ಸೂಪರ್ ಕಪ್: ಜೆಎಫ್ಸಿ ಮಣಿಸಿ ಫೈನಲ್‌ಗೆ ಬಿಎಫ್ಸಿ ಲಗ್ಗೆ
ಬೆಂಗಳೂರು ಎಫ್‌ಸಿ ತಂಡವು ಸೂಪರ್ ಕಪ್ ಫೈನಲ್‌ಗೆ ಲಗ್ಗೆ
ಸೆಮಿಫೈನಲ್ನಲ್ಲಿ ಜಮ್ಶೆಡ್ಪುರ ಎಫ್‌ಸಿ ವಿರುದ್ಧ ಜಯಭೇರಿ
ಏಪ್ರಿಲ್ 25ರಂದು ನಡೆಯಲಿರುವ ಫೈನಲ್ ಪಂದ್ಯ
ಕಲ್ಲಿಕೋಟೆ(ಏ.22): 2018ರ ಚೊಚ್ಚಲ ಆವೃತ್ತಿಯ ಚಾಂಪಿಯನ್ ಬೆಂಗಳೂರು ಎಫ್‌ಸಿ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ 2ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ 3ನೇ ಆವೃತ್ತಿಯ ಟೂರ್ನಿಯ ಸೆಮಿಫೈನಲ್ನಲ್ಲಿ ಜಮ್ಶೆಡ್ಪುರ ಎಫ್‌ಸಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತು.
ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದ ಜಮ್ಶೆಡ್ಪುರಕ್ಕೆ ಬಿಎಫ್ಸಿ ಪಂದ್ಯದುದ್ದಕ್ಕೂ ಪ್ರಬಲ ಪೈಪೋಟಿ ನೀಡಿತು. ಮೊದಲಾರ್ಧ ಯಾವುದೇ ಗೋಲುಗಳಿಲ್ಲದೇ ಮುಕ್ತಾಯಗೊಂಡರೆ, 67ನೇ ನಿಮಿಷದಲ್ಲಿ ಜಯೇಶ್ ರಾಣೆ ಬಾರಿಸಿದ ಹೆಡರ್ ಗೋಲು ಬಿಎಫ್ಸಿ ಮುನ್ನಡೆಗೆ ಕಾರಣವಾಯಿತು. 84ನೇ ನಿಮಿಷದಲ್ಲಿ ರಾಯ್ ಕೃಷ್ಣ ಪಾಸ್ ಮಾಡಿದ ಚೆಂಡನ್ನು ಗೋಲಾಗಿ ಪರಿವರ್ತಿಸಿದ ಸುನಿಲ್ ಚೆಟ್ರಿ ತಂಡವನ್ನು ಫೈನಲ್ಗೇರಿಸಿದರು.
ಶನಿವಾರ 2ನೇ ಸೆಮೀಸ್ನಲ್ಲಿ ಒಡಿಶಾ ಹಾಗೂ ನಾರ್ಥ್‌ಈಸ್ಟ್ ಯುನೈಟೆಡ್ ಸೆಣಸಾಡಲಿದ್ದು, ಗೆಲ್ಲುವ ತಂಡದ ವಿರುದ್ಧ ಏಪ್ರಿಲ್ 25ರಂದು ಬಿಎಫ್ಸಿ ಫೈನಲ್ನಲ್ಲಿ ಸೆಣಸಲಿದೆ.
ಆರ್ಚರಿ ವಿಶ್ವಕಪ್: ಭಾರತ ಕಾಂಪೌಂಡ್ ತಂಡ ಫೈನಲ್‌ಗೆ
ಅಂಟಾಲ್ಯ(ಟರ್ಕಿ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ನಲ್ಲಿ ಭಾರತದ ಕಾಂಪೌಂಡ್ ಮಿಶ್ರ ತಂಡ ಫೈನಲ್ ಪ್ರವೇಶಿಸಿದ್ದು, ಮತ್ತೊಂದು ಪದಕ ಖಚಿತವಾಗಿದೆ. ಗುರುವಾರ ಪುರುಷರ ರೀಕವ್‌ರ್ ತಂಡ ಕೂಡಾ ಫೈನಲ್ಗೇರಿತ್ತು. ಶುಕ್ರವಾರ ಜ್ಯೋತಿ ಸುರೇಖಾ ಹಾಗೂ ಓಜಸ್ ಜೋಡಿ ಕಾಂಪೌಂಡ್ ವಿಭಾಗದಲ್ಲಿ 3 ಪಂದ್ಯಗಳ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೇರಿತು.
ಭಾರತದಲ್ಲಿ ಧೋನಿಗಿಂತ ದೊಡ್ಡ ಕ್ರಿಕೆಟಿಗ ಮತ್ತೊಬ್ಬರಿಲ್ಲ: ಹರ್ಭಜನ್ ಸಿಂಗ್
ಮೊದಲೆರಡು ಪಂದ್ಯಗಳಲ್ಲಿ ಲುಕ್ಸಂಬಗ್‌ರ್ ಹಾಗೂ ಫ್ರಾನ್ಸ್ ವಿರುದ್ಧ ಗೆದ್ದರೆ, ಸೆಮಿಫೈನಲ್ನಲ್ಲಿ ಮಲೇಷ್ಯಾ ಜೋಡಿಯನ್ನು ಮಣಿಸಿತು. ಶನಿವಾರ ಫೈನಲ್ನಲ್ಲಿ ಚೈನೀಸ್ ತೈಪೆ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಾಡಲಿದೆ. ಇದೇ ವೇಳೆ ಅತನು ದಾಸ್-ಭಾಜನ್ ಕೌರ್ ಅವರನ್ನೊಳಗೊಂಡ ರೀಕವ್‌ರ್ ಮಿಶ್ರ ತಂಡ ವಿಭಾಗದಲ್ಲಿ ಮೊದಲ ಸುತ್ತಲ್ಲೇ ಸೋತರು.
ಮುಂದಿನ ತಿಂಗಳು ರಾಜ್ಯ ಯುವ ಬಾಸ್ಕೆಟ್ಬಾಲ್
ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆ(ಕೆಎಸ್ಬಿಎ) ಮೇ ತಿಂಗಳ ಮೊದಲ ವಾರ ಅಂಡರ್-16 ಬಾಲಕ, ಬಾಲಕಿಯರಿಗಾಗಿ ರಾಜ್ಯ ಯುವ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ಆಯೋಜಿಸುತ್ತಿದೆ. ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, 2007ರ ಜನವರಿ 1ರ ಬಳಿಕ ಜನಿಸಿದವರು ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೇ 14ಕ್ಕೆ ರಾಜ್ಯ ಫುಟ್ಬಾಲ್ ರೆಫ್ರಿಗಳ ಅರ್ಹತಾ ಪರೀಕ್ಷೆ
ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್ಎಫ್ಎ)ಯು ಫುಟ್ಬಾಲ್ ರೆಫ್ರಿ ಆಗ ಬಯಸುವ ಆಸಕ್ತರಿಗೆ ಮೇ 14ರಂದು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಅರ್ಹತಾ ಪರೀಕ್ಷೆ ಏರ್ಪಡಿಸಿದೆ. ಇದರ ಭಾಗವಾಗಿ ಮೇ 11ರಿಂದ 13ರ ವರೆಗೆ ತರಬೇತಿ ಶಿಬಿರ ಆಯೋಜಿಸಿದೆ. ಎಸ್ಸೆಸ್ಸೆಲ್ಸಿ ತೇರ್ಗಡೆಗೊಂಡ, ಕರ್ನಾಟಕದ 18ರಿಂದ 35 ವರ್ಷ ವಯೋಮಾನದ ಅಭ್ಯರ್ಥಿಗಳು ಎಐಎಫ್ಎಫ್ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕೆಎಸ್ಎಫ್ಎ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 8660621556, 9535379025 ಸಂಪರ್ಕಿಸಬಹುದು.