ಅನು​ಮತಿ ಇಲ್ಲದೇ ಸೌದಿ​ಗೆ ತೆರ​ಳಿದ ಲಿಯೋನೆಲ್ ಮೆಸ್ಸಿ ಅಮಾ​ನ​ತು!

ಪಿ​ಎ​ಸ್‌​ಜಿ ಕ್ಲಬ್‌ಗೆ ಮಾಹಿತಿ ಸೌದಿಗೆ ತೆರಳಿದ ಲಿಯೋನೆಲ್ ಮೆಸ್ಸಿ
ಪ್ಯಾರಿಸ್ ಸೇಂಟ್ ಜರ್ಮೈನ್ ತಂಡ ಪ್ರತಿನಿಧಿಸುತ್ತಿರುವ ಮೆಸ್ಸಿ
ಮೆಸ್ಸಿ ಅವರಿಗೆ ಪಿಎಸ್‌ಜಿ ತಂಡ 2 ವಾರಗಳ ಕಾಲ ಅಮಾನತು
 

Paris Saint Germain ban on Lionel Messi for unauthorised Saudi trip kvn

ಪ್ಯಾರಿ​ಸ್‌(ಮೇ.04): ಮಾಹಿತಿ ನೀಡದೆ ಸೌದಿ ಅರೇಬಿಯಾಕ್ಕೆ ತೆರಳಿದ ಕಾರಣ ಲಿಯೋನೆಲ್‌ ಮೆಸ್ಸಿಯನ್ನು ಫ್ರಾನ್ಸ್‌ನ ಫುಟ್ಬಾಲ್‌ ಕ್ಲಬ್‌ ಪ್ಯಾರಿಸ್‌ ಸೇಂಟ್‌ ಜರ್ಮೈನ್‌(ಪಿ​ಎ​ಸ್‌​ಜಿ​) ತಂಡ 2 ವಾರಗಳ ಕಾಲ ಅಮಾನತುಗೊಳಿಸಿದೆ. ಸೌದಿಗೆ ತೆರ​ಳಲು ಲಿಯೋನೆಲ್ ಮೆಸ್ಸಿ ಮಾಡಿದ್ದ ಮನವಿಯನ್ನು ಕ್ಲಬ್‌ ತಿರಸ್ಕರಿಸಿತ್ತು. ಆದರೂ ಮೆಸ್ಸಿ ತಂಡದ ಅಭ್ಯಾಸ ಶಿಬಿರಕ್ಕೆ ಗೈರಾಗಿ ಸೌದಿಗೆ ತೆರ​ಳಿ​ದ್ದರು ಎನ್ನ​ಲಾ​ಗಿದೆ. 

ಲಿಯೋನೆಲ್ ಮೆಸ್ಸಿ 2021ರಲ್ಲಿ ಪಿಎ​ಸ್‌ಜಿ ಸೇರ್ಪ​ಡೆ​ಗೊಂಡಿದ್ದರು. ಈ ಋುತು​ವಿ​ನಲ್ಲಿ ಅವರ ಒಪ್ಪಂದ ಅಂತ್ಯ​ಗೊ​ಳ್ಳ​ಲಿದ್ದು, ಒಪ್ಪಂದ ನವೀ​ಕ​ರಿ​ಸುವ ಸಾಧ್ಯತೆ ಕಡಿಮೆ. ಈ ನಡುವೆ ಅವರು ಸೌದಿ​ಯ ಅಲ್‌-ಹಿಲಾಲ್‌ ಕ್ಲಬ್‌ ಸೇರ್ಪ​ಡೆ​ಯಾ​ಗುವ ಬಗ್ಗೆ ವರದಿ​ಯಾ​ಗಿದ್ದು, ಕ್ಲಬ್‌ ಜೊತೆ ಮಾತು​ಕ​ತೆ​ಗೆಂದೇ ಸೌದಿಗೆ ತೆರ​ಳಿ​ದ್ದರು ಎಂದು ಹೇಳ​ಲಾ​ಗು​ತ್ತಿ​ದೆ. ಕ್ಲಬ್‌ ಮೆಸ್ಸಿಗೆ ವಾರ್ಷಿಕ 400 ಮಿಲಿಯನ್‌ ಯುರೋ (ಅಂದಾಜು 3,611 ಕೋಟಿ ರು.) ಆಫರ್‌ ನೀಡಿದೆ ಎಂದು ಕಳೆದ ತಿಂಗಳು ವರದಿಯಾಗಿತ್ತು.

ವಿಶ್ವ ಬಾಕ್ಸಿಂಗ್‌: ಭಾರ​ತ​ದ ನಿಶಾಂತ್‌ ಪ್ರಿ ಕ್ವಾರ್ಟ​ರ್‌​ಗೆ

ತಾಷ್ಕೆಂಟ್‌: ಇಲ್ಲಿ ನಡೆಯುತ್ತಿರುವ ಪುರುಷರ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನ 71 ಕೆ.ಜಿ. ವಿಭಾಗದಲ್ಲಿ ಭಾರ​ತದ ತಾರಾ ಬಾಕ್ಸರ್‌ ನಿಶಾಂತ್‌ ದೇವ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬುಧ​ವಾರ ಮೊದಲ ಸುತ್ತಿನ ಪಂದ್ಯ​ದಲ್ಲಿ 2021ರ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಅಜರ್‌ಬೈಜಾನ್‌ನ ಸರ್ಖಾನ್‌ ವಿರುದ್ಧ 5-0 ಅಂತ​ರ​ದಲ್ಲಿ ಗೆಲುವು ಸಾಧಿ​ಸಿ​ದರು. ಅಂತಿಮ 16ರ ಸುತ್ತಿ​ನಲ್ಲಿ ಅವರು ದ.ಕೊ​ರಿ​ಯಾದ ಲೀ ಸಾಂಗ್ಮಿನ್‌ ವಿರುದ್ಧ ಸೆಣ​ಸ​ಲಿ​ದ್ದಾರೆ. 

Wrestlers Protest: ಕುಸ್ತಿ​ಪ​ಟು​ಗ​ಳ ಭೇಟಿ​ಯಾ​ದ ಪಿ.ಟಿ. ಉಷಾ!

ಗುರು​ವಾರ ಭಾರ​ತದ ನಾಲ್ವರು ಬಾಕ್ಸ​ರ್‌​ಗಳು ಕಣ​ಕ್ಕಿ​ಳಿ​ಯ​ಲಿ​ದ್ದಾರೆ. ದಾಖ​ಲೆಯ 6 ಬಾರಿ ಏಷ್ಯನ್‌ ಪದಕ ವಿಜೇತ ಶಿವ ಥಾಪ(63.5 ಕೆ.ಜಿ.), ಗೋವಿಂದ್‌ ಸಹಾ​ನಿ​(48 ಕೆ.ಜಿ.), ನರೇಂದರ್‌(92+ ಕೆ.ಜಿ.) ಹಾಗೂ ದೀಪಕ್‌ ಕುಮಾರ್‌(51 ಕೆ.ಜಿ.+)ಸ್ಪರ್ಧಿ​ಸ​ಲಿ​ದ್ದು, ಗೆಲು​ವಿನ ನಿರೀ​ಕ್ಷೆ​ಯ​ಲ್ಲಿ​ದ್ದಾರೆ.

ಆರ್ಚರಿ: ಭಾರ​ತಕ್ಕೆ ಮತ್ತೆ ಆರು ಪದ​ಕಗಳು ಖಚಿತ

ತಾಷ್ಕೆಂಟ್‌: ಆರ್ಚರಿ ಏಷ್ಯಾಕಪ್‌ 2ನೇ ಹಂತದಲ್ಲಿ ಭಾರತೀಯರು ಪ್ರಾಬಲ್ಯ ಮುಂದು​ವ​ರಿ​ಸಿದ್ದು, ಕಾಂಪೌಂಡ್‌ ವಿಭಾ​ಗ​ದಲ್ಲಿ ಕ್ಲೀನ್‌​ಸ್ವೀಪ್‌ ನಿರೀ​ಕ್ಷೆ​ಯ​ಲ್ಲಿ​ದ್ದಾರೆ. ಜೊತೆಗೆ ರೀಕವ್‌ರ್‍ ವಿಭಾ​ಗ​ದಲ್ಲಿ ಮತ್ತೆ​ರ​ಡು ಪದ​ಕ​ಗ​ಳನ್ನು ಖಚಿ​ತ​ಪ​ಡಿ​ಸಿ​ದ್ದಾರೆ. ಪುರು​ಷರ ಕಾಂಪೌಡ್‌ ವೈಯಕ್ತಿಕ ವಿಭಾ​ಗ​ದಲ್ಲಿ ಅಭಿ​ಷೇಕ್‌ ಶರ್ಮಾ ಹಾಗೂ ಅಮಿತ್‌ ಫೈನ​ಲ್‌​ಗೇ​ರಿದ್ದು, ಕುಶಾಲ್‌ ದಲಾಲ್‌ ಕಂಚಿನ ಪದ​ಕಕ್ಕೆ ಸ್ಪರ್ಧಿ​ಸ​ಲಿ​ದ್ದಾ​ರೆ. 

ಮಹಿ​ಳೆ​ಯರ ಕಾಂಪೌಂಡ್‌ ವಿಭಾ​ಗ​ದಲ್ಲಿ ರಜಿನೀ ಹಾಗೂ ಪ್ರಗತಿ ಫೈನ​ಲ್‌​ನಲ್ಲಿ ಪರ​ಸ್ಪರ ಸೆಣ​ಸಾ​ಡ​ಲಿದ್ದು, ಪರ್‌​ನೀತ್‌ ಕೌರ್‌ ಕಂಚಿ​ಗಾಗಿ ಆಡ​ಲಿ​ದ್ದಾರೆ. ಇದೇ ವೇಳೆ ರೀಕರ್ವ್‌ ವೈಯ​ಕ್ತಿಕ ಪುರು​ಷರ ವಿಭಾ​ಗ​ದಲ್ಲಿ ಮೃನಾಲ್‌ ಚೌಹಾಣ್‌ ಫೈನಲ್‌ ಪ್ರವೇ​ಶಿ​ಸಿ​ದ್ದು, ಮಹಿ​ಳೆಯರ ವಿಭಾ​ಗ​ದಲ್ಲಿ ಸಂಗೀತಾ ಫೈನಲ್‌ಗೇರಿ​ದ್ದಾರೆ. ಮಂಗ​ಳ​ವಾರ ಭಾರತ ತಂಡ ವಿಭಾಗದ ನಾಲ್ಕೂ ಸ್ಪರ್ಧೆಗಳಲ್ಲಿ ಫೈನಲ್‌ಗೇರಿತ್ತು.

Latest Videos
Follow Us:
Download App:
  • android
  • ios