ಗದಗ(ಅ.27): ಬೆಣ್ಣಿಹಳ್ಳದ ಪ್ರವಾಹದಲ್ಲಿ ಇಬ್ಬರು ಕೊಚ್ಚಿ ಹೋದ ಘಟನೆ ಶನಿವಾರ ಸಂಜೆ ಗದಗ ಜಿಲ್ಲೆ ರೋಣ ತಾಲೂಕಿನ ಮಾಳವಾಡ ಸಮೀಪದಲ್ಲಿ ನಡೆದಿದೆ. ಪ್ರವಾಹದಲ್ಲಿ ಕೊಚ್ಚಿ ಹೋದವರನ್ನು ನರಗುಂದ ತಾಲೂಕಿನ ಹದ್ಲಿ ಗ್ರಾಮದ ಕಳಸಪ್ಪ ಬೈಲಪ್ಪ ವಿಟ್ಟಪ್ಪನವರ(30), ಈರಣ್ಣ ಶಿವರುದ್ರಪ್ಪ ವಿಟ್ಟಪ್ಪನವರ(15) ಎಂದು ಗುರುತಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಳವಾಡ ಗ್ರಾಮದ ಬಳಿಯ ಮಲಪ್ರಭಾ ಮತ್ತು ಬೆಣ್ಣಿಹಳ್ಳದ ಸಂಗಮ ಸ್ಥಳದಲ್ಲಿ ನೀರು ತರಲು ಹೋದಾಗ ಈ ದುರ್ಘಟನೆ ನಡೆದಿದೆ. ಪ್ರತಿ ವರ್ಷದಂತೆ ದೀಪವಾಳಿಯ ವಿಶೇಷ ಪೂಜೆಗೆ ಬೇಕಾಗುವ ನೀರು ತರಲು ಹೋದಾಗ ಘಟನೆ ಸಂಭವಿಸಿದೆ. ರೋಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಶೋಧಕಾರ್ಯ ಆರಂಭಿಸಿದ್ದಾರೆ.