಾಮೆರಾಗಳು, ಗೇಮಿಂಗ್ ಸಾಮರ್ಥ್ಯ ಅಥವಾ ವಿಶಾಲ ಇಂಟರ್ನೆಟ್ ಬ್ರೌಸಿಂಗ್ ಆಯ್ಕೆಗಳು ಇರೋದಿಲ್ಲ. ಇವು ಡಿಜಿಟಲ್ ಓವರ್‌ಲೋಡ್, ಸೀಕ್ರೆಟ್, ಕೈಗೆಟುಕುವ ಬೆಲೆ‌,‌ ಹೆಚ್ಚು ಬ್ಯಾಟರಿ ಬ್ಯಾಕಪ್‌ನಂತಹ ಆಧುನಿಕ ಸಮಸ್ಯೆಗಳೇ ಇರೋದಿಲ್ಲ.

ಡಂಬ್ ಫೋನ್‌ಗಳ ಡಿಮ್ಯಾಂಡ್‌ಗೆ ಐದು ಕಾರಣಗಳು
ಕಡಿಮೆ ಫೀಚರ್ಸ್
ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿರಂತರ ನೋಟಿಫಿಕೇಶನ್ಸ್, ಪದೇ ಪದೇ ಸ್ಕ್ರಾಲಿಂಗ್, FOMO (ಫಿಯರ್ ಆಫ್ ಮಿಸ್ಸಿಂಗ್ ಔಟ್) ಉಂಟುಮಾಡುವ ಆಪ್‌ಗಳು ಆತಂಕ, ಖಿನ್ನತೆ, ಮಾನಸಿಕ ದಣಿವನ್ನು ಉಂಟುಮಾಡಬಹುದು. ಡಂಬ್ ಫೋನ್‌ಗಳು ಈ ಸಮಸ್ಯೆಗಳನ್ನು ನಿವಾರಣೆ ಮಾಡುತ್ತವೆ.

ಕೇವಲ ಫೋನ್, ಮೆಸೇಜ್, ಅಲರ್ಟ್, ಸೀಮಿತ ಹಾಟ್‌ಸ್ಪಾಟ್ ಸಾಮರ್ಥ್ಯಗಳನ್ನು ಒಳಗೊಂಡಿದೆ. ಯಾವುದೇ ಸೋಶಿಯಲ್‌ ಮೀಡಿಯಾ, ಗೇಮ್ ಅಥವಾ ಇಮೇಲ್ ಇಲ್ಲ. ಇದು ಡಿಜಿಟಲ್ ಮಿನಿಮಲಿಸಂ‌ ಆಗಿದೆ. ಇದು ತಂತ್ರಜ್ಞಾನವನ್ನು ಹೆಚ್ಚು ಜಾಗೃತವಾಗಿ ಬಳಸಲು ಪ್ರೋತ್ಸಾಹಿಸುತ್ತದೆ. 2024 ರಲ್ಲಿ “ಡೋಪಮೈನ್ ಡಿಟಾಕ್ಸ್” ಯುವ ವಯಸ್ಕರಲ್ಲಿ ಜನಪ್ರಿಯವಾಯಿತು.


ಬ್ಯಾಟರಿ ಬ್ಯಾಕಪ್
ಸ್ಮಾರ್ಟ್‌ಫೋನ್‌ಗಳ ಹೈ-ರೆಸಲ್ಯೂಶನ್ ಸ್ಕ್ರೀನ್, ಯಾವಾಗಲೂ ಆನ್‌ಲೈನ್‌ನಲ್ಲಿ ಇರುವುದು, ಹಲವಾರು ಆಪ್‌ಗಳಿಂದಾಗಿ ನಿತ್ಯವೂ ಚಾರ್ಜಿಂಗ್ ಮಾಡಬೇಕಾಗುವುದು. ಆದರೆ, ಡಂಬ್ ಫೋನ್‌ಗಳು ಜಾಸ್ತಿ ಬ್ಯಾಟರಿ ಬ್ಯಾಕಪ್ ಹೊಂದಿವೆ.
ಉದಾಹರಣೆಗೆ, ನೋಕಿಯಾ 105 ಒಂದೇ ಚಾರ್ಜ್‌ನಲ್ಲಿ 18 ದಿನಗಳವರೆಗೆ ಸ್ಟ್ಯಾಂಡ್‌ಬೈಯಲ್ಲಿ ಇರುತ್ತದೆ. ಇದು ಪ್ರಯಾಣಿಕರಿಗೆ, ಹೊರಗಡೆ ಇರುವವರಿಗೆ ಸಹಾಯ ಮಾಡುತ್ತದೆ. ಇವು ಪರಿಸರ ಸ್ನೇಹಿಯಾಗಿವೆ.


ಕೈಗೆಟುಕುವ ಬೆಲೆ:
ಸ್ಮಾರ್ಟ್‌ಫೋನ್‌ಗಳ ಬೆಲೆ ಸಾಮಾನ್ಯವಾಗಿ 10000 ಸಾವಿರ ರೂಪಾಯಿಗಿಂತ ಹೆಚ್ಚಿರುತ್ತವೆ, ಆದರೆ ಡಂಬ್ ಫೋನ್‌ಗಳು ಕೇವಲ ಒಂದು ಸಾವಿರ ರೂಪಾಯಿಯಿಂದ ಆರಂಭವಾಗುತ್ತವೆ. ಮೂಲ ಕ್ಯಾಮೆರಾ ಅಥವಾ ಸೀಮಿತ ಇಂಟರ್ನೆಟ್ ಪ್ರವೇಶವಿರುವ ಮಧ್ಯಮ ಶ್ರೇಣಿಯ ಡಂಬ್ ಫೋನ್‌ಗಳ ಬೆಲೆ ಒಂದು ಸಾವಿರ ರೂಪಾಯಿಯಿಂದ ರಿಂದ ನಾಲ್ಕು ಸಾವಿರ ರೂಪಾಯಿಗಳ ಒಳಗಡೆ ಇರುತ್ತವೆ. 

ಇದರ ಜೊತೆಗೆ, ಡಂಬ್ ಫೋನ್‌ಗಳು ತಿಂಗಳಿಗೆ ಕೇವಲ 900 ರೂಪಾಯಿ ಒಳಗಡೆ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತವೆ. 2024 ರಿಂದ ಆರಂಭವಾದ ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ, ವಯಸ್ಸಾದವರು, ವಿದ್ಯಾರ್ಥಿಗಳು, ಕಡಿಮೆ ಆದಾಯವುಳ್ಳವರಿಗೆ ಇದು ಆಕರ್ಷಕವಾಗಿದೆ.

ಗೌಪ್ಯತೆ ಮತ್ತು ಸುರಕ್ಷತೆ:
ಸ್ಮಾರ್ಟ್‌ಫೋನ್‌ಗಳು ಡೇಟಾ ಸಂಗ್ರಹ, ಲೊಕೇಶನ್ ಮತ್ತು ಆಪ್‌ಗಳ ಅನಗತ್ಯ ಅನುಮತಿಗಳಿಂದಾಗಿ ಸೆಕ್ಯುರಿಟಿಗೆ ಸಂಬಂಧಿಸಿದ ಚರ್ಚೆಗೆ ಒಳಗಾಗಿವೆ. ಸೆಕ್ಯೂರಿಟಿ ಕಾಳಜಿಗಳು ಹೆಚ್ಚಾಗಿರುವುದರಿಂದ, ಸೆಕ್ಯೂರಿಟಿ ಆಧಾರಿತ ಫೋನ್‌ಗಳಿಗೆ ಬೇಡಿಕೆ ಏರಿಕೆಯಾಗಿದೆ. ಡಂಬ್ ಫೋನ್‌ಗಳು ವ್ಯಾಪಕ ಆಪ್ ಇಕೋಸಿಸ್ಟಮ್ ಮತ್ತು ಸೀಮಿತ ಇಂಟರ್ನೆಟ್ ಸಂಪರ್ಕ ಇಲ್ಲದಿರುವುದರಿಂದ ಸೀಕ್ರೇಟ್ ಸಮಸ್ಯೆಗಳನ್ನು ಸಹಜವಾಗಿ ಕಡಿಮೆಗೊಳಿಸುತ್ತವೆ.

ಪಂಕ್ಟ್ MP02 ರಂತಹ ಕೆಲವು ಸುಧಾರಿತ ಡಂಬ್ ಫೋನ್‌ಗಳು ಸಿಗ್ನಲ್ ಪ್ರೋಟೋಕಾಲ್ ಮೂಲಕ ಸುರಕ್ಷಿತ, ಎನ್‌ಕ್ರಿಪ್ಟೆಡ್ ಫೋನ್‌ ಕಾಲ್ ಮತ್ತು ಮೆಸೇಜ್‌ಗಳನ್ನು ಒದಗಿಸುತ್ತವೆ. ಇದು 4G LTE ಸಂಪರ್ಕವನ್ನು ಟೆಥರಿಂಗ್‌ಗೆ ಬೆಂಬಲಿಸುತ್ತದೆ, ಆದರೆ ವಾಟ್ಸಾಪ್ ಮತ್ತು ಸೋಶಿಯಲ್‌ ಮೀಡಿಯಾ ಆಪ್‌ಗಳನ್ನು ಉದ್ದೇಶಪೂರ್ವಕವಾಗಿ ಒಳಗೊಂಡಿರುವುದಿಲ್ಲ.

ಫೋನ್ ಕರೆ, ಮೆಸೇಜ್
ಆಧುನಿಕ ಸ್ಮಾರ್ಟ್‌ಫೋನ್‌ಗಳು ವಾಟ್ಸಾಪ್, ಸ್ಲಾಕ್, ಮೆಸೆಂಜರ್ ಮುಂತಾದ ವಿವಿಧ ಆಪ್‌ಗಳ ಮೂಲಕ ಸಂವಹನ ಹೆಚ್ಚು ಮಾಡುತ್ತವೆ. ಇದು ಬಹುಕಾರ್ಯದ ಒತ್ತಡಕ್ಕೆ ಕಾರಣವಾಗುತ್ತದೆ. ಡಂಬ್ ಫೋನ್‌ಗಳು ಕೇವಲ ಫೋನ್‌ ಕಾಲ್‌, ಮೆಸೇಜ್‌ಗಳಂತಹ ಅಗತ್ಯ ಕಾರ್ಯಗಳನ್ನು ಒದಗಿಸುವ ಮೂಲಕ ಸಂವಾದವನ್ನು ಸರಳ ಮಾಡುತ್ತವೆ. 
ಕುಟುಂಬಗಳು ತಮ್ಮ ಮಕ್ಕಳಿಗೆ ಸ್ಕ್ರೀನ್ ಸಮಯವನ್ನು ಮಿತಿಗೊಳಿಸಲು, ಮೂಲಭೂತ ಸಂಪರ್ಕವನ್ನು ಖಾತ್ರಿಪಡಿಸಲು ಡಂಬ್ ಫೋನ್‌ಗಳನ್ನು ಆಯ್ಕೆ ಮಾಡುತ್ತಿವೆ. ವಯಸ್ಕರೂ ಸಹ ಈ ಸಿಂಪಲ್‌ ಫೋನ್‌ಗಳಿಂದ ಆಕರ್ಷಿತರಾಗುತ್ತಾರೆ.


ಮುಂದಿನ ದಿನಗಳಲ್ಲಿ: ಹೈಬ್ರಿಡ್ ಫೋನ್ ಬಳಕೆಯ ಏರಿಕೆ
ಡಂಬ್ ಫೋನ್‌ಗಳು ಕೇವಲ ಹಳೆಯ ನೆನಪಿನ ವಸ್ತುಗಳಲ್ಲ; ಇವು ಹೈಪರ್‌ಕನೆಕ್ಟೆಡ್ ಯುಗದಲ್ಲಿ ಉದ್ದೇಶಪೂರ್ವಕ ಜೀವನಕ್ಕೆ ಶಕ್ತಿಯುತ ಸಾಧನಗಳಾಗಿವೆ. ಹೆಚ್ಚಿನ ಫೋನ್ ಬಳಕೆದಾರರು ಹೈಬ್ರಿಡ್ ವಿಧಾನವನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ.