Asianet Suvarna News Asianet Suvarna News

ಸೂಪರ್‌ ಕಪ್‌ ಫುಟ್ಬಾ​ಲ್‌ ಟೂರ್ನಿಗೆ ಇಂದು ಚಾಲ​ನೆ; BFC ಸೇರಿ 16 ತಂಡಗಳು ಭಾಗಿ

ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿ ಇಂದಿನಿಂದ ಆರಂಭ
3ನೇ ಆವೃತ್ತಿಯ ಟೂರ್ನಿಗೆ ಕೇರ​ಳದ ಮಂಜೇರಿ ಹಾಗೂ ಕಲ್ಲಿ​ಕೋ​ಟೆ ಆತಿಥ್ಯ
ಬೆಂಗ​ಳೂರು ಎಫ್‌ಸಿ ಸೇರಿ​ದಂತೆ 16 ತಂಡ​ಗಳು ಸ್ಪರ್ಧೆ

Super Cup Football tournament begins today kvn
Author
First Published Apr 8, 2023, 10:07 AM IST

ಮಂಜೇ​ರಿ​(ಏ.08): 4 ವರ್ಷ​ಗಳ ಬಳಿಕ ಮತ್ತೊಮ್ಮೆ ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿ ಶನಿ​ವಾ​ರ​ದಿಂದ ಆರಂಭ​ಗೊ​ಳ್ಳ​ಲಿದ್ದು, ಮಾಜಿ ಚಾಂಪಿ​ಯನ್‌ ಬೆಂಗ​ಳೂರು ಎಫ್‌ಸಿ ಸೇರಿ​ದಂತೆ 16 ತಂಡ​ಗಳು ಸ್ಪರ್ಧಿ​ಸ​ಲಿದೆ. 3ನೇ ಆವೃತ್ತಿಯ ಟೂರ್ನಿಗೆ ಕೇರ​ಳದ ಮಂಜೇರಿ ಹಾಗೂ ಕಲ್ಲಿ​ಕೋ​ಟೆ ಆತಿಥ್ಯ ವಹಿ​ಸ​ಲಿವೆ.

ಟೂರ್ನಿ​ಯಲ್ಲಿ ಐಎಸ್‌ಎಲ್‌ನ 11, ಐ-ಲೀಗ್‌ನ 5 ತಂಡಗಳು ಭಾಗಿಯಾಗ​ಲಿ​ದ್ದು, ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಸೆಮಿಫೈನಲ್‌ ಪ್ರವೇಶಿಲಿದೆ. ಫೈನಲ್‌ ಪಂದ್ಯ ಏಪ್ರಿಲ್‌ 25ರಂದು ನಡೆ​ಯ​ಲಿ​ದೆ. ಬಿಎ​ಫ್‌ಸಿ ತಂಡ ‘ಎ’ ಗುಂಪಿ​ನಲ್ಲಿ ಸ್ಥಾನ ಗಿಟ್ಟಿ​ಸಿ​ಕೊಂಡಿ​ದ್ದು, ಆರಂಭಿಕ ಪಂದ್ಯ​ದಲ್ಲಿ ಶನಿ​ವಾರ ಶ್ರೀನಿಧಿ ಡೆಕ್ಕನ್‌ ಜೊತೆ ಸೆಣ​ಸಾ​ಡ​ಲಿದೆ. ಬಳಿಕ ಏ.12ಕ್ಕೆ ರೌಂಡ್‌​ಗ್ಲಾಸ್‌ ಪಂಜಾಬ್‌ ಎಫ್‌​ಸಿ, ಏಪ್ರಿಲ್‌ 16ರಂದು ಸಾಂಪ್ರ​ದಾ​ಯಿಕ ಬದ್ಧ​ವೈರಿ ಕೇರಳ ಬ್ಲಾಸ್ಟ​ರ್ಸ್‌ ವಿರುದ್ಧ ಆಡಲಿದೆ.

ಪಂದ್ಯ: ಸಂಜೆ 5ಕ್ಕೆ
ಪ್ರಸಾರ: ಸೋನಿ ಸ್ಪೋರ್ಟ್ಸ್‌/ಫ್ಯಾನ್‌ಕೋಡ್‌ ಆ್ಯಪ್‌

‘ಚಾಂಪಿಯನ್ಸ್‌’ ಜೆರ್ಸಿಯನ್ನು ಬಡ ಮಕ್ಕ​ಳಿಗೆ ಕೊಟ್ಟ ಬಿಎ​ಫ್‌​ಸಿ!

ಬೆಂಗ​ಳೂ​ರು: ಐಎಸ್‌ಎಲ್‌ ಫೈನಲಲ್ಲಿ ತಂಡ ಗೆದ್ದರೆ ಆಟಗಾರರು ಧರಿಸಲು ಬೆಂಗ​ಳೂರು ಎಫ್‌ಸಿ ತಂಡ ತಯಾ​ರಿ​ಸಿದ್ದ ‘ಚಾಂಪಿಯನ್ಸ್‌​’ ಜೆರ್ಸಿ​ಯನ್ನು ಫ್ರಾಂಚೈ​ಸಿಯು ವ್ಯರ್ಥ ಮಾಡದೆ ಬಡ ಮಕ್ಕ​ಳಿಗೆ ವಿತ​ರಿ​ಸಿದ್ದು, ಸಾಮಾ​ಜಿಕ ತಾಣ​ಗ​ಳಲ್ಲಿ ಅಭಿಮಾನಿಗಳ ಮೆಚ್ಚು​ಗೆಗೆ ಪಾತ್ರ​ವಾ​ಗಿದೆ. ಶುಕ್ರ​ವಾರ ನಗರದ ಕೆಲ ಬಡ ಮಕ್ಕ​ಳಿಗೆ ತಂಡದ ನಾಯಕ ಸುನಿಲ್‌ ಚೆಟ್ರಿ, ಗೋಲ್‌​ಕೀ​ಪರ್‌ ಗುರ್‌​ಪ್ರೀ​ತ್‌ ಜೆರ್ಸಿ ವಿತ​ರಿ​ಸಿ​ದರು. 

Appachettolanda Hockey Festival: ಕುಲ್ಲೇಟಿರ, ಕುಪ್ಪಂಡ ಫೈನಲ್‌ಗೆ ಲಗ್ಗೆ

ಉಳಿದ ಜೆರ್ಸಿ​ಗ​ಳ​ನ್ನು ಬೆಂಗ​ಳೂ​ರಿ​ನಾ​ದ್ಯಂತ ವಿವಿಧ ಆಸ್ಪತ್ರೆ, ವೃದ್ಧಾ​ಶ್ರಮ, ಅನಾ​ಥಾ​ಶ್ರ​ಮ​ಗ​ಳಿ​ಗೂ ಬಿಎ​ಫ್‌ಸಿ ವಿತ​ರಿ​ಸ​ಲಿ​ದೆ. ಸುಮಾರು 150ರಷ್ಟು ಜೆರ್ಸಿ​ಯನ್ನು ಐಎ​ಸ್‌​ಎಲ್‌ ಫೈನ​ಲ್‌ಗೂ ಮುನ್ನ ಬಿಎ​ಫ್‌ಸಿ ಸಿದ್ಧಗೊಳಿಸಿತ್ತು. ಆದರೆ ತಂಡ ಫೈನ​ಲ್‌​ನಲ್ಲಿ ಎಟಿ​ಕೆಗೆ ಶರ​ಣಾ​ಗಿತ್ತು.

ಬ್ಯಾಡ್ಮಿಂಟನ್‌: ಸೆಮೀಸ್‌ಗೇರಿದ ಭಾರತದ ಪ್ರಿಯಾನ್ಶು

ಆಲಿರ್ಯಾನ್ಸ್‌: ಭಾರತದ ಯುವ ಶಟ್ಲರ್‌ ಪ್ರಿಯಾನ್ಶು ರಾಜಾವತ್ ಆರ್ಲಿಯಾನ್ಸ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ವಿಶ್ವ ರ‍್ಯಾಂಕಿಂಗ್‌‌ನಲ್ಲಿ 58ನೇ ಸ್ಥಾನದಲ್ಲಿರುವ 21 ವರ್ಷದ ಪ್ರಿಯಾನ್ಶು, ಶುಕ್ರವಾರ ಪುರುಷರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚಿ ಯು ಡೆನ್ ವಿರುದ್ದ 21-18, 21-18 ನೇರ ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಸೆಮೀಸ್‌ನಲ್ಲಿ ಅವರು ಶನಿವಾರ ಐರ್ಲೆಂಡ್‌ನ ನಾಟ್‌ ನ್ಯುಯೆನ್‌ ವಿರುದ್ದ ಸೆಣಸಾಡಲಿದ್ದಾರೆ.

ಭಾರತ ಹಾಕಿ ತಂಡಗಳಿಗೆ ಹೆಚ್ಚುವರಿ ಕೋಚ್‌ ನೇಮಕ

ನವದೆಹಲಿ: ಏಷ್ಯನ್‌ ಗೇಮ್ಸ್‌ಗೂ ಮುನ್ನ ಭಾರತ ಹಾಕಿ ತಂಡಗಳಿಗೆ ಹಾಕಿ ಇಂಡಿಯಾ ಹೆಚ್ಚುವರಿ ಕೋಚ್‌ಗಳನ್ನು ನೇಮಿಸಿದೆ. ಮಹಿಳಾ ತಂಡದ ವಿಶ್ಲೇಷಣಾತ್ಮಕ ಕೋಚ್ ಆಗಿ ಆಸ್ಟ್ರೇಲಿಯಾದ ಆಂಥೋನಿ ಫ್ಯಾರ್ರಿ, ಪುರುಷರ ತಂಡಕ್ಕೆ ದಕ್ಷಿಣ ಆಫ್ರಿಕಾದ ರೆಡ್ ಹಾಲೈಟ್‌ ನೇಮಕವಾಗಿದ್ದಾರೆ.

Follow Us:
Download App:
  • android
  • ios